Pastor John Jebaraj: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ತಲೆಮರೆಸಿಕೊಂಡಿದ್ದ ಪಾದ್ರಿ ಜಾನ್ ಜೆಬರಾಜ್ ಪೊಲೀಸ್ ಬಲೆಗೆ
Pastor John Jebaraj Arrested: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಲೆಮರೆಸಿಕೊಂಡಿದ್ದ ಕೊಯಂಬತ್ತೂರಿನ ಕ್ರಿಶ್ಚಿಯನ್ ಧರ್ಮಗುರು ಪಾದ್ರಿ ಜಾನ್ ಜೆಬರಾಜ್ ಕೇರಳದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಜಾನ್ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ.

ಬಂಧನಕ್ಕೊಳಗಾದ ಪಾದ್ರಿ ಜಾನ್ ಜೆಬರಾಜ್.

ತಿರುವನಂತಪುರಂ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಲೆಮರೆಸಿಕೊಂಡಿದ್ದ ಕ್ರಿಶ್ಚಿಯನ್ ಧರ್ಮಗುರು ಪಾದ್ರಿ ಜಾನ್ ಜೆಬರಾಜ್ (Pastor John Jebaraj) ಕೇರಳದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ (Pastor John Jebaraj Arrested). ತಮಿಳುನಾಡಿನ ಕೊಯಂಬತ್ತೂರು ಮೂಲದ ಜಾನ್ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ. ಶನಿವಾರ (ಏ. 12) ಮುನ್ನಾರ್‌ನಲ್ಲಿ ಈತನನ್ನು ಬಂಧಿಸಲಾಗಿದೆ. ಕೊಯಂಬತ್ತೂರಿನ ಕಿಂಗ್ಸ್ ಜನರೇಷನ್ ಚರ್ಚ್‌ನಲ್ಲಿ ಪಾದ್ರಿಯಾಗಿದ್ದ ಈತನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ತಿಂಗಳಿನಿಂದ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್‌ಗಳನ್ನು ಹೊಂದಿರುವ 37 ವರ್ಷದ ಜಾನ್ ಜೆಬರಾಜ್ ಹಲವು ತಿಂಗಳಿಂದ ತಲೆ ಮರೆಸಿಕೊಂಡಿದ್ದ. ಕೊಯಮತ್ತೂರಿನ ಸೆಂಟ್ರಲ್ ಆಲ್ ವುಮೆನ್ ಠಾಣೆಯ ಪೊಲೀಸರು ಆತನನ್ನು ಮುನ್ನಾರ್‌ನಲ್ಲಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಈ ಹಿಂದೆ ಕೊಯಮತ್ತೂರು ನಗರ ಪೊಲೀಸರು ಆತನ ಪತ್ತೆಗೆ ಅನೇಕ ತಂಡಗಳನ್ನು ರಚಿಸಿದ್ದರು. ಜೆಬರಾಜ್ ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ನೋಟಿಸ್ ಸಹ ಹೊರಡಿಸಲಾಗಿತ್ತು.
ಜೆಬರಾಜ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾದ್ರಿ ಜಾನ್ ಜೆಬರಾಜ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ ವಿಡಿಯೊ ಇಲ್ಲಿದೆ:
Christian pastor John Jebaraj has been arrested under POCSO Act for sexually assaulting two minor girls aged 17 & 14 at his residence in Coimbatore.
— BALA (@erbmjha) April 13, 2025
See how he is smiling shamelessly. pic.twitter.com/RV4sDW5yIN
ಈ ಸುದ್ದಿಯನ್ನೂ ಓದಿ: Viral News: ಅಯೋಧ್ಯೆಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆಯ ವಿಡಿಯೊ ರೆಕಾರ್ಡ್ ಮಾಡಿದ ಕಿಡಿಗೇಡಿ- ಆಮೇಲೆ ನಡೆದಿದ್ದೇ ಬೇರೆ!
ಏನಿದು ಪ್ರಕರಣ?
ವರದಿಗಳ ಪ್ರಕಾರ ಜೆಬರಾಜ್ ಕಳೆದ ವರ್ಷ ಮೇಯಲ್ಲಿ ಕೊಯಂಬತ್ತೂರಿನಲ್ಲಿರುವ ತನ್ನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ. ಈ ಪೈಕಿ ಓರ್ವ ಸಂತ್ರಸ್ತೆ ಈ ವಿಚಾರವನ್ನು ಮನೆಯವರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ʼʼ2024ರ ಮೇ 21ರಂದು ತನ್ನ ಜಿಎನ್ ಮಿಲ್ಸ್ ನಿವಾಸದಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಜಾನ್ ಜೆಬರಾಜ್ 17 ಮತ್ತು 14 ವರ್ಷದ ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇತ್ತೀಚೆಗೆ ಈ ಬಗ್ಗೆ ಬಾಯ್ಬಿಟ್ಟಿದ ಸಂತ್ರಸ್ತೆಯೊಬ್ಬಳು ಏ. 5ರಂದು ದೂರು ದಾಖಲಿಸಿದ್ದಳುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಜೆಬರಾಜ್ ತಮಿಳುನಾಡಿನಿಂದ ಪರಾರಿಯಾಗಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ. ಇನ್ಸ್‌ಪೆಕ್ಟರ್ ಅರ್ಜುನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆತನನ್ನು ಮುನ್ನಾರ್‌ನಲ್ಲಿ ಪತ್ತೆ ಹಚ್ಚಿದೆ.
ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ ಜೆಬರಾಜ್, ಇದು ವಿಚ್ಛೇದಿತ ಪತ್ನಿಯ ಕೈವಾಡವಿದೆ ಎಂದು ಆರೋಪಿಸಿದ್ದಾನೆ.
ಪಂಜಾಬ್‌ನಲ್ಲೂ ನಡೆದಿತ್ತು ಇದೇ ರೀತಿಯ ಘಟನೆ
ಇತ್ತೀಚೆಗೆ ಪಂಜಾಬ್‌ನಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2018ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಪಾದ್ರಿ ಬಜಿಂದರ್ ಸಿಂಗ್‌ಗೆ ಕೆಲವು ದಿನಗಳ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಬಜಿಂದರ್ ಸಿಂಗ್ ವಿದೇಶಕ್ಕೆ ಕರೆದೊಯ್ಯುವ ಆಮಿಷವೊಡ್ಡಿ ತನ್ನ ಮೇಲೆ ಮೊಹಾಲಿ ಮನೆಯಲ್ಲಿ ಅತ್ಯಾಚಾರ ಎಸಗಿದ್ದ ಎಂದು ಅಪ್ರಾಪ್ತೆಯೊಬ್ಬಳು ದೂರು ನೀಡಿದ್ದಳು. ಈ ಕೃತ್ಯದ ವಿಡಿಯೊವನ್ನು ಚಿತ್ರೀಕರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದೂ ಸಂತ್ರಸ್ತೆ ತಿಳಿಸಿದ್ದಳು.