ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jasprit Bumrah: ಬುಮ್ರಾ ಇಲ್ಲದ ಟೆಸ್ಟ್‌ ಪಂದ್ಯಗಳಲ್ಲಿ ಭಾರತಕ್ಕೆ ಹೆಚ್ಚು ಗೆಲುವು!; ಇಲ್ಲಿದೆ ಅಂಕಿ-ಅಂಶ

ಸಾಮಾಜಿಕ ಮಾಧ್ಯಮದಲ್ಲಿ ಒಂದು ಅಂಕಿ ಅಂಶ ವೈರಲ್ ಆಗಿದ್ದು, ದಿನೇಶ್ ಕಾರ್ತಿಕ್ ಅವರ ವ್ಯಾಖ್ಯಾನದ ಸಮಯದಲ್ಲಿ ಪ್ರಸಾರವಾದ ಸುದ್ದಿ ಇದಾಗಿದೆ. ಬುಮ್ರಾ ಚೊಚ್ಚಲ ಪಂದ್ಯ ಆಡಿದಾಗಿನಿಂದ, ಆಡುವ ಹನ್ನೊಂದರಲ್ಲಿ ಅವರಿಲ್ಲದ ಭಾರತೀಯ ತಂಡದ ದಾಖಲೆ ಉತ್ತಮವಾಗಿದೆ ಎಂದು ಇದು ತೋರಿಸುತ್ತದೆ.

ಬುಮ್ರಾ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ ಭಾರತಕ್ಕೆ ಹೆಚ್ಚು ಸೋಲು!

Profile Abhilash BC Jul 11, 2025 2:18 PM

ಲಂಡನ್‌: ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲೂ ಭಾರತದ ಬೌಲಿಂಗ್‌ ಪಡೆ ಮೊನಚು ದಾಳಿ ಸಂಘಟಿಸಿ ಆಂಗ್ಲರನ್ನು ಮಣಿಸಿತ್ತು. ಲಾರ್ಡ್ಸ್‌ ಟೆಸ್ಟ್‌ಗೆ ಬುಮ್ರಾ ಮರಳಿದ್ದಾರೆ. ಮೊದಲ ದಿನದಾಟದಲ್ಲಿ ಒಂದು ವಿಕೆಟ್‌ ಕೂಡ ಕಿತ್ತಿದ್ದಾರೆ. ಇದೀಗ ಬುಮ್ರಾ ಇಲ್ಲದೆ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಅತ್ಯಧಿಕ ಗೆಲುವು ಸಾಧಿಸಿದೆ ಎಂಬ ಅಂಕಿ ಅಂಶಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಒಂದು ಅಂಕಿ ಅಂಶ ವೈರಲ್ ಆಗಿದ್ದು, ದಿನೇಶ್ ಕಾರ್ತಿಕ್ ಅವರ ವ್ಯಾಖ್ಯಾನದ ಸಮಯದಲ್ಲಿ ಪ್ರಸಾರವಾದ ಸುದ್ದಿ ಇದಾಗಿದೆ. ಬುಮ್ರಾ ಚೊಚ್ಚಲ ಪಂದ್ಯ ಆಡಿದಾಗಿನಿಂದ, ಆಡುವ ಹನ್ನೊಂದರಲ್ಲಿ ಅವರಿಲ್ಲದ ಭಾರತೀಯ ತಂಡದ ದಾಖಲೆ ಉತ್ತಮವಾಗಿದೆ ಎಂದು ಇದು ತೋರಿಸುತ್ತದೆ.

ಹೌದು, ಜನವರಿ 2018 ರಲ್ಲಿ ಬುಮ್ರಾ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ, ಅವರು ಭಾರತ ಪರ ಒಟ್ಟು 46 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಭಾರತ 20 ಪಂದ್ಯಗಳನ್ನು ಗೆದ್ದಿದೆ ಮತ್ತು 22 ಪಂದ್ಯಗಳನ್ನು ಸೋತಿದೆ. ಐದು ಪಂದ್ಯ ಡ್ರಾ ಗೊಂಡಿದೆ. ಬುಮ್ರಾ ಆಡಿದಾಗ ಭಾರತದ ಗೆಲುವಿನ ಶೇಕಡಾವಾರು 43%. ಅದೇ ಅವಧಿಯಲ್ಲಿ, ಭಾರತವು ಬುಮ್ರಾ ಇಲ್ಲದೆ ಒಟ್ಟು 27 ಟೆಸ್ಟ್‌ಗಳನ್ನು ಆಡಿದೆ. ಇದರಲ್ಲಿ 19 ಗೆಲುವುಗಳು, ಐದು ಸೋಲುಗಳು ಮತ್ತು ಮೂರು ಡ್ರಾಗಳೊಂದಿಗೆ 70% ಗೆಲುವಿನ ಶೇಕಡಾವಾರು ಹೊಂದಿದೆ.



ಬುಮ್ರಾ ಆಡಿರುವ 46 ಪಂದ್ಯಗಳಲ್ಲಿ (ಲಾರ್ಡ್ಸ್ ಟೆಸ್ಟ್‌ಗೆ ಮುನ್ನ) 34 ಪಂದ್ಯಗಳು ಏಷ್ಯಾದ ಹೊರಗೆ ನಡೆದಿದ್ದು, ಅವುಗಳಲ್ಲಿ 34 ಪಂದ್ಯಗಳು ಸೆನಾ ದೇಶಗಳಲ್ಲಿ ನಡೆದಿವೆ. ಒಟ್ಟಾರೆಯಾಗಿ ಈ ಅಂಕಿ ಅಂಶಗಳ ಪ್ರಕಾರ ನೆಟ್ಟಿಗರು ಬುಮ್ರಾ ಇಲ್ಲದ ಟೆಸ್ಟ್‌ ಪಂದ್ಯ ಭಾರತಕ್ಕೆ ಅದೃಷ್ಟ ಎನ್ನಲಾರಂಭಿಸಿದ್ದಾರೆ. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಬುಮ್ರಾ ಒಂದೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದು ಭಾರತ ಇನಿಂಗ್ಸ್‌ ಮುನ್ನಡೆ ಕಾಯ್ದುಕೊಂಡರೂ ಕೂಡ ಕೊನೆಗೆ ಸೋಲು ಕಂಡಿತ್ತು.