ಕುಂಬಾರ ಜಾಗೃತಿ ಸಮಾವೇಶ ಯಶಸ್ವಿಗೆ ಕರೆ
ಮುದ್ದೇಬಿಹಾಳ: ಜುಲೈ 23 ರಂದು ಬೆಂಗಳೂರುನಲ್ಲಿ ಕುಂಬಾರ ,ಕುಲಾಲ,ಪ್ರಜಾಪತಿ ಜಾಗೃತಿ ಸಮಾವೇಶ ಶಕ್ತಿ ಪ್ರದರ್ಶನ ಸಮಾವೇಶ ಯಶಸ್ವಿ ಗೊಳಿಸುವಂತೆ ಕರ್ನಾಟಕ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ ಅವರು ಸಮಾಜದ ಬಾಂಧವರಿಗೆ ಕರೆ ನೀಡಿದ್ದಾರೆ.
Read This
ನಿರ್ಮಾಪಕ ಮಣಿರತ್ನಂಗೆ ಕರೋನಾ ವೈರಸ್ ಸೋಂಕು ದೃಢ
http://vishwavani.news/producer-maniratnam-face-covid/
ಶತಮಾನಗಳಿಂದ ಕುಂಬಾರ ಸಮಾಜ ಎಲ್ಲಾ ರಂಗಗಳಲ್ಲಿ ಶೈಕ್ಷಣಿಕ ರಾಜಕೀಯವಾಗಿ ಹಿಂದುಳಿದ್ದಿದ್ದು ಸರಕಾರದ ನಮ್ಮ ಸಮಾಜವನ್ನು ಕಡೆಗಣಿಸಿದೆ ,ರಾಜ್ಯದಲ್ಲಿ 25 ಲಕ್ಷಕ್ಕೂ ನಮ್ಮ ಸಮಾಜದವರಿದ್ದರು ನಾವು ಮುಖ್ಯವಾಹಿನಿಗೆ ಬರಲು ಆಗಿಲ್ಲ ಯಾವ ಸರಕಾರಗಳು ಮುಖ್ಯವಾಹಿನಿಗೆ ತರುತಿಲ್ಲ ನಮ್ಮ ಸಮಾಜದ ಏಳ್ಗೆಗೆ ಕುರಿತು ಹಲವು ಬೇಡಿಕೆ ಈಡೇರಿಕೆಗೆ ಹಲವಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರು ಸರಕಾರ ನಮ್ಮ ಸಮಾಜದ ಮನವಿಯನ್ನು ಕಣ್ತರೆದು ನೋಡುತ್ತಿಲ್ಲ.
ಅದಕ್ಕಾಗಿ ನಮ್ಮ ಕುಂಬಾರ ಸಮಾಜದ ಶ್ರೀಗಳ ನೇತೃತ್ವದಲ್ಲಿ ಕುಂಬಾರ ಶಕ್ತಿ ಪ್ರದರ್ಶನ ಮತ್ತು ಜಾಗೃತಿ ಸಮಾವೇಶ ಜುಲೈ 23 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಬೆಳಿಗ್ಗೆ 10-30ಕ್ಕೆ ಈ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಲು ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.