Monday, 13th May 2024

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗಿಲ್ಲ

– ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ
– ಡಿ.ಕೆ. ಶಿವಕುಮಾರ್ ಅತ್ಯಂತ ಪ್ರಾಮಾಣಿಕ ರಾಜಕಾರಣಿ

ಹೊಸಪೇಟೆ(ವಿಜಯನಗರ): ಮಹಾರಾಷ್ಟ್ರದ ನವಾಬ್ ಮಲ್ಲಿಕ್ ಭ್ರಷ್ಟ್ರಾಚಾರದಲ್ಲಿ ತೊಡಗಿ ಗಳಿಸಿದ ಆಸ್ತಿ ಮೇಲೆ ಈಡಿ, ಐಟಿ ದಾಳಿ ದಾಳಿ ನಡೆಸಿ ಇದೀಗ ಅವರು ರಾಜಿನಾಮೆ ನೀಡದೇ ಜೈಲಿನಲ್ಲಿ ಇದ್ದಾರೆ. ಆದರೆ ಕರ್ನಾಟದಲ್ಲಿ ಮಾತ್ರ ಕಾಂಗ್ರೆಸ್ಸಿಗರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಅವರಿಂದ ಕಾಂಗ್ರೆಸ್‍ನವರು ರಾಜೀನಾಮೆ ಕೊಡಿಸಲಿ ಅಥವಾ ಆ ಸರ್ಕಾರದಿಂದ ಕಾಂಗ್ರೆಸ್ ಹೊರಬರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ಹೊಸಪೇಟೆ ನಗರದಲ್ಲಿ ಶನಿವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ಈ ದೇಶದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹಗರಣ ಗಳನ್ನು ಮಾಡಿರುವ ಕಾಂಗ್ರೆಸ್‍ನವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ದೇಶದಲ್ಲಿ ಅನೇಕ ಹಗರಣಗಳು ಕಾಂಗ್ರೆಸ್ ಅಧಿಕಾರವಧಿಯಲ್ಲಿ ನಡೆದಿವೆ. ಅವುಗಳ ಬಗ್ಗೆ ತನಿಖೆ ಕೈಗೊಂಡರೆ ಕಾಂಗ್ರೆಸ್ಸಿನ ಎಲ್ಲರೂ ಜೈಲಿನಲ್ಲಿ ಇರಬೇಕಾಗುತ್ತದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣ ಸೇರಿ ಲಕ್ಷಾಂತರ ಕೋಟಿ ರುಪಾಯಿಗಳ ಹಗರಣದ ಆರೋಪ ಅವರುಗಳ ಮೇಲೆ ಇದೆ. ಕಾಂಗ್ರೆಸ್‍ನವರು ಮೊದಲು ಈ ಹಗರಣಗಳ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಡಿ.ಕೆ. ಶಿವಕುಮಾರ್ ಈ ದೇಶಕ್ಕಾಗಿ ಹೋರಾಡಿದ ಮನೆತನದವರು, ಸ್ವಾತಂತ್ರ್ಯಾಕ್ಕಾಗಿ ತ್ಯಾಗ ಮಾಡಿದವರು. ಅಂತವರಿಗೆ ಭ್ರಷ್ಟ್ಟಾಚಾರ ಎಂದು ಏನೆ ಚಿದೇ ಗೊತ್ತಿಲ್ಲ. ಬಹಳ ಪ್ರಮಾಣಿಕ ರಾಜಕಾರಣಿಯಾಗಿದ್ದಾರೆ. ಸಧ್ಯ ರಾಜ್ಯದಲ್ಲಿ ಇರುವ ರಾಜಕಾರಣಿಗಳ ಪೈಕಿ ಅವರೊಬ್ಬರೇ ಅತ್ಯಂತ ಪ್ರಾಮಾಣಿಕರು ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಡಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ಪಾತ್ರ ಇಲ್ಲದಿದ್ದರೂ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರವಾಗದೇ ಇರಲಿ ಎನ್ನುವ ಕಾರಣಕ್ಕೆ ನೈತಿಕ ಹ್ರೆಣೆ ಹೊತ್ತು ರಾಜಿನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರ್ಯಾರ ಕೈವಾಡ ಇದೆ ಎಂದು ತನಿಖೆಯಿಂದ ತಿಳಿಯಬೇಕಿದೆ. ಕಾಂಗ್ರೆಸಿರ ಕೈವಾಡದ ಬಗ್ಗೆ ನಮಗೆ ಅನುಮಾನಗಳಿವೆ. ತನಿಖೆ ಬಳಿಕ ಇವೆಲ್ಲವುಗಳೂ ಹೊರಬರಲಿವೆ. ಈಗಾಗಲೇ ಈಶ್ವರಪ್ಪ ಅವರು ರಾಜಿನಾಮೆ ನೀಡಿದ್ದು, ಅವರ ಬಂಧನದ ಅಗತ್ಯವಿಲ್ಲ. ಭ್ರಷ್ಟಾಚಾರ, ಕೊಲೆ ಆರೋಪ ಇರುವ ಕಾಂಗ್ರೆಸ್‍ನವರು ಬೇಲ್ ಮೇಲೆ ಇದ್ದಾರೆ. ಸಂತೋಷ್ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲದಿದ್ದರೂ ಆರೋಪ ಬಂದ ಕಾರಣಕ್ಕೆ ಹಾಗೂ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎನ್ನುವ ಕಾರಣಕ್ಕೆ ರಾಜಿನಾಮೆ ನೀಡಿದ್ದಾರೆ ಎಂದರು.

error: Content is protected !!