ಕೊಲ್ಹಾರ: ಆಕ್ಸಫರ್ಡ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮಾರ್ಚ್ 19 ರಂದು ಪಟ್ಟಣದ ಬನಶಂಕರಿ ದೇವಸ್ಥಾನದ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಅಧ್ಯಕ್ಷ ಎ.ಎನ್ ಫರಾಶವಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಅಲ್ ಹಾಜ್ ನಜೀರ ಅಹ್ಮದ ಪಟೇಲ್ ಹಾಗೂ ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮಿಜಿಗಳು, ಉದ್ಘಾಟಕರಾಗಿ ಡಿ.ಸಿ.ಸಿ ಬ್ಯಾಂಕ ನಿರ್ದೇಶಕಿ ಸಂಯುಕ್ತ ಪಾಟೀಲ್, ಅಧ್ಯಕ್ಷತೆ ಅಬ್ದುಲ್ ರಜಾಕ ಫರಾಶಾವಾಲೆ, ಜ್ಯೋತಿ ಬೆಳಗಿಸುವವರು ಅಲ್ ಹಾಜ್ ಹಸನಸಾಬ ಶೇಖ, ಮುಖ್ಯ ಅತಿಥಿಗಳಾಗಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಆರ್&ಆರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಟಿ ಬಬಲೇಶ್ವರ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಸಹಿತ ಅನೇಕರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.