Saturday, 27th April 2024

ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ: ಶಿವಾನಂದ ಪಾಟೀಲ್

ಕೊಲ್ಹಾರ: ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು ಮತಕ್ಷೇತ್ರಕ್ಕೆ ಅಪಾರ ವಾದ ಅನುದಾನ ತರುವ ಮೂಲಕ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ಕೂಡ ಅನುದಾನ ತಂದು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ರೈತರ ಕಷ್ಟಕ್ಕೆ ಸ್ಪಂದಿಸುವ ಗುಣ ಬಿಜೆಪಿ ನಾಯಕರಲ್ಲಿ ಇಲ್ಲ ಈರುಳ್ಳಿ ದರ ಕುಸಿದು ಅನ್ನದಾತ ಸಂಕಷ್ಟದಲ್ಲಿರುವುದು ಬಿಜೆಪಿ ಡಬಲ್ ಇಂಜಿನ್ ಸರಕಾರಕ್ಕೆ ಕಾಣುತ್ತಿಲ್ಲ. ರಾಜ್ಯದ ಕಷ್ಟ ಕಾಲದಲ್ಲಿ, ಕರೋನಾ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನಾಯಕರು ಈ ಕಡೆ ತಲೆ ಹಾಕಲಿಲ್ಲ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಮಗಾರಿಗಳ ಉದ್ಘಾಟನೆಗಳ ನೆಪದಲ್ಲಿ ಮೋದಿ, ಅಮೀತ್ ಷಾ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ವ್ಯಂಗವಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನೀರಾವರಿಗೆ ವರ್ಷಕ್ಕೆ ೪೦ ಸಾವಿರ ಕೋಟಿಯಂತೆ ೫ ವರ್ಷಗಳಲ್ಲಿ ೨ ಲಕ್ಷ ಕೋಟಿ ಅನುದಾನ ಮೀಸಲಿಡಲು ಕಾಂಗ್ರೆಸ್ ಪಕ್ಷ ನಿರ್ಧಿರಿಸಿದೆ ಎಂದರು.

ಕಾಂಗ್ರೆಸ್ ಸರಕಾರ ಇದ್ದಾಗ ಪ್ರತಿ ತಿಂಗಳು ಪ್ರತಿಯೊಬ್ಬರಿಗೆ ೧೦ ಕೆಜಿ ಅಕ್ಕಿ ನೀಡುವುದನ್ನು ಕಡಿತಗೊಳಿಸಿ ಬಿಜೆಪಿ ಸರ್ಕಾರ ೫ ಕೆಜಿಗೆ ತಂದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದರು.

ಸಮಗ್ರ ವಿಜಯಪುರ ಜಿಲ್ಲೆಗೆ ನೀರು ಹರಿಸಿದ ಕೀರ್ತಿ ಬ.ಬಾಗೇವಾಡಿ ತಾಲ್ಲೂಕಿಗೆ ಸಲ್ಲುತ್ತದೆ ಬಂಜರು ನಾಡಾಗಿದ್ದ ವಿಜಯಪುರ ಜಿಲ್ಲೆಯನ್ನು ಬಂಗಾರದ ಬೆಳೆ ತೆಗೆಯುತ್ತಿರುವುದರ ಹಿಂದೆ ಬ.ಬಾಗೇವಾಡಿ ತಾಲ್ಲೂಕಿನ ಪಾತ್ರ ಅಪಾರವಾಗಿದೆ ಎಂದರು.

ಮುಳವಾಡ ಏತನೀರಾವರಿಗೆ ದಿ.ರಾಮಕೃಷ್ಣ ಹೆಗಡೆಯವರು ಶಂಕುಸ್ಥಾಪನೆ ನೆರವೇರಿಸಿದ್ದರು, ಜಿಲ್ಲೆಯ ನಾಯಕರಾಗಿದ್ದ ಎಂ.ಕೆ ಉಪಾದ್ಯಯರು, ಮುರಗೆಪ್ಪಣ್ಣ ಸುಗಂಧಿಯವರು, ಹುಜರೆ ಎನ್ನುವ ನಾಯಕರ ನಿರಂತರ ಹೋರಾಟ ಜೊತೆಗೆ ಗುಲಾಟಿ ಕಮಿಷನ್ ಜಾರಿಗೆ ಆಗ್ರಹಿಸಿದ್ದರು ಎಂದು ಸ್ಮರಿಸಿಕೊಂಡರು ಒಟ್ಟಾರೆ ಅವಳಿ ಜಿಲ್ಲೆಯ ಸಮಗ್ರ ನೀರಾವರಿಯ ಕನಸು ಕನಸಾಗಿಯೇ ಉಳಿದಿತ್ತು ಮುಂದೆ ಅದನ್ನು ಕಾರ್ಯರೂಪಕ್ಕೆ ತರುವ ಸೌಭಾಗ್ಯ ನಮಗೆ ಸಿಕ್ಕಿದ್ದು ನಮ್ಮ ಪುಣ್ಯ ಎಂದರು. ನನಗೆ ಜಂಭಕೊಚ್ಚಿಕೊಳ್ಳುವುದು ಗೊತ್ತಿಲ್ಲ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣಮುಂದಿವೆ ಎಂದು ಹೇಳಿದರು.

ಮಸೂತಿಯ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು, ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಪಿ ಪಾಟೀಲ್, ತಾನಾಜಿ ನಾಗರಾಳ, ಸಂತೋಷ ಗಣಾಚಾರಿ, ಪ್ರದೀಪ ಪಾಟೀಲ್ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಫರೀದಾಬಾನು ಪಠಾಣ, ಶಿವಾನಂದ ವಠಾರ, ಭೂಸೇನಾ ಅಧಿಕಾರಿ ಆನಂದ ಇತರರು ಇದ್ದರು.

error: Content is protected !!