ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಂಡಿಯನ್‌ ಸ್ಟೈಲ್‌ನಲ್ಲಿ ಅಮೆರಿಕದಲ್ಲೂ ಗೃಹ ಪ್ರವೇಶ; ಈ ವಿಡಿಯೊಗೆ ನೆಟ್ಟಿಗರು ಫುಲ್‌ ಫಿದಾ!

ಭಾರತೀಯ ಮೂಲದ ಕುಟುಂಬವೊಂದು ಯುಎಸ್‍ನಲ್ಲಿರುವ ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಅಲಂಕೃತಗೊಂಡ ಹಸುವನ್ನು ಕರೆತಂದು ಪೂಜೆ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ. ಅಂದಹಾಗೇ, ಈ ಹಸುವಿನ ಹೆಸರು ಬಹುಲಾ.

ಇಂಡಿಯನ್‌ ಸ್ಟೈಲ್‌ನಲ್ಲಿ ಅಮೆರಿಕದಲ್ಲೂ ಗೃಹ ಪ್ರವೇಶ

Profile pavithra Mar 5, 2025 8:52 AM

ವಾಷಿಂಗ್ಟನ್‌: ಹೊಸ ಮನೆಯ ಗೃಹಪ್ರವೇಶ ಮಾಡುವಾಗ ಲಕ್ಷ್ಮಿದೇವಿಯ ಸ್ವರೂಪವಾದ ಹಸುಕರುವನ್ನು ಮೊದಲು ಮನೆಯೊಳಗೆ ಕರೆದುಕೊಂಡು ಹೋಗಿ ಪೂಜೆ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಇದು ಭಾರತದಲ್ಲಿ ಎಲ್ಲಾ ಕಡೆ ಕಂಡುಬರುವಂತಹ ಸಾಮಾನ್ಯವಾದ ಆಚರಣೆಯಾಗಿದೆ. ಆದರೆ ಭಾರತೀಯ ಮೂಲದ ಕುಟುಂಬವೊಂದು ಸಾಂಪ್ರದಾಯಿಕ ಗೃಹಪ್ರವೇಶದ ಆಚರಣೆಗಾಗಿ ಯುಎಸ್‍ನಲ್ಲಿರುವ ತಮ್ಮ ಮನೆಗೆ ಅಲಂಕೃತಗೊಂಡ ಹಸುವನ್ನು ಕರೆತಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.

ವೈರಲ್ ಆದ ವಿಡಿಯೊದಲ್ಲಿ ಅಲಂಕರಿಸಿದ ಹಸುವನ್ನು ಅರ್ಚಕರು ಒಳಗೆ ಕರೆದೊಯ್ಯುತ್ತಿರುವುದು ಸೆರೆಯಾಗಿದೆ. ಇದರ ದೇಹವನ್ನು ಕುಂಕುಮ ಹಸ್ತಮುದ್ರಿಕೆಗಳಿಂದ ಅಲಂಕರಿಸಲಾಗಿತ್ತು ಮತ್ತು ಅದರ ಹಿಂಭಾಗವನ್ನು ಸಾಂಪ್ರದಾಯಿಕ ಬಟ್ಟೆಯಿಂದ ಮುಚ್ಚಲಾಗಿತ್ತು. ಹಸುವನ್ನು ನಿಧಾನವಾಗಿ ಮನೆಗೆ ಕರೆದುಕೊಂಡು ಹೋಗಿ ಅದಕ್ಕೆ ತಿನ್ನಲು ಆಹಾರವನ್ನು ನೀಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

"ಗೃಹಪ್ರವೇಶದ ಸಮಯದಲ್ಲಿ ಹಸುವನ್ನು ಹೊಸ ಮನೆಗೆ ತರುವುದು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ ಮತ್ತು ದೇವರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಎಲ್ಲೆಡೆ ಅನುಸರಿಸುತ್ತಿರುವುದನ್ನು ನೋಡಲು ಖುಷಿಯಾಗಿದೆ" ಎಂದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಮರು ಪೋಸ್ಟ್ ಮಾಡಿದ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. "ಇದು ಅದ್ಭುತ ಮತ್ತು ಹೃದಯಸ್ಪರ್ಶಿ ಕ್ಷಣವಾಗಿದೆ. ಈ ಪದ್ಧತಿ ದೀಪಾವಳಿಗೆ ಮಾತ್ರವೇ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಮಾತ್ರವೇ?" ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಕ್ಯಾಲಿಫೋರ್ನಿಯಾದ ಕೊಲ್ಲಿ ಪ್ರದೇಶದಲ್ಲಿ ಶ್ರೀ ಸುರಭಿ ಗೋ ಕ್ಷೇತ್ರ ಎಂಬ ಗೋಶಾಲೆ ಇದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗೋ ಸಂರಕ್ಷಣೆಗಾಗಿ ಕೆಲಸ ಮಾಡುತ್ತದೆ. ಗೃಹಪ್ರವೇಶ ಮಾಡಿದ ಹಸುವಿನ ಹೆಸರು ಬಹುಲಾ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಮೋದಕ, ಲಡ್ಡು ಬದಲಿಗೆ ಗಣಪತಿಗೆ ಇದನ್ನು ಅರ್ಪಿಸಿದ ಆಸ್ಟ್ರೇಲಿಯಾದ ಮಹಿಳೆ; ವಿಡಿಯೊ ಇದೆ

ಇತ್ತೀಚೆಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಪೂಜೆಯ ವೇಳೆ ವಿಘ್ನಗಳನ್ನು ನಿವಾರಿಸುವ ವಿಘ್ನೇಶನಿಗೆ ಒಂದು ಪ್ಲೇಟ್ ಚಾಕೊಲೇಟ್ ಕೇಕ್ ಅನ್ನು ಅರ್ಪಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತನ್ನ ಪೋಸ್ಟ್‌ನಲ್ಲಿ ಆಕೆ ತನ್ನನ್ನು ಸನಾತನ ಧರ್ಮವನ್ನು ಅನುಸರಿಸುವ ಆಸ್ಟ್ರಿಯಾದ ಮಹಿಳೆ ಎಂದು ಪರಿಚಯಿಸಿಕೊಂಡಿದ್ದಾಳೆ ಮತ್ತು ಗಣೇಶನಿಗೆ ನೈವೇದ್ಯದ ರೀತಿಯಲ್ಲಿ ಅರ್ಪಿಸಿದ ರುಚಿಕರವಾದ ಕೇಕ್‍ನ ಎರಡು ಪೋಟೊಗಳನ್ನು ಹಂಚಿಕೊಂಡಿದ್ದಾಳೆ. ಒಂದು ಪೋಟೊದಲ್ಲಿ ಅವಳು ಪೂಜೆ ಮಾಡುವ ವಿವಿಧ ದೇವರ ಚಿತ್ರಗಳು ಮತ್ತು ವಿಗ್ರಹಗಳಿತ್ತು.

ಇನ್ನೊಂದು ಪೋಟೊದಲ್ಲಿ ಬಾಯಲ್ಲಿ ನೀರೂರಿಸುವ ಚಾಕೊಲೇಟ್‌ ಕೇಕ್‍ ಇತ್ತು. ನೆಟ್ಟಿಗರು ಸನಾತನ ಧರ್ಮದ ಬಗ್ಗೆ ಅವಳಿಗಿದ್ದ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಶುದ್ಧ ಭಕ್ತಿಯಿಂದ ಅರ್ಪಿಸುವ ಯಾವುದೇ ಆಹಾರವನ್ನು ದೈವವು ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ. "ದೇವರಿಗೆ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ನೀರನ್ನು ಭಕ್ತಿಯಿಂದ ಅರ್ಪಿಸಿದರೆ ಸಾಕು ಭಕ್ತನು ಪ್ರೀತಿಯಿಂದ ಅರ್ಪಿಸಿದ ಆ ವಸ್ತುವನ್ನು ಶುದ್ಧ ಮನಸ್ಸಿನಿಂದ ಸಂತೋಷದಿಂದ ಸ್ವೀಕರಿಸುತ್ತಾನೆ” ಎಂದಿದ್ದಾರೆ. ಆದರೆ ಗಣೇಶನಿಗೆ ಸಚೇರ್ಟೋರ್ಟ್(ಚಾಕೊಲೇಟ್‌ ಕೇಕ್‌) ಅರ್ಪಿಸುವುದು ಉತ್ತಮ" ಎಂದು ಭಗವದ್ಗೀತೆಯ ಒಂದು ಶ್ಲೋಕವನ್ನು ಉಲ್ಲೇಖಿಸಿ ಒಬ್ಬರು ಬರೆದಿದ್ದಾರೆ.