Viral Video: ಮೋದಕ, ಲಡ್ಡು ಬದಲಿಗೆ ಗಣಪತಿಗೆ ಇದನ್ನು ಅರ್ಪಿಸಿದ ಆಸ್ಟ್ರೇಲಿಯಾದ ಮಹಿಳೆ; ವಿಡಿಯೊ ಇದೆ
ಆಸ್ಟ್ರೇಲಿಯಾದ ಗೌರಿ ಎಂಬ ಮಹಿಳೆಯೊಬ್ಬಳು ಗಣಪತಿಗೆ ಮೋದಕ ಮತ್ತು ಲಡ್ಡುಗಳಂತಹ ಸಿಹಿತಿಂಡಿಗಳ ಬದಲು ಒಂದು ಪ್ಲೇಟ್ ಚಾಕೊಲೇಟ್ ಕೇಕ್ ಅನ್ನು ಅರ್ಪಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್(Viral Video)ಆಗಿದೆ.


ಸಾಂಪ್ರದಾಯಿಕವಾಗಿ, ಪೂಜಾ ಸಮಯದಲ್ಲಿ ಗಣಪತಿಗೆ ಮೋದಕ ಮತ್ತು ಲಡ್ಡುಗಳಂತಹ ಸಿಹಿತಿಂಡಿಗಳನ್ನು ನೈವೇದ್ಯದ ರೀತಿಯಲ್ಲಿ ಅರ್ಪಿಸಲಾಗುತ್ತದೆ. ಆದರೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಗಣಪತಿಗೆ ಅರ್ಪಿಸಿದ ಸಿಹಿ ತಿಂಡಿ ಯಾವುದೆಂದು ತಿಳಿದರೆ ನೀವು ಶಾಕ್ ಆಗ್ತೀರಿ! ತನ್ನನ್ನು ಗೌರಿ ಎಂದು ಗುರುತಿಸಿಕೊಂಡಿರುವ ಮಹಿಳೆಯೊಬ್ಬಳು 'ಪೂಜೆ' ಸಮಯದಲ್ಲಿ ದೇವತೆಗಳಿಗೆ ಸ್ಥಳೀಯ ಭಕ್ಷ್ಯಗಳನ್ನು ಅರ್ಪಿಸುತ್ತೇನೆ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾಳೆ. ಅದರಂತೆ ಈ ಬಾರಿ, ಅವಳು ಪೂಜೆಯ ವೇಳೆ ವಿಘ್ನಗಳನ್ನು ನಿವಾರಿಸುವ ವಿಘ್ನೇಶನಿಗೆ ಒಂದು ಪ್ಲೇಟ್ ಚಾಕೊಲೇಟ್ ಕೇಕ್ ಅನ್ನು ಅರ್ಪಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ತನ್ನ ಪೋಸ್ಟ್‌ನಲ್ಲಿ ಆಕೆ ತನ್ನನ್ನು ಸನಾತನ ಧರ್ಮವನ್ನು ಅನುಸರಿಸುವ ಆಸ್ಟ್ರಿಯಾದ ಮಹಿಳೆ ಎಂದು ಪರಿಚಯಿಸಿಕೊಂಡಿದ್ದಾಳೆ ಮತ್ತು ಗಣೇಶನಿಗೆ ನೈವೇದ್ಯದ ರೀತಿಯಲ್ಲಿ ಅರ್ಪಿಸಿದ ರುಚಿಕರವಾದ ಕೇಕ್‍ನ ಎರಡು ಪೋಟೊಗಳನ್ನು ಹಂಚಿಕೊಂಡಿದ್ದಾಳೆ. ಒಂದು ಪೋಟೊದಲ್ಲಿ ಅವಳು ಪೂಜೆ ಮಾಡುವ ವಿವಿಧ ದೇವರ ಚಿತ್ರಗಳು ಮತ್ತು ವಿಗ್ರಹಗಳಿತ್ತು. ಇನ್ನೊಂದು ಪೋಟೊದಲ್ಲಿ ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಕೇಕ್ ಇತ್ತು.
"ಆಸ್ಟ್ರಿಯಾದ ಸನಾತನ ಧರ್ಮಿಯಾದ ನಾನು ಆಸ್ಟ್ರಿಯಾದ ಆಹಾರವನ್ನು ದೇವರಿಗೆ ಅರ್ಪಿಸುತ್ತೇನೆ. ಇದು ಭಗವಾನ್ ಶ್ರೀ ಗಣೇಶನಿಗೆ ಚಾಕೊಲೇಟ್ ಕೇಕ್" ಎಂದು ಅವಳು ಎಕ್ಸ್‌ನಲ್ಲಿ ಬರೆದಿದ್ದಾಳೆ. ಇನ್ನು ಆಕೆ ಹಂಚಿಕೊಂಡ ಪೋಟೊದಲ್ಲಿ ಗಣಪತಿಯ ವಿಗ್ರಹವು ಸ್ಪಷ್ಟವಾಗಿ ಕಾಣದಿದ್ದರೂ, ಗಣಪತಿಯನ್ನು ಗಾಜಿನ ಹಿಂದೆ ಇರಿಸಲಾಗಿದೆ, ಮತ್ತಿದು ಗಣಪತಿಯ ತಲೆಕೆಳಗಾದ ಚಿತ್ರವನ್ನು ತೋರಿಸುತ್ತಿದೆ ಎನ್ನಲಾಗಿದೆ.
ಈ ಪೋಸ್ಟ್ ವೈರಲ್ ಆಗಿದ್ದು, 20,000 ಲೈಕ್ಸ್ ಮತ್ತು ನೂರಾರು ಕಾಮೆಂಟ್‍ಗಳನ್ನು ಪಡೆದಿದೆ. ಕೇಕ್ ಮೊಟ್ಟೆರಹಿತ ಮತ್ತು ಆಲ್ಕೋಹಾಲ್ ಮುಕ್ತವಾಗಿದೆಯೇ ಎಂದು ನೆಟ್ಟಿಗರು ಆಕೆಯನ್ನು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ಅವಳು, "ಖಂಡಿತವಾಗಿಯೂ ಸಮುದ್ರಾಹಾರ, ವೈನ್ ಮತ್ತು ವಿಸ್ಕಿ ಕೇಕ್‍ನಲ್ಲಿವೆ" ಎಂದಿದ್ದಾಳೆ. ಇದಕ್ಕೆ ಹಲವರು ಇದನ್ನು ಗಣೇಶನ ತಂದೆ ಮಹಾದೇವ್ ಅವರು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಆಕೆ ಶೀಘ್ರದಲ್ಲೇ, "ಜೈ ಶಿವ ಶಂಭೋ" ಎಂದು ಬರೆದಿದ್ದಾಳೆ. ಕೆಲವು ನೆಟ್ಟಿಗರಯ ಗಣೇಶನ 'ವಾಹನ' ಇಲಿ ಕೂಡ ಕೇಕ್ ಅರ್ಪಿಸಿದ್ದಕ್ಕೆ ಸಂತೋಷಪಡುತ್ತದೆ ಎಂದು ತಿಳಿಸಿದ್ದಾರೆ.
ನೆಟ್ಟಿಗರು ಸನಾತನ ಧರ್ಮದ ಬಗ್ಗೆ ಅವಳಿಗಿದ್ದ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಶುದ್ಧ ಭಕ್ತಿಯಿಂದ ಅರ್ಪಿಸುವ ಯಾವುದೇ ಆಹಾರವನ್ನು ದೈವವು ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ. "ದೇವರಿಗೆ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ನೀರನ್ನು ಭಕ್ತಿಯಿಂದ ಅರ್ಪಿಸಿದರೆ ಸಾಕು ಭಕ್ತನು ಪ್ರೀತಿಯಿಂದ ಅರ್ಪಿಸಿದ ಆ ವಸ್ತುವನ್ನು ಶುದ್ಧ ಮನಸ್ಸಿನಿಂದ ಸಂತೋಷದಿಂದ ಸ್ವೀಕರಿಸುತ್ತಾನೆ” ಎಂದಿದ್ದಾರೆ. ಆದರೆ ಗಣೇಶನಿಗೆ ಸಚೇರ್ಟೋರ್ಟ್(ಚಾಕೊಲೇಟ್ ಕೇಕ್) ಅರ್ಪಿಸುವುದು ಉತ್ತಮ" ಎಂದು ಭಗವದ್ಗೀತೆಯ ಒಂದು ಶ್ಲೋಕವನ್ನು ಉಲ್ಲೇಖಿಸಿ ಒಬ್ಬರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ದೇವಸ್ಥಾನದೊಳಗೆ ಕೇಕ್ ಕಟ್ ಮಾಡಿ ಬರ್ತ್‌ಡೇ ಆಚರಿಸಿಕೊಂಡ ಮಾಡೆಲ್; ಹುಚ್ಚಾಟಕ್ಕೆ ನೆಟ್ಟಿಗರು ಗರಂ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಾಡೆಲ್ ಒಬ್ಬಳು ದೇವಸ್ಥಾನದ ನಿಯಮಗಳನ್ನು ರಾಜಾರೋಷವಾಗಿ ಮುರಿದಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ.ದೇವಸ್ಥಾನದ ಒಳಗೆ, ದೇವರ ಎದುರಿನಲ್ಲೇ ಮಾಡೆಲ್ ಕೇಕ್ ಕಟ್ ಮಾಡಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಒಂದು ಕಡೆ ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಸನಾತನ ಧರ್ಮದ ಬಗ್ಗೆ ಆಸ್ತಕ್ತಿ ವಹಿಸುತ್ತಿದ್ದರೆ, ಇನ್ನೊಂದು ಕಡೆ ನಮ್ಮವರೇ ನಮ್ಮ ಧರ್ಮ, ಸಂಪ್ರದಾಯಗಳನ್ನು ಮರೆತು ದೇವಸ್ಥಾನ, ವಿದ್ಯಾದೇಗುಲದಲ್ಲಿ ಕೇಕ್, ಬೀರ್ ಸೇವಿಸಿ ಮೋಜು ಮಾಡಿದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ.