ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramayana First Look Teaser: ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ʼರಾಮಾಯಣʼ ಫಸ್ಟ್‌ ಲುಕ್‌ ಟೀಸರ್‌ ಅನಾವರಣ; ಯಶ್‌ ಫ್ಯಾನ್ಸ್‌ ಫುಲ್ ಫಿದಾ!

Ramayana First Look Teaser: ಜುಲೈ 3 ರಂದು ಭಾರತದ ಮುಂಬೈ, ದೆಹಲಿ, ಬೆಂಗಳೂರು ಸೇರಿ ಒಂಬತ್ತು ನಗರಗಳಲ್ಲಿ ಏಕಕಾಲದಲ್ಲಿ ರಾಮಾಯಣ: ದಿ ಇಂಟ್ರೊಡಕ್ಷನ್ ಫಸ್ಟ್‌ ಗ್ಲಿಂಪ್ಸ್‌ ಅನಾವರಣಗೊಳಿಸಲಾಗಿತ್ತು. ಇದಾದ ಬಳಿಕ ಜುಲೈ 4 ರಂದು, ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನ ಡಿಜಿಟಲ್ ಬಿಲ್‌ಬೋರ್ಡ್‌ನಲ್ಲಿ ʼರಾಮಾಯಣʼ ಫಸ್ಟ್‌ ಲುಕ್‌ ಟೀಸರ್ ಪ್ರದರ್ಶನಗೊಂಡಿದೆ.

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ʼರಾಮಾಯಣʼ ಫಸ್ಟ್‌ ಲುಕ್‌ ಅನಾವರಣ

Profile Prabhakara R Jul 5, 2025 5:42 PM

ಬೆಂಗಳೂರು: ಭಾರತ ದೇಶದ ಒಂಬತ್ತು ನಗರಗಳಲ್ಲಿ ಫಸ್ಟ್‌ ಲುಕ್‌ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ʼರಾಮಾಯಣʼ ಚಿತ್ರದ ಟೀಸರ್ (Ramayana First Look Teaser) ಅನಾವರಣಗೊಂಡಿದೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಂಗ್‌ ಸ್ಟಾರ್‌ ಯಶ್‌ ನಟಿಸುತ್ತಿದ್ದು, ಚಿತ್ರದ ಫಸ್ಟ್‌ ಗ್ಲಿಂಪ್ಸ್‌ ಕಂಡು ನ್ಯೂಯಾರ್ಕ್ ಜನರು ಫುಲ್ ಫಿದಾ ಆಗಿದ್ದಾರೆ.

ramayana (1)

ಜುಲೈ 3 ರಂದು, ಭಾರತದ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್ ಮತ್ತು ಕೊಚ್ಚಿಯಲ್ಲಿ ಏಕಕಾಲದಲ್ಲಿ ರಾಮಾಯಣ: ದಿ ಇಂಟ್ರೊಡಕ್ಷನ್ ಫಸ್ಟ್‌ ಗ್ಲಿಂಪ್ಸ್‌ ಅನಾವರಣಗೊಳಿಸಲಾಗಿತ್ತು. ಇದಾದ ಬಳಿಕ ಜುಲೈ 4 ರಂದು, ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನ ಡಿಜಿಟಲ್ ಬಿಲ್‌ಬೋರ್ಡ್‌ನಲ್ಲಿ ʼರಾಮಾಯಣʼ ಫಸ್ಟ್‌ ಲುಕ್‌ ಟೀಸರ್ ಅನಾವರಣಗೊಂಡು, ಸಿನಿ ಪ್ರಿಯರ ಗಮನ ಸೆಳೆದಿದೆ.

ಬಹು ನಿರೀಕ್ಷೆಯ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಚಿತ್ರತಂಡ ಜುಲೈ 3ರಂದು ಗುಡ್‌ನ್ಯೂಸ್‌ ನೀಡಿತ್ತು. ರಾಮಾಯಣದ (Ramayana Movie) ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿತ್ತು. ರಣಬೀರ್ ಕಪೂರ್ (Ranbir Kapoor) , ಯಶ್ (Rocking Star Yash) ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 2026 ರ ದೀಪಾವಳಿಗೆ ತೆರೆಗೆ ಬರಲಿದೆ. ಮಹಾಕಾವ್ಯದ ಪ್ರೋಮೋದ 3 ನಿಮಿಷಗಳ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ramayana (2)

ಈ ಚಿತ್ರವು ನವೆಂಬರ್ 2026 ರಲ್ಲಿ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ನಟ ಯಶ್‌ ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢಸಂಕಲ್ಪ. ರಾಮಾಯಣವನ್ನು ಅತ್ಯಂತ ಗೌರವ ಮತ್ತು ಗೌರವದಿಂದ ಪ್ರಸ್ತುತಪಡಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವದ ಕೆಲವು ಶ್ರೇಷ್ಠರ ಸಹಯೋಗದ ಮೂಲಕ ಫಲಿತಾಂಶ. ಆರಂಭಕ್ಕೆ ಸ್ವಾಗತ. ರಾಮ v/s ರಾವಣ (sic) ನ ಅಮರ ಕಥೆಯನ್ನು ಆಚರಿಸೋಣ" ಎಂದು ಚಿತ್ರತಂಡ ಪೋಸ್ಟ್‌ನಲ್ಲಿ ತಿಳಿಸಿದೆ.

ರಾಮನ ಪಾತ್ರದಲ್ಲಿ ರಣಬೀರ್‌ ಕಪೂರ್‌ ಅಭಿನಯಿಸಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಹನುಮಾನ್‌ ಆಗಿ ಸನ್ನಿ ಡಿಯೋಲ್‌ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಲಕ್ಷ್ಮಣನಾಗಿ ರವಿ ದುಬೆ ಪಾತ್ರ ನಿರ್ವಹಿಸಿದ್ದಾರೆ. ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ಕೂಡ ಇದ್ದಾರೆ.‌

ಈ ಸುದ್ದಿಯನ್ನೂ ಓದಿ | Sai Pallavi: ರಾಮಾಯಣ ಸಿನಿಮಾ ಬಗ್ಗೆ ನಟಿ ಸಾಯಿ ಪಲ್ಲವಿ ಫಸ್ಟ್‌ ರಿಯಾಕ್ಷನ್‌!

ಅಭಿಮಾನಿಗಳು ಫಿದಾ!

ರಾಮಾಯಣದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ರಾಮನಾಗಿ ಕಾಣಿಸಿಕೊಂಡ ರಣಬೀರ್‌ ಕಪೂರ್‌ ಅವರ ಫಿಟ್‌ನೆಸ್‌ ಅನ್ನು ಅಭಿಮಾನಿಗಳು ಹೊಗಳಿದ್ದಾರೆ. ಅದೇ ರೀತಿ ರಾವಣನ ಪಾತ್ರದಲ್ಲಿರುವ ಯಶ್‌ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ರಾಮಾಯಣ' ಚಿತ್ರವು 'ಕಲ್ಕಿ 2898 AD' (ರೂ. 600 ಕೋಟಿ), 'RRR' ಮತ್ತು 'ಆದಿಪುರುಷ' (ರೂ. 550 ಕೋಟಿ) ಚಿತ್ರಗಳ ನಿರ್ಮಾಣ ವೆಚ್ಚವನ್ನು ಮೀರಿಸಿದೆ. ಈ ಚಿತ್ರವನ್ನು ಸುಮಾರು 835 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ.