ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಒಂದು ವರ್ಷ ಬಟ್ಟೆಗಳಿಗೆ ಇಸ್ತ್ರಿ ಮಾಡುವುದಿಲ್ಲ... ಇಂಧನ ಸಚಿವರ ಈ ಶಪಥ ಯಾಕಾಗಿ?

ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು ವಿದ್ಯುತ್ ಉಳಿಸಲು ಒಂದು ವರ್ಷದವರೆಗೆ ತಮ್ಮ ಬಟ್ಟೆಗಳಿಗೆ ಇಸ್ತ್ರಿ ಮಾಡದೆ ಧರಿಸುವುದಾಗಿ ಪ್ರತಿಜ್ಞೆಯನ್ನು ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಗ್ವಾಲಿಯರ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತೋಮರ್ ಈ ಹೇಳಿಕೆ ನೀಡಿದ್ದಾರೆ.

ಬಟ್ಟೆಗೆ ಇಸ್ತ್ರಿಯೇ ಹಾಕುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಇಂಧನ ಸಚಿವ!

Profile pavithra Mar 5, 2025 4:28 PM

ಭೋಪಾಲ್: ಇಂದಿನ ದಿನಗಳಲ್ಲಿ ವಿದ್ಯುತ್ ಇಲ್ಲದೇ ಯಾವುದೇ ಕೆಲಸ ಸುಲಭವಾಗಿ ಆಗುವುದಿಲ್ಲ. ಅದರಲ್ಲೂ ಬಟ್ಟೆಗಳಿಗೆ ಇಸ್ತ್ರಿ ಇಲ್ಲದೆ ಕೆಲವರು ಮನೆಯ ಹೊಸ್ತಿಲು ಕೂಡ ದಾಟುವುದಿಲ್ಲ. ಅಂತಹದರಲ್ಲಿ ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು ಮಾತ್ರ ವಿದ್ಯುತ್ ಉಳಿಸಲು ಒಂದು ವಿಶಿಷ್ಟವಾದ ಪ್ರತಿಜ್ಞೆಯನ್ನು ಮಾಡಿದ್ದಾರೆ. ಅವರು ಒಂದು ವರ್ಷದವರೆಗೆ ತಮ್ಮ ಬಟ್ಟೆಗಳಿಗೆ ಇಸ್ತ್ರಿ ಮಾಡದೆ ಧರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಪ್ರತಿಬಾರಿ ತಮ್ಮ ವಿಭಿನ್ನವಾದ ನಿರ್ಧಾರಗಳಿಂದ ಸುದ್ದಿಯಾಗಿದ್ದ ಸಚಿವರು ಈ ಬಾರಿ, ಈ ವಿಶಿಷ್ಟ ಪ್ರತಿಜ್ಞೆ ಮಾಡಿ ರಾಜ್ಯದಾದ್ಯಂತ ಸುದ್ದಿಯಾಗಿದ್ದಾರೆ.

ತೋಮರ್ ಪ್ರಕಾರ, ಇಸ್ತ್ರಿ ಮಾಡುವುದನ್ನು ಬಿಟ್ಟುಬಿಡುವುದರಿಂದ ಪ್ರತಿದಿನ ಅರ್ಧ ಯೂನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ಅವರು ತಮ್ಮ ಮಗಳ ಮದುವೆಯ ದಿನದಂದು ಮಾತ್ರ ಇಸ್ತ್ರಿ ಹಾಕಿದ ಬಟ್ಟೆಗಳನ್ನು ಧರಿಸುವುದಾಗಿ ಹೇಳಿದ್ದಾರೆ. ಇದರಿಂದ ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಯು ಇಂಧನ ಬಿಕ್ಕಟ್ಟನ್ನು ಎದುರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ಅವರು ಭವಿಷ್ಯಕ್ಕಾಗಿ ಈ ಪ್ರತಿಜ್ಞೆಯನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.



ಮಾಹಿತಿಯ ಪ್ರಕಾರ, ಗ್ವಾಲಿಯರ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತೋಮರ್ ಈ ಹೇಳಿಕೆ ನೀಡಿದ್ದಾರೆ. ನಿರೀಕ್ಷೆಯಂತೆ, ಈ ಕ್ರಮವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ತೋಮರ್ ಅವರ ನಿರ್ಧಾರವನ್ನು ಅಪಹಾಸ್ಯ ಮಾಡಿದೆ. ಇದನ್ನು ಕೇವಲ ಪ್ರಚಾರದ ಸ್ಟಂಟ್ ಎಂದು ಕರೆದಿದೆ. ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ಪಿ.ಸಿಂಗ್ ಇದನ್ನು "ಸಚಿವರ ವೆಬ್ ಸರಣಿ ಗಿಮಿಕ್‍ಗಳ ಮುಂದಿನ ಎಪಿಸೋಡ್" ಎಂದು ಬಣ್ಣಿಸಿದ್ದಾರೆ. ತೋಮರ್ ನಿಜವಾಗಿಯೂ ವಿದ್ಯುತ್ ಉಳಿಸಲು ಬಯಸಿದರೆ, ಅವರು ತಮ್ಮ ಅಧಿಕೃತ ವಾಹನಗಳನ್ನು ತ್ಯಜಿಸಿ ಸೈಕಲ್ ತುಳಿದು ಪ್ರಯಾಣ ಮಾಡಲಿ ಎಂದು ಅವರು ಸಲಹೆ ನೀಡಿದ್ದಾರೆ.

ಸಚಿವರ ಹೇಳಿಕೆಗೆ ನೆಟ್ಟಿಗರು ಸಹ ಪ್ರತಿಕ್ರಿಯಿಸಿದ್ದಾರೆ. ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಮೂಲಭೂತ ಅವಶ್ಯಕತೆ ಎಂದು ಅನೇಕರು ನಂಬುತ್ತಾರೆ. ಇಸ್ತ್ರಿ ಮಾಡುವುದನ್ನು ತಪ್ಪಿಸುವುದು ವಿದ್ಯುತ್ ಬಳಕೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ಕೆಲವರು ವಾದಿಸಿದ್ದಾರೆ. ಚರ್ಚೆಗಳು ಮುಂದುವರಿಯುತ್ತಿದ್ದಂತೆ, ಈ 'ಪ್ರತಿಜ್ಞೆ'ಯಿಂದ ನಿಜವಾಗಿಯೂ ಎಷ್ಟು ವಿದ್ಯುತ್ ಉಳಿಸಬಹುದು ಎಂಬುದನ್ನು ಸಮಯ ಮಾತ್ರ ಹೇಳುತ್ತದೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇದೀಗ, ಸಚಿವ ತೋಮರ್ ಅವರ ಹೇಳಿಕೆ ಖಂಡಿತವಾಗಿಯೂ ಮಧ್ಯಪ್ರದೇಶದಲ್ಲಿ ಎಲ್ಲರ ಗಮನ ಸೆಳೆದಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:PMSGMBY: ʼಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ: 2027ಕ್ಕೆ 1 ಕೋಟಿ ಮನೆಗಳಿಗೆ ಸೌರ ಶಕ್ತಿ ವಿದ್ಯುತ್ ಪೂರೈಕೆ ಗುರಿ

ವಿಶ್ವದ ಅತಿದೊಡ್ಡ ದೇಶೀಯ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಯೋಜನೆ ಎಂದೇ ಖ್ಯಾತಿ ಪಡೆದಿರುವ ʼಸೂರ್ಯ ಘರ್ʼ ಮಾರ್ಚ್ 2027ರ ವೇಳೆಗೆ ಒಂದು ಕೋಟಿ ಮನೆಗಳಿಗೆ ಸೌರಶಕ್ತಿ ಪೂರೈಸುವ ದಿಟ್ಟ ದೃಷ್ಟಿಕೋನದೊಂದಿಗೆ ಮುಂದಡಿ ಇಟ್ಟಿದೆ. ʼಸೂರ್ಯ ಘರ್ʼ ದೇಶದಲ್ಲೀಗ ನವೀಕರಿಸಬಹುದಾದ ಇಂಧನ ಮೂಲಗಳ ಅಳವಡಿಕೆ ಪ್ರೋತ್ಸಾಹಿಸುತ್ತಿದ್ದು, ಭಾರತದಲ್ಲಿ ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿ ಇಂಧನ ಮಿಶ್ರಣಕ್ಕೆ ಅನನ್ಯ ಕೊಡುಗೆ ನೀಡುತ್ತಿದೆ.