Viral Video: ಮಹಾಕುಂಭ ಮೇಳದ ಕರ್ತವ್ಯ ಮುಗಿಸಿದ ಖುಷಿಯಲ್ಲಿ ಆರ್‌ಪಿಎಫ್ ಸಿಬ್ಬಂದಿ... ಮುಗಿಲು ಮುಟ್ಟಿದ ಸಂಭ್ರಮಾಚರಣೆ!
2025ರಲ್ಲಿ ಪ್ರಯಾಗ್‍ರಾಜ್‍ನಲ್ಲಿ ನಡೆದ ಮಹಾಕುಂಭಮೇಳ ಫೆಬ್ರವರಿ 26ರಂದು ಮುಕ್ತಾಯಗೊಂಡಿತ್ತು. ಈ ಕುಂಭಮೇಳ ಮುಕ್ತಾಯಗೊಳ್ಳುತ್ತಿದ್ದಂತೆ, ಈ ಮೇಳದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಗಂಟೆಗಳ ಕಾಲ ಸಮರ್ಪಣೆಯಿಂದ ಕೆಲಸ ಮಾಡಿದ ಆರ್‌ಪಿಎಫ್ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಮುಕ್ತಾಯ ಹೇಳುತ್ತಾ ಅದನ್ನು ಸೆಲೆಬ್ರೆಟ್ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ಸೊಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ 2025ರ ಜನವರಿ 13ರಂದು ಮಹಾ ಕುಂಭಮೇಳ ಶುರುವಾಗಿನಿಂದ ಕುಂಭಮೇಳದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಆರ್‌ಪಿಎಫ್ ಸಿಬ್ಬಂದಿಗಳು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಫೆಬ್ರವರಿ 26ರಂದು ಈ ಮಹಾಕುಂಭಮೇಳ ಮುಕ್ತಾಯಗೊಂಡಿತ್ತು. ಹೀಗಾಗಿ ಸಿಬ್ಬಂದಿಗಳು ತಮ್ಮ ಕೆಲಸಕ್ಕೆ ಮುಕ್ತಾಯ ಹೇಳಿದ್ದಾರೆ. ಮಹಾಕುಂಭ ಮುಕ್ತಾಯಗೊಳ್ಳುತ್ತಿದ್ದಂತೆ ಆರ್‌ಪಿಎಫ್ ಸಿಬ್ಬಂದಿಗಳು ಅದನ್ನು ಸೆಲೆಬ್ರೆಟ್ ಮಾಡಿ ಸಂತೋಷಪಡುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಪ್ರಯಾಗ್‍ರಾಜ್‌ನಲ್ಲಿ ಆಯೋಜಿಸಲಾಗಿದ್ದ 'ಮಹಾಕುಂಭ 2025 ಸಂಪನ್ ಸಮರೋಹ್'ನಲ್ಲಿ ಜನಪ್ರಿಯ ಹಾಡಾದ 'ತು ಲಗವೇಲು ಜಬ್ ಲಿಪಿಸ್ಟಿಕ್'ಗೆ ಆರ್‌ಪಿಎಫ್ ಸಿಬ್ಬಂದಿಗಳು ಸಂಭ್ರಮಿಸುತ್ತಾ ನೃತ್ಯ ಮಾಡಿದ್ದಾರೆ. ಮಹಾಕುಂಭದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಹೆಚ್ಚುವರಿ ಗಂಟೆಗಳ ಕಾಲ ಸಮರ್ಪಣೆಯಿಂದ ಕೆಲಸ ಮಾಡಿದ ಸಿಬ್ಬಂದಿಗಳು ಈ ಆಚರಣೆಗೆ ಅರ್ಹರು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
2 महीने की कड़ी ड्यूटी के बाद महाकुंभ समापन सम्मान समारोह !!
— Sachin Gupta (@SachinGuptaUP) March 4, 2025
📍RPF स्टेशन झूसी, प्रयागराज pic.twitter.com/pDlSChYypm
ಮಹಾ ಕುಂಭಮೇಳ 2025 ಫೆಬ್ರವರಿ 26 ರಂದು ಮುಕ್ತಾಯಗೊಂಡಿತು. ಪವಿತ್ರ ನಗರ ಪ್ರಯಾಗ್‍ರಾಜ್‍ಗೆ ಕಳೆದ ಕೆಲವು ವಾರಗಳಲ್ಲಿ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜನಸಂದಣಿಯನ್ನು ನಿರ್ವಹಿಸುವಲ್ಲಿ ಮತ್ತು ಕಾರ್ಯಕ್ರಮದುದ್ದಕ್ಕೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಆರ್‌ಪಿಎಫ್ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಮಹಾಕುಂಭ ಮೇಳದ ಸಮಯದಲ್ಲಿ ರೈಲ್ವೆ ಮಾರ್ಗದ ಮೂಲಕ ಲಕ್ಷಾಂತರ ಭಕ್ತರು ಆಗಮಿಸಿ ನಿರ್ಗಮಿಸುತ್ತಿರುವುದರಿಂದ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು, ಜನಸಂದಣಿಯನ್ನು ನಿರ್ವಹಿಸುವುದು ಮತ್ತು ಅಪರಾಧ ನಡೆಯುವುದನ್ನು ತಡೆಗಟ್ಟುವುದು ಆರ್‌ಪಿಎಫ್ ಸಿಬ್ಬಂದಿಗಳ ಮೊದಲ ಆದ್ಯತೆಯಾಗಿತ್ತಂತೆ.
ಯಾತ್ರಾರ್ಥಿಗಳನ್ನು ನಿಯಂತ್ರಿಸಲು, ಆರ್‌ಪಿಎಫ್ ಸಿಬ್ಬಂದಿಯನ್ನು ಪ್ರಮುಖ ರೈಲ್ವೆ ನಿಲ್ದಾಣಗಳು, ಪ್ಲಾಟ್‍ಫಾರ್ಮ್‍ಗಳು ಮತ್ತು ಪ್ರವೇಶ-ನಿರ್ಗಮನ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಕಾಲ್ತುಳಿತವನ್ನು ತಡೆಗಟ್ಟಲು ವಿಶೇಷ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‍ಗಳನ್ನು ಜಾರಿಗೆ ತರಲಾಯಿತು. ಆದರೆ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಅಲ್ಲದೇ ಈ ಭದ್ರತಾ ಕರ್ತವ್ಯಗಳ ಜೊತೆಗೆ, ಆರ್‌ಪಿಎಫ್ ಸಿಬ್ಬಂದಿ ಕಳೆದುಹೋದ ಅಥವಾ ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸಹಾಯ ಮಾಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಅವರ ಕುಟುಂಬದವರ ಬಳಿ ತಲುಪಿಸಿದ್ದಾರಂತೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರಲ್ಲಿ ಹೆಚ್ಚಿನವರು ಸಕಾರಾತ್ಮಕ ಪ್ರತಿಕ್ರಿಯೆಗಳ ಮೂಲಕ ಕಾಮೆಂಟ್ ಮಾಡಿದ್ದಾರೆ. "ಯುಪಿ ಪೊಲೀಸರಿಗೆ ನಮಸ್ಕಾರಗಳು, ಮಹಾ ಕುಂಭವನ್ನು ಆಯೋಜಿಸಲು ಅವರು ತುಂಬಾ ಶ್ರಮಿಸಿದ್ದಾರೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಕೆಲವು ಬಳಕೆದಾರರು ತಮ್ಮ ಸಮವಸ್ತ್ರದಲ್ಲಿ ಅಂತಹ ಹಾಡಿಗೆ ಸಿಬ್ಬಂದಿಗಳು ನೃತ್ಯಮಾಡುವುದನ್ನು ನೋಡಿ ಅಸಮಾಧಾನಗೊಂಡರು. "ಖಾಕಿ ಸಮವಸ್ತ್ರದಲ್ಲಿ ಈ ರೀತಿಯ ಹಾಡು ಸೂಕ್ತವಲ್ಲ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಗ್ನಿಶಾಮಕ ದಳ ಸಿಬ್ಬಂದಿಯ ʻಬೆಂಕಿʼ ಡಾನ್ಸ್‌ಗೆ ನೆಟ್ಟಿಗರು ಫುಲ್ ಫಿದಾ!
ಕೇರಳದ ಫೈರ್ ಆ್ಯಂಡ್ ರೆಸ್ಕ್ಯೂ (ಕೊಲ್ಲೆಂಗೋಡ್ ವಿಭಾಗ) ಅಧಿಕಾರಿಗಳು ವಿಶ್ರಾಂತಿಯ ವೇಳೆ ಜನಪ್ರಿಯ ಮಲಯಾಳಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಅಧಿಕಾರಿಗಳ ಡ್ಯಾನ್ಸ್‌ಗೆ ಫಿದಾ ಆಗಿದ್ದಾರೆ. ವೈರಲ್ ವಿಡಿಯೊದಲ್ಲಿ ಅಧಿಕಾರಿಗಳು ಜನಪ್ರಿಯ ಮಲಯಾಳಂ ಹಾಡಿಗೆ ಕುಣಿಯುವ ಮೂಲಕ ತಮ್ಮ ಬಸ್ ಪ್ರಯಾಣವನ್ನು ಎಂಜಾಯ್ ಮಾಡುವುದು ಸೆರೆಯಾಗಿತ್ತು.