ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: ಗೆಳತಿಯ ಬರ್ತ್‍ಡೇ ಸೆಲೆಬ್ರೆಷನ್ ವೇಳೆ ಯೋಧನ ಮೇಲೆ ಭೀಕರ ಹಲ್ಲೆ; ಇಬ್ಬರು ಅರೆಸ್ಟ್‌

ಪಿಎಸಿ ಜವಾನ್ ಆಯುಷ್ ಢಾಕಾ ಗುರುವಾರ(ಫೆಬ್ರವರಿ 20) ಮೀರತ್‍ನ ನೌಚಂಡಿ ಪ್ರದೇಶದ ಸೆಂಟ್ರಲ್ ಮಾರ್ಕೆಟ್‍ನಲ್ಲಿರುವ ಕೆಫೆಯಲ್ಲಿ ತನ್ನ ಗೆಳತಿಯ ಬರ್ತ್‍ಡೇ ಸೆಲೆಬ್ರೆಷನ್ ಪಾರ್ಟಿಗೆ ಹೋಗಿದ್ದು, ಅಲ್ಲಿ ಯುವಕನೊಬ್ಬನ ಜೊತೆ ಜಗಳವಾಡಿದ್ದಾನೆ. ಈ ಕಾರಣ ಕೆಫೆಯ ಹೊರಗೆ ಆ ಯುವಕನ ಗುಂಪು ದೊಣ್ಣೆಯಿಂದ ಆಯುಷ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಆಯುಷ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಫೆಯ ಹೊರಗೆ ಯೋಧನ ಮೇಲೆ ಹಲ್ಲೆ- ವಿಡಿಯೊ ಇದೆ

Profile pavithra Feb 21, 2025 4:11 PM

ಮೀರತ್‍: ಪಿಎಸಿ ಯೋಧ ಆಯುಷ್ ಢಾಕಾ ಮೀರತ್‍ನ ಕೆಫೆಯೊಂದರಲ್ಲಿ ನಡೆದ ತನ್ನ ಗೆಳತಿಯ ಬರ್ತ್‍ಡೇ ಪಾರ್ಟಿ ಮುಗಿಸಿ ಹೊರಬಂದಾಗ ಯುವಕರ ಗುಂಪೊಂದು ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ನೌಚಂಡಿ ಪ್ರದೇಶದ ಸೆಂಟ್ರಲ್ ಮಾರ್ಕೆಟ್‍ನಲ್ಲಿರುವ ಕೆಫೆಯಲ್ಲಿ ಅವನು ತನ್ನ ಗೆಳತಿಯ ಬರ್ತ್‍ಡೇ ಸೆಲೆಬ್ರೆಷನ್‍ಗೆ ಹೋಗಿದ್ದಾಗ ಈ ಘಟನೆ ನಡೆದಿದೆ.ಇಡೀ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ದಾಳಿಯ ಸಮಯದಲ್ಲಿ (ಆರನೇ ಬೆಟಾಲಿಯನ್) ಜವಾನ್ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿತ್ತು.ದೊಣ್ಣೆ ಹಿಡಿದು ಆಯುಷ್ ಮೇಲೆ ದಾಳಿ ನಡೆಸಿ ಅವನ ಕಾರನ್ನು ಧ್ವಂಸಗೊಳಿಸಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದಾಳಿಕೋರರು ಅವನ ಮೇಲೆ ಗುಂಡು ಹಾರಿಸಿದ್ದಾರಂತೆ. ಘಟನೆಯ ದೃಶ್ಯಾವಳಿಗಳಲ್ಲಿಗುಂಡಿನ ಶಬ್ದ ಸಹ ಕೇಳಿದೆ.



ವರದಿ ಪ್ರಕಾರ, ಆಯುಷ್ ತನ್ನ ಸ್ನೇಹಿತರೊಂದಿಗೆ ಮುಸ್ಕಾನ್ ಎಂಬ ಹುಡುಗಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದನಂತೆ. ಪಾರ್ಟಿಯ ಸಮಯದಲ್ಲಿ, ಅತ ಯುವಕನೊಬ್ಬನೊಂದಿಗೆ ಗಲಾಟೆ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ, ಆಯುಷ್ ಕೆಫೆಯ ಹೊರಗೆ ತನ್ನ ಕಾರನ್ನು ಹತ್ತುತ್ತಿದ್ದಾಗ, 6 ಜನರು ಕೈಯಲ್ಲಿ ದೊಣ್ಣೆ ಹಿಡಿದು ಆಯುಷ್ ಮತ್ತು ಅವನ ಸಹಚರರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಆಯುಷ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನಂತೆ. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ದಾಳಿಕೋರರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ತಂಡವು ವೈರಲ್ ವಿಡಿಯೊವನ್ನು ಪರಿಶೀಲಿಸುವುದರ ಮೂಲಕ ಹೆಚ್ಚಿನ ಆರೋಪಿಗಳಿಗಾಗಿ ಹುಡುಕಾಡಿದ್ದಾರೆ.

ಸಂತ್ರಸ್ತನ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ, ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ, ಸಂತ್ರಸ್ತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Dalit Boy Suicide: ಬರ್ತ್ ಡೇ ಪಾರ್ಟಿಗೆಂದು ಕರೆದು ವಿವಸ್ತ್ರಗೊಳಿಸಿ‌ ಹಲ್ಲೆ; ನೊಂದ ಯುವಕ ಆತ್ಮಹತ್ಯೆ

ಉತ್ತರ ಪ್ರದೇಶದ (Uttar Pradesh) ಬಸ್ತಿ (Basti) ಎಂಬಲ್ಲಿ ನಡೆದ ದಲಿತ ದೌರ್ಜನ್ಯ ಘಟನೆಯೊಂದರಲ್ಲಿ ಅಮಾಯಕ ಯುವಕನ ಜೀವ ಬಲಿಯಾಗಿದೆ (Dalit Boy Suicide). ಬರ್ತ್ ಡೇ ಆಚರಣೆಗೆಂದು (Birth Day Celebration) ಹೋಗಿದ್ದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಆತನನ್ನು ತೀವ್ರವಾಗಿ ಅವಮಾನಿಸಿ, ಈ ಘಟನೆಗಳ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಇದನ್ನು ವೈರಲ್ ಮಾಡುವುದಾಗಿ ಆ ಯುವಕನಿಗೆ ಬೆದರಿಸಿದ ಪರಿಣಾಮ ಆತ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಭ್ರಮಾಚರಣೆಯಲ್ಲಿ ದಲಿತ ಯುವಕನಿಗೆ ಯುವಕರ ಗುಂಪು ಥಳಿಸಿ, ಆತನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ನಡೆದುಕೊಂಡಿದೆ ಎಂಬ ಮಾಹಿತಿಗಳೂ ಲಭ್ಯವಾಗಿದೆ.

ಸಂತ್ರಸ್ತ ಯುವಕನ ದುಃಖತಪ್ತ ಕುಟುಂಬದವರು ನೀಡಿರುವ ಮಾಹಿತಿಯಂತೆ, ಡಿ.20ರಂದು ರಾತ್ರಿ ಈ ಯುವಕನನ್ನು ಸ್ಥಳೀಯರೊಬ್ಬರು ಆಯೋಜಿಸಿದ್ದ ಪಾರ್ಟಿಗೆಂದು ಆಹ್ವಾನಿಸಲಾಗಿದೆ. ಇಲ್ಲಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಯುವಕನ ಬಟ್ಟೆಗಳನ್ನು ಕಿತ್ತು ಬಿಸಾಕಿ, ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಇಷ್ಟು ಸಾಲದೆಂಬಂತೆ ನಾಲ್ವರು ಯುವಕರು ಈತನ ಮೇಲೆ ಮೂತ್ರ ವಿಸರ್ಜನೆಯನ್ನೂ ಮಾಡಿ ರಾಕ್ಷಸಿ ಪ್ರವೃತ್ತಿಯನ್ನು ಮೆರೆದಿದ್ದಾರೆ. ಮತ್ತು ಈ ಎಲ್ಲಾ ಕೃತ್ಯಗಳನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.ಈ ಎಲ್ಲಾ ಅವಮಾನಕರ ಘಟನೆಗಳಿಂದ ಶಾಕ್ ಗೆ ಒಳಗಾದ ಆ ಸಂತ್ರಸ್ತ ಯುವಕ ಅಲ್ಲಿಂದ ನೇರವಾಗಿ ಮನೆಗೆ ಬಂದಿದ್ದಾನೆ ಮತ್ತು ಅಲ್ಲಿ ತನ್ನ ಮೇಲೆ ನಡೆದ ಎಲ್ಲಾ ಅವಮಾನಕರ ಘಟನೆಯನ್ನು ಮನೆಯವರಿಗೆ ತಿಳಿಸಿ ಬಳಿಕ ನೇಣಿಗೆ ಕೊರಳೊಡ್ಡಿದ್ದಾನೆ.