Viral Video: ಐಷಾರಾಮಿ ಹೋಟೆಲ್‍ನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಬಿಗ್ ಫೈಟಿಂಗ್; ಏನಿದು ವಿವಾದ?
ಬಿಗ್ ಬಾಸ್ 18ರ ಸ್ಪರ್ಧಿಗಳಾದ ರಜತ್ ದಲಾಲ್ ಅವನನ್ನು ದಿಗ್ವಿಜಯ್ ರಾಠಿ ಕ್ರಿಮಿನಲ್ ಎಂದು ಕರೆದ ವಿಚಾರವಾಗಿ ಇಬ್ಬರು ಐಷಾರಾಮಿ ಹೋಟೆಲ್‍ವೊಂದರಲ್ಲಿ ಜಗಳವಾಡಿದ್ದಾರೆ. ಇದಕ್ಕೆ ಸಮಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ರಜತ್ ಅವನ ಕ್ರೂರ ನಡವಳಿಕೆಯನ್ನು ಕಂಡು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.


ಮುಂಬೈ: ಇತ್ತೀಚೆಗೆ ಬಿಗ್ ಬಾಸ್ 18ರ ಸ್ಪರ್ಧಿಗಳಾದ ರಜತ್ ದಲಾಲ್ ಮತ್ತು ದಿಗ್ವಿಜಯ್ ರಾಠಿ ರಜತ್ ಅವನನ್ನು ಕ್ರಿಮಿನಲ್ ಎಂದು ಕರೆದ ಹೇಳಿಕೆಗಳ ಬಗ್ಗೆ ವಾಗ್ವಾದ ನಡೆಸಿದ್ದಾರೆ. ರಜತ್ ದಿಗ್ವಿಜಯ್‌ಗೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಮತ್ತು ಐಷಾರಾಮಿ ಹೋಟೆಲ್‍ವೊಂದರಲ್ಲಿ ಅವನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ವೈರಲ್ ಆದ ವಿಡಿಯೊದಲ್ಲಿ ದಿಗ್ವಿಜಯ್ ಭುಜದ ಸುತ್ತ ಕೈಯಿಟ್ಟು ನಿಂತು ವಾಗ್ವಾದ ನಡೆಸಿದ ದೃಶ್ಯ ಸೆರೆಯಾಗಿತ್ತು.
ರಜತ್ ಮತ್ತು ದಿಗ್ವಿಜಯ್ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಜಗಳ ನಡೆದ ನಿಖರವಾದ ಸ್ಥಳದ ಬಗ್ಗೆ ಮಾಹಿತಿ ತಿಳಿದಿಲ್ಲ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ರಜತ್ ನಡವಳಿಕೆಯನ್ನು ಕಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಜಗಳದ ಬಗ್ಗೆ ದಿಗ್ವಿಜಯ್ ಮತ್ತು ರಜತ್ ಇಬ್ಬರೂ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
I'm Super Happy we Made a right Guy Winner #KaranVeerMehra
— ICONIC (@Icnoic_77) March 4, 2025
Once a Criminal always a Criminal #DigvijayRathee #DiggyGang pic.twitter.com/wQWptgQpwf
ಸಾರ್ವಜನಿಕವಾಗಿ ಬೆದರಿಕೆ ಮತ್ತು ಹಲ್ಲೆ ನಡೆಸಿದ ಆರೋಪ ರಜತ್ ಅವರ ಮೇಲಿರುವುದು ಇದೇ ಮೊದಲಲ್ಲ. 2024 ರಲ್ಲಿ, ಗುಜರಾತ್‍ನಲ್ಲಿ ಅಪ್ರಾಪ್ತ ವಯಸ್ಕನನ್ನು ಅಪಹರಿಸಿ ಹಲ್ಲೆ ನಡೆಸಿದ ಮತ್ತು ಅವನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಬಿಗ್ ಬಾಸ್ 18 ರಲ್ಲಿದ್ದಾಗ, ರಜತ್ ನಿರೂಪಕ ಸಲ್ಮಾನ್ ಖಾನ್ ಮತ್ತು ಇತರ ಸ್ಪರ್ಧಿಗಳಿಗೆ ತನ್ನ ಜೀವನವನ್ನು ಹೊಸದಾಗಿ ಶುರುಮಾಡಲು ಬಯಸುತ್ತಾನೆ ಮತ್ತು ಈ ಹಿಂದಿನ ತನ್ನ ಅಶಿಸ್ತಿನ ಮಾರ್ಗಗಳನ್ನು ಬಿಡಲು ಬಯಸುತ್ತಾನೆ ಎಂದು ಭರವಸೆ ನೀಡಿದ್ದನು. ಫ್ಯಾಮಿಲಿ ವೀಕ್ ಸಮಯದಲ್ಲಿ ಅವನು ತನ್ನ ತಾಯಿಯ ಮುಂದೆ ಕಣ್ಣೀರಿಟ್ಟು, ಹಿಂದೆ ಮಾಡಿದ ಕೆಟ್ಟ ವರ್ತನೆಗಳು ತನ್ನನ್ನು ಕಾಡುತ್ತಿದೆ ಮತ್ತು ಜನರು ತಾನು ಮಾಡಿದ ವಿವಾದಗಳ ಬಗ್ಗೆ ಮಾತನಾಡಿದಾಗ ಅದು ನೋವುಂಟು ಮಾಡುತ್ತದೆ ಎಂದು ಹೇಳಿದ್ದನು.
ಈ ಸುದ್ದಿಯನ್ನೂ ಓದಿ:Rajath Kishan: ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ
ಇತ್ತೀಚೆಗೆ ಕನ್ನಡ ಬಿಗ್‌ಬಾಸ್‌ನ ರಜತ್ ಕೂಡ ಸುದೀಪ್ ಮಗಳು ಸಾನ್ವಿ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗಷ್ಟೇ ನಡೆದ ಸಿಸಿಎಲ್ ಪಂದ್ಯವಾಳಿಯಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಗೆದ್ದು ಬೀಗಿತ್ತು. ಈ ಪಂದ್ಯವನ್ನು ನೋಡುವುದಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು. ಸಾನ್ವಿ ಸುದೀಪ್ ಹಾಗೂ ಪ್ರಿಯಾ ಸುದೀಪ್ ಕೂಡ ಬಂದಿದ್ದರು. ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದ ಬಳಿಕ ಸಂಭ್ರಮಿಸಿದ ಸಾನ್ವಿ ಸುದೀಪ್ ಗ್ರೂಪ್ ಫೋಟೋಕ್ಕೆ ಪೋಸ್ ಕೊಡಲು ಮುಂದಾಗಿದ್ದಾರೆ. ದೀಪಿಕಾ ದಾಸ್, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಜೊತೆ ಸಾನ್ವಿ ಸುದೀಪ್ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ರಜತ್, ಕೈಯಲ್ಲಿ ವಿಕ್ಟರಿ ಸಿಂಬಲ್ ಹಿಡಿದು ಪೋಸ್ ಕೊಟ್ಟರು. ಹುಡುಗಿಯರು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ, ಹಿಂದೆಯಿಂದ ರಜತ್ ಬಂದು ಪೋಸ್ ಕೊಟ್ಟಿದ್ದು ಸಾನ್ವಿಗೆ ಇಷ್ಟವಾದಂತೆ ಕಾಣಲಿಲ್ಲ. ಹೆಣ್ಣು ಮಕ್ಕಳೆಲ್ಲ ಸೇರಿ ಖುಷಿಯಾಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ತಮಾಷೆ ಮಾಡಲು ಹೋಗಿ ಸಾನ್ವಿ ಕೆಂಗಣ್ಣಿಗೆ ಗುರಿಯಾದರು ರಜತ್.