Viral News: ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಹೆಂಡ್ತಿ ಮಕ್ಕಳನ್ನು ಕರ್ಕೊಂಡು ಕುಂಭಮೇಳಕ್ಕೆ ಹೋದ ಮಗ!
ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಮನೆಯಲ್ಲಿ ಲಾಕ್ ಮಾಡಿ ಪತ್ನಿ, ಮಕ್ಕಳೊಂದಿಗೆ ಪಾಪಿ ಮಗನೋರ್ವ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಹೋಗಿದ್ದಾನಂತೆ. ಹಸಿವಿನಿಂದ ನರಳುತ್ತಿದ್ದ ತಾಯಿಯ ಗೋಳಾಟ ಕೇಳಿ ನೆರೆಹೊರೆಯರು ಆಕೆಯ ಮಗಳಿಗೆ ಮಾಹಿತಿ ನೀಡಿದ್ದಾರೆ. ಮಗಳು ಪೊಲೀಸರಿಗೆ ತಿಳಿಸಿ ತನ್ನ ತಾಯಿಯನ್ನು ರಕ್ಷಿಸಿದ್ದಾಳೆ. ಈ ಸುದ್ದಿ ಈದೀಗ ವೈರಲ್(Viral News) ಆಗಿದೆ.


ರಾಂಚಿ: ಪುಣ್ಯಕ್ಷೇತ್ರದ ಯಾತ್ರೆಗೆ ಹೊರಟವರು ಹೆಚ್ಚಾಗಿ ತಮ್ಮ ತಂದೆ-ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಜಾರ್ಖಂಡ್ ರಾಮಗಢ ಜಿಲ್ಲೆಯಲ್ಲಿ ಮಗನೊಬ್ಬ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಮನೆಯಲ್ಲಿ ಲಾಕ್ ಮಾಡಿ ಪತ್ನಿ, ಮಕ್ಕಳು ಮತ್ತು ಅಳಿಯಂದಿರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೋಗಿದ್ದಾನಂತೆ. ಮನೆಯಲ್ಲಿದ್ದ ತಾಯಿ ಹಸಿವಿನಿಂದ ಅಳುತ್ತಿದ್ದಾಗ ನೆರೆಹೊರೆಯವರು ಆಕೆಯ ಮಗಳಿಗೆ ಹೇಳಿದ್ದಾರಂತೆ. ಕೊನೆಗೆ ಪೊಲೀಸರು ಬಂದು ತಾಯಿಯನ್ನು ಕಾಪಾಡಿದ್ದಾರಂತೆ. ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಆಹಾರ ಮತ್ತು ಕುಡಿಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ ನಂತರ ಪ್ರಯಾಗ್‍ರಾಜ್‍ಗೆ ಹೋಗಿರುವುದಾಗಿ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಸುದ್ದಿ ಇದೀಗ ಭಾರೀ ವೈರಲ್(Viral News) ಆಗಿದೆ.
ಮಹಿಳೆಯ ಮಗಳು ಚಾಂದಿನಿ ದೇವಿ, ನೆರೆಹೊರೆಯವರಿಂದ ಫೋನ್ ಮೂಲಕ ತನ್ನ ತಾಯಿಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಬೀಗ ಮುರಿದು ತಾಯಿಯನ್ನು ರಕ್ಷಿಸಿದ್ದಾರೆ. ನೆರೆಹೊರೆಯವರು ತಕ್ಷಣ ಅವಳಿಗೆ ಆಹಾರವನ್ನು ನೀಡಿದ್ದಾರೆ. ಆಕೆಗೆ ಔಷಧಿಗಳನ್ನು ಸಹ ನೀಡಲಾಯಿತು ಮತ್ತು ಸಿಸಿಎಲ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ದೇವಿ ಮಾಹಿತಿ ನೀಡಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral News: ಮಾರ್ಡನ್ ಶ್ರವಣಕುಮಾರನ ಮಾತೃ ಭಕ್ತಿ- ತಳ್ಳುವ ಗಾಡಿಯಲ್ಲಿ ತಾಯಿಯನ್ನು ಕುಂಭಮೇಳಕ್ಕೆ ಕರೆತಂದ ಪುತ್ರ!
ಇಲ್ಲೊಬ್ಬ ಪುತ್ರ ತನ್ನ ತಾಯಿಯ ಆಸೆಯನ್ನು ಈಡೇರಿಸಲು ಮಾಡರ್ನ್ ಶ್ರವಣಕುಮಾರನ ಅವತಾರ ತಾಳಿದ್ದಾರೆ. ವಯೋವೃದ್ಧ ತಾಯಿಯು ಮಹಾ ಕುಂಭಮೇಳವನ್ನು ಕಣ್ತುಂಬಿಕೊಂಡು ನದಿಯಲ್ಲಿ ಪುಣ್ಯ ಸ್ನಾನ ಮಾಡಬೇಕೆಂಬ ಇಂಗಿತವನ್ನು ಮಗನ ಬಳಿ ತೋಡಿಕೊಂಡಿದ್ದಾರೆ. ಇದೀಗ ಮಗ ತಾಯಿಯನ್ನು ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು ಪ್ರಯಾಗ್‌ರಾಜ್‌ನತ್ತ(Prayagraj) ಬರುತ್ತಿದ್ದಾರೆ. ಈ ಸುದ್ದಿ(Viral News) ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕುಂಭಮೇಳದಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆಯನ್ನು ಈಡೇರಿಸುವ ಸಲುವಾಗಿ ಮಗ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತಾಯಿಯನ್ನು ಪ್ರಯಾಗ್‌ರಾಜ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬಸ್ಸು ಅಥವಾ ಟ್ರೈನ್‌ನಲ್ಲಿ ಅಲ್ಲದೆ ತಳ್ಳುವ ಬಂಡಿಯಲ್ಲಿ ತಾಯಿಯನ್ನು ಕೂರಿಸಿಕೊಂಡು ಹೋಗುತ್ತಿರುವ ಮಗನ ಮಾತೃ ಭಕ್ತಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಗ, ತನ್ನ ವೃದ್ಧ ತಾಯಿಯನ್ನು ತಳ್ಳು ಬಂಡಿಯಲ್ಲಿ ಕೂರಿಸಿ, ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಮಗನಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಈ ಬಾರಿಯ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನವನ್ನು ಮಾಡಬೇಕೆಂದು ತಾಯಿ ಮಗನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ಬುಲಂದರ್‌ಶಹರ್‌ನ 65 ವರ್ಷದ ವ್ಯಕ್ತಿ ತಮ್ಮ 92 ವರ್ಷದ ತಾಯಿಯನ್ನು ಬಂಡಿಯ ಮೇಲೆ ಕೂರಿಸಿ ತಾವೇ ಬಂಡಿಯನ್ನು ಎಳೆದು ಸಾಗುವ ಮೂಲಕ ಮಹಾ ಕುಂಭಮೇಳಕ್ಕೆ ಕರೆದೊಯ್ದಿದ್ದಾರೆ. ಹೀಗೆ 13 ದಿನಗಳ ಕಾಲ ಪ್ರಯಾಣ ಕ್ರಮಿಸಿ ಅಂತಿಮವಾಗಿ ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ.