#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಸುನಾಮಿ ಸಂತ್ರಸ್ತೆಗೆ ‘ಗಾಡ್ ಫಾದರ್’ ಆದ IAS ದಂಪತಿ – ತಮಿಳುನಾಡಿನಲ್ಲಿ ನಡೆಯಿತು ಅಪರೂಪದ ವಿವಾಹ

ತಮಿಳುನಾಡಿನ ಕರಾವಳಿ ತೀರಕ್ಕೆ 2004ರಲ್ಲಿ ಅಪ್ಪಳಿಸಿದ ಸುನಾಮಿ ದುರಂತಕ್ಕೆ ಇದೀಗ 20 ವರ್ಷ! ಈ ದುರಂತದಲ್ಲಿ ಅಂದು ಪವಾಡ ಸದೃಶವಾಗಿ ಬದುಕುಳಿದ ಪುಟ್ಟ ಬಾಲಕಿ ಇದೀಗ ಯುವತಿಯಾಗಿ ಹಸೆಮಣೆ ಏರಿದ್ದಾಳೆ! ಈ ಮದುವೆಗೆ ಒಬ್ಬರು ವಿಶೇಷ ಅತಿಥಿ ಸಾಕ್ಷಿಯಾಗಿದ್ದರು..ಆ ಕುರಿತಾದ ಒಂದು ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ...

ಸುನಾಮಿ ಸಂತ್ರಸ್ತೆಗೆ ‘ಗಾಡ್ ಫಾದರ್’ ಆದ IAS ದಂಪತಿ-21ವರ್ಷಗಳ ಬಾಂಧವ್ಯ ಹೇಗಿತ್ತು ಗೊತ್ತಾ?

ಸುನಾಮಿ ದುರಂತದಲ್ಲಿ ಬದುಕುಳಿದ ಯುವತಿಯ ಮದುವೆ ಸಮಾರಂಭದಲ್ಲಿ ಭಾಗಿಯಾದ IAS ಅಧಿಕಾರಿ.

Profile Sushmitha Jain Feb 5, 2025 10:54 AM

ಚನ್ನೈ: 2004ರಲ್ಲಿ ಸಂಭವಿಸಿದ ಭೀಕರ ತ್ಸುನಾಮಿ (Tsunami) ದುರಂತದ ಸಂದರ್ಭದಲ್ಲಿ ನಾಗಪಟ್ಟಣಂ (Nagapattinam) ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿ (IAS Officer) ಜೆ ರಾಧಾಕೃಷ್ಣನ್ ಅವರು ಒಂದು ಸ್ಮರಣಾರ್ಹ ಕಾರ್ಯಕ್ರಮವೊಂಕ್ಕೆ ಸಾಕ್ಷಿಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಜೆ ರಾಧಾಕೃಷ್ಣನ್ ಅವರು, ಆ ಭೀಕರ ದುರಂತದಲ್ಲಿ ಅದೃಷ್ಟವಶಾತ್ ಬದುಕುಳಿದಿದ್ದ ಅತೀ ಕಿರಿಯಾಕೆ ಎಂದು ಗುರುತಿಸಲ್ಪಟ್ಟಿದ್ದ ಯುವತಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಆಕೆಯ ಜೀವನದ ಆನಂದಮಯ ಕ್ಷಣಗಳನ್ನು ಇನ್ನಷ್ಟು ಸ್ಮರಣೀಯವನ್ನಾಗಿಸಿದ್ದಾರೆ. ಅಂದಿನ ಆ ಮಹಾ ದುರಂತದಲ್ಲಿ ಅದೃಷ್ಟವಶಾತ್ ಬದುಕುಳಿದ ಆ ಪುಟ್ಟ ಬಾಲಕಿಯ ಹೆಸರು ಮೀನಾ ಎಂಬುದಾಗಿದ್ದು, ಇದಿಗ ಈಕೆಯ ವಿವಾಹವು ಫೆ.02ರ ಆದಿತ್ಯವಾರದಂದು ನಡೆದಿತ್ತು.

ಇದೀಗ ಅಡಿಷನ್ ಚೀಫ್ ಸೆಕ್ರೆಟರಿಯಾಗಿರುವ (Additional Chief Secretary) ರಾಧಾಕೃಷ್ಣನ್ ಅವರು, 2004ರ ಡಿ.26ರಂದು ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಭೀಕರ ಸುನಾಮಿ ದುರಂತದ ಬಳಿಕ ನಡೆದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದರು. ಈ ಸಂದರ್ಭದಲ್ಲಿ ಕೀಚನ್ ಕುಪ್ಪಮ್ ಮೀನುಗಾರಿಕಾ ಗ್ರಾಮದಲ್ಲಿ ಅವಶೇಷಗಳಡಿಯಲ್ಲಿ ಈ ಪುಟ್ಟ ಮಗು ಪವಾಡಸದೃಶ ರೀತಿಯಲ್ಲಿ ಬದುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ದುರಂತದಲ್ಲಿ 6 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಈ ದುರಂತದಲ್ಲಿ ಬದುಕುಳಿದು ಅನಾಥವಾದ ಮಕ್ಕಳ ಪಾಲನೆಗಾಗಿ ತಮಿಳುನಾಡು ಸರಕಾರವು ನಾಗಪಟ್ಟಣಂನಲ್ಲಿ ಅಣ್ಣೈ ಸತ್ಯ ಸರಕಾರಿ ಮಕ್ಕಳ ಮನೆಯನ್ನು (Annai Sathya Government Children’s Home) ನಿರ್ಮಿಸಿತ್ತು. ಅಲ್ಲಿಗೆ ಈ ಶಿಶುವನ್ನು ದಾಖಲಿಸಿ ಪಾಲನೆ ಮಾಡಲಾಗುತ್ತಿತ್ತು ಮತ್ತು ಈ ಮಗುವಿಗೆ ಮಿನಾ ಎಂದು ಹೆಸರಿಡಲಾಗಿತ್ತು. ಇದೇ ಸಂದರ್ಭದಲ್ಲಿ ಇನ್ನೊಂದು ಮಗುವನ್ನು ವೆಲಂಕಣಿ ಬೀಚ್ ನಲ್ಲಿ ರಕ್ಷಿಸಲಾಗಿತ್ತು ಮತ್ತು ಆ ಮಗುವಿಗೆ ಸೌಮ್ಯ ಎಂದು ಹೆಸರಿಡಲಾಗಿತ್ತು. ಇವರಿಬ್ಬರೂ ಒಟ್ಟಿಗೆ ಈ ಸಾಂತ್ವನ ಕೇಂದ್ರದಲ್ಲಿ ಬೆಳೆಯುತ್ತಿದ್ದರು. ಈ ಇಬ್ಬರು ಮಕ್ಕಳಿಗೆ ರಾಧಾಕೃಷ್ಣನ್ ಹಾಗೂ ಅವರ ಪತ್ನಿ ಕೃತಿಕಾ ಗಾಡ್ ಪೇರೆಂಟ್ ಗಳಾಗಿದ್ದರು ಮತ್ತು ಇವರಿಬ್ಬರೊಂದಿಗೆ ಈ ಮಕ್ಕಳಿಗೆ ಒಂದು ಅನುಪಮ ಬಾಂಧವ್ಯ ಬೆಸೆಯಲ್ಪಟ್ಟಿತ್ತು.

ಇದನ್ನೂ ಓದಿ: Bihar Shocker: ಆರ್ಕೆಸ್ಟ್ರಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದ ಯುವಕನನ್ನು ಗುಂಡಿಕ್ಕಿ ಭೀಕರ ಹತ್ಯೆ!



ಐಎಎಸ್ ಅಧಿಕಾರಿಯಾಗಿದ್ದ ಕಾರಣ ರಾಧಾಕೃಷ್ಣನ್ ಅವರು ಬೇರೆ ಬೇರೆ ಕಡೆಗಳಿಗೆ ವರ್ಗಾವಣೆಗೊಳ್ಳುತ್ತಿದ್ದರು. ಆದರೂ ಸಹ ರಾಧಾಕೃಷ್ಣನ್ ಅವರು ಈ ಇಬ್ಬರು ಮಕ್ಕಳ ಬೆಳವಣಿಗೆ ಬಗ್ಗೆ ನಿಗಾ ವಹಿಸಿದ್ದರು ಹಾಗೂ ಇವರಿಬ್ಬರ ಜೀವನದ ಎಲ್ಲಾ ಪ್ರಮುಖ ಘಟ್ಟಗಳಲ್ಲಿ ರಾಧಾಕೃಷ್ಣನ್ ಭಾಗಿಯಾಗುತ್ತಲೇ ಇದ್ದರು. ಇವರಿಬ್ಬರಲ್ಲಿ ಸೌಮ್ಯ ಅವರು 2022ರಲ್ಲಿ ವಿವಾಹವಾಗಿದ್ದರು ಮತ್ತು ಆಕೆಯೀಗ ಮಗುವಿನ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾಳೆ. ಈಕೆಯ ಮದುವೆ ಕಾರ್ಯಕ್ರಮದಲ್ಲೂ ರಾಧಾಕೃಷ್ಣನ್ ಭಾಗಿಯಾಗಿ ದಂಪತಿಗೆ ಹರಸಿದ್ದರು.

ಆದಿತ್ಯವಾರದಂದು, ಮೀನಾ ಪಿ ಮಣಿಮಾರನ್ ನನ್ನು ವಿವಾಹವಾದಳು. ಮಣಿಮಾರನ್ ನಾಗಪಟ್ಟಣಂನಲ್ಲಿರುವ ರಾಷ್ಟ್ರೀಕೃ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭ ಇಲ್ಲಿನ ಶ್ರೀ ನೆಲ್ಲುಕ್ಕಡಾಯಿ ಮರಿಯಮ್ಮನ್ ದೇವಸ್ಥಾನದಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದರು. ಈ ವಿವಾಹ ಸಮಾರಂಭದಲ್ಲಿ ತಮಿಳರಸಿ ಸೇರಿದಂತೆ ಹಲವಾರು ಸುನಾಮಿ ಸಂತ್ರಸ್ತರು ಭಾಗವಹಿಸಿದ್ದರು. ತಮಿಳರಸಿ ಮೀನಾ ಸಹಪಾಠಿಯಾಗಿದ್ದು, ತನ್ನ ಬಾಲ್ಯದ ಗೆಳತಿಯ ವಿವಾಹ ಸಮಾರಂಭಕ್ಕೆ ಈಕೆಯೂ ಸಾಕ್ಷಿಯಾದಳು.