Viral Video: ಇದಕ್ಕಿಂತಲೂ ಚಿಕ್ಕದಾದ ʼಬಾತ್ ರೂಂʼ ಇದ್ಯಾ? ನೆಟ್ಟಿಗರಿಗೆ ಸವಾಲೆಸೆದ ಮಹಿಳೆ
ಎಮಿಲಿ ಬೊನಾನಾ ಎಂಬ ಫೇಮಸ್ ಇನ್ಸ್ಟಾಗ್ರಾಮರ್ ಎನ್‍ವೈಸಿಯಲ್ಲಿರುವ ತಮ್ಮ ಫ್ಲ್ಯಾಟ್‍ನ ಬಾತ್‍ರೂಂ ಅನ್ನು ವಿಡಿಯೊ ಮಾಡಿ ತೋರಿಸಿ ಇದು "ಎನ್‍ವೈಸಿಯ ಅತ್ಯಂತ ಚಿಕ್ಕ ಬಾತ್‍ರೂಂ" ಎಂದು ಹೇಳಿಕೊಂಡಿದ್ದಾರೆ. ಹಾಗೇ ಇದನ್ನು ಒಪ್ಪದವರು ನ್ಯೂಯಾರ್ಕ್ ನಗರದಲ್ಲಿ ಇದಕ್ಕಿಂತ ಚಿಕ್ಕದಾದ ಬಾತ್‍ರೂಂ ಅನ್ನು ತೋರಿಸುವಂತೆ ಸವಾಲು ಹಾಕಿದ್ದಾಳೆ.
ವಾಷಿಂಗ್ಟನ್: ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ 'ಬನಾನಾ ಬೊನಾನಿ' ಎಂದು ಕರೆಯಲ್ಪಡುವ ಎಮಿಲಿ ಬೊನಾನಾ ಎಂಬ ಫೇಮಸ್ ಇನ್‌ಸ್ಟಾಗ್ರಾಮರ್ ಇತ್ತೀಚೆಗೆ ತಾನು ತುಂಬಾ ಸಣ್ಣ ಬಾತ್‍ರೂಂ ಹೊಂದಿರುವ ಫ್ಲ್ಯಾಟ್‍ಗೆ ಸ್ಥಳಾಂತರಗೊಂಡಿದ್ದೇನೆ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾಳೆ(Viral Video). ಆಕೆ ಆ ಸ್ಥಳದ ದೃಶ್ಯಗಳನ್ನು ರೆಕಾರ್ಡ್ ಮಾಡಿ ನ್ಯೂಯಾರ್ಕ್ ನಗರದಲ್ಲಿನ ತನ್ನ ಫ್ಲ್ಯಾಟ್ ಸಿಂಕ್-ಟಾಯ್ಲೆಟ್ ಕಾಂಬೋದೊಂದಿಗೆ ಹೇಗೆ ಬಂದಿದೆ ಎಂಬುದನ್ನು ತೋರಿಸಿದ್ದಾಳೆ. ಬೊನಾನಿ ಇದನ್ನು "ಎನ್‍ವೈಸಿಯ ಅತ್ಯಂತ ಚಿಕ್ಕ ಬಾತ್‍ರೂಂ" ಎಂದು ಕರೆದಿದ್ದಾಳೆ ಮತ್ತು ಈ ಪುರಾವೆಗಳನ್ನು ಒಪ್ಪದವರಿಗೆ ಸವಾಲುಗಳನ್ನು ಕೂಡ ಹಾಕಿದ್ದಾಳೆ.
ಬೊನಾನಿ ಜನವರಿ 25 ರಂದು ಇನ್‌ಸ್ಟಾಗ್ರಾಂ ವಿಡಿಯೊವನ್ನು ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಗೆ ತನ್ನ ಬಾತ್‍ರೂಂ ಬಗ್ಗೆ ವಿವರಣೆಯನ್ನು ನೀಡಿದ್ದಾಳೆ. ಅದರಲ್ಲಿ ಆಕೆ ಯಾಕೆ ಹೀಗೆ ಮಾಡಿದ್ದಾಳೆ? ಖಾಸಗಿ ಸ್ಥಳವನ್ನು ಕ್ಯಾಮೆರಾದಲ್ಲಿ ಏಕೆ ಚಿತ್ರೀಕರಿಸಿದ್ದಾಳೆ ಮತ್ತು ದೃಶ್ಯಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಏಕೆ ಬಿಡುಗಡೆ ಮಾಡಿದ್ದಾಳೆ ಎಂಬ ಪ್ರಶ್ನೆಗೆ ಅದರಲ್ಲಿ ಉತ್ತರಿಸಿದ್ದಾಳೆ. "ನನ್ನ ಬಾತ್‍ರೂಂ ಅನ್ನು ನಿಮಗೆ ತೋರಿಸುವ ಸಮಯ ಬಂದಿದೆ" ಎಂದು ಆಕೆ ಇಡೀ ನಗರದಲ್ಲಿ ಅತ್ಯಂತ ಚಿಕ್ಕದಾದ ಬಾತ್‍ರೂಂನ ವಿಡಿಯೊವನ್ನು ಸೆರೆಹಿಡಿಯುವಾಗ ಹೇಳಿದ್ದಾಳೆ.
ಬಾತ್‍ರೂಂನೊಳಗೆ ಬಟ್ಟೆಗಳನ್ನು ಇಡಲು ಮಾಡಲಾದ ಹ್ಯಾಂಗರ್‌ಗಳು ಮತ್ತು ಶವರ್ ಪರದೆಯನ್ನು ತೋರಿಸಿದ್ದಾಳೆ. ನಂತರ ಫ್ಲ್ಯಾಟ್‍ನ ಬಾತ್‍ರೂಂನಲ್ಲಿ ಪ್ರತ್ಯೇಕ ವಾಶ್ ಬೇಸಿನ್ ಮತ್ತು ಟಾಯ್ಲೆಟ್ ಕಮೋಡ್ ಇಲ್ಲ ಎಂದು ಹೇಳಿದ್ದಾಳೆ. ಫ್ಲಶ್ ಭಾಗದಲ್ಲಿ ಸಿಂಕ್ ಅನ್ನು ಅಳವಡಿಸಲಾಗಿದೆ ಮತ್ತು ಸಿಂಕ್-ಟಾಯ್ಲೆಟ್ ಅನ್ನು ಒಟ್ಟಾಗಿ ಮಾಡಿರುವುದು ಆಕೆಗೆ ತುಂಬಾ ಇಷ್ಟವಾಗಿದೆಯಂತೆ.
ಈ ಸುದ್ದಿಯನ್ನೂ ಓದಿ: Viral News : ಬಾತ್ ಟವೆಲ್ ಸುತ್ತಿಕೊಂಡು ಮೆಟ್ರೋದಲ್ಲಿ ಓಡಾಡಿದ ಬೆಡಗಿಯರು, ವಿಡಿಯೋ ನೋಡಿ ನೆಟ್ಟಿಗರು ಫುಲ್ ಗರಂ
ವಿಶೇಷವೆಂದರೆ, ಈ ಫ್ಲ್ಯಾಟ್‍ಗೆ ನೀಡಿದ ಹಣಕ್ಕೆ ಅನುಗುಣವಾಗಿ ತುಂಬಾ ಚೆನ್ನಾಗಿದೆ ಎಂದು ಆಕೆ ಹೇಳಿದ್ದಾಳೆ.ಇದು ನ್ಯೂಯಾರ್ಕ್ ನಗರದ ಅತ್ಯಂತ ಚಿಕ್ಕ ಬಾತ್‍ರೂಂ. ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಇದು ನ್ಯೂಯಾರ್ಕ್ ನಗರದ ಅತ್ಯಂತ ಚಿಕ್ಕ ಬಾತ್‍ರೂಂ ಅಲ್ಲವೆಂದು ನೀವು ಹೇಳುವುದಾದರೆ ನ್ಯೂಯಾರ್ಕ್ ನಗರದ ಅತ್ಯಂತ ಚಿಕ್ಕ ಬಾತ್‍ರೂಂ ಅನ್ನು ನೀವು ನನಗೆ ತೋರಿಸಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ನಾನು ವೈಯಕ್ತಿಕವಾಗಿ ಇದೇ ರೀತಿಯ ಇನ್ನೊಂದು ಬಾತ್‍ರೂಂ ಅನ್ನು ನೋಡಿಲ್ಲ "ಎಂದು ಆಕೆ ನೆಟ್ಟಿಗರಿಗೆ ಸವಾಲು ಹಾಕಿದ್ದಾಳೆ.