ಮೊಹಾಲಿ: ಸತತ ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ನಾಯಕ ಶಿಖರ್ ಧವನ್ ಅವರು ಮುಂದಿನ ಕೆಲವು ದಿನಗಳ ಕಾಲ ಆಡುವುದಿಲ್ಲ ಎಂದು ವರದಿಯಾಗಿದೆ.
ಭುಜದ ನೋವಿನಿಂದ ಬಳಲುತ್ತಿರುವ ಎಡಗೈ ಬ್ಯಾಟರ್ ಧವನ್ ಅವರು ಶನಿವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಧವನ್ ಬದಲಿಗೆ ಸ್ಯಾಮ್ ಕರ್ರನ್ ಅವರು ನಾಯಕತ್ವ ವಹಿಸಿದ್ದರು.
ತಂಡದ ನಿರ್ದೇಶಕ ಸಂಜಯ್ ಬಂಗಾರ್ ಮಾತನಾಡಿದ್ದು, “ಧವನ್ ಅವರು ಭುಜದ ಗಾಯದಿಂದ ಬಳಲುತ್ತಿದ್ದಾರೆ, ಆದ್ದರಿಂದ ಅವರು ಕನಿಷ್ಠ ಒಂದೆರಡು ದಿನಗಳ ಕಾಲ ಹೊರಗುಳಿಯುವ ಸಾಧ್ಯತೆಯಿದೆ ಎಂದು ನಾನು ಹೇಳುತ್ತೇನೆ. ಅನುಭವಿ ಆರಂಭಿಕ ಶಿಖರ್ ನಂತಹವರು, ಅಂತಹ ವಿಕೆಟ್‌ಗಳಲ್ಲಿ ಆಡಿದ ಅನುಭವ ಹೊಂದಿರುವವರು ತಂಡಕ್ಕೆ ಅತ್ಯಂತ ನಿರ್ಣಾಯಕರಾಗುತ್ತಾರೆ” ಎಂದಿದ್ದಾರೆ.
ಈ ಸಮಯದಲ್ಲಿ, ಅವರು ಕನಿಷ್ಠ ಏಳು-ಹತ್ತು ದಿನಗಳ ಕಾಲ ಆಟದಿಂದ ಹೊರಗುಳಿಯಬಹುದು ಎಂದು ತೋರುತ್ತದೆ” ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಬಂಗಾರ್ ಹೇಳಿದರು