ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಇನ್ನಾದರೂ ಎಚ್ಚೆತ್ತುಕೊಳ್ಳೋಣ

ಯಮುನೆಯ ನೀರು ಈ ಮಟ್ಟಿಗೆ ವಿಷಮಯವಾಗಿದೆಯೆಂದರೆ, ಅದಕ್ಕೆ ಅತಿರೇಕದ ಪ್ರಮಾಣ ದಲ್ಲಿ ತ್ಯಾಜ್ಯವನ್ನು ಹರಿಬಿಡುತ್ತಿರುವ ಕೈಗಾರಿಕೆಗಳು ಉತ್ತರದಾಯಿಗಳಾಗಬೇಕು, ಅಲ್ಲವೇ? ಇದೇ ರೀತಿಯಲ್ಲಿ, ಸರಸ್ವತಿ ನದಿ ಕಣ್ಮರೆಯಾಗಿರುವುದಕ್ಕೂ, ‘ಜೀವನದಿ’ ಕಾವೇರಿಯು ಜೀವಹಿಂಡು ವಂತಾಗಿರುವುದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದರೆ ತೋರುಬೆರಳು ನಮ್ಮ ಕಡೆಗೇ ತಿರುಗಿಕೊಳ್ಳುತ್ತದೆ.

ಇನ್ನಾದರೂ ಎಚ್ಚೆತ್ತುಕೊಳ್ಳೋಣ

Profile Ashok Nayak Mar 15, 2025 10:40 AM

ನಾರದ ಸಂಚಾರ

ಕಲಹಪ್ರಿಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾದುಹೋಗಿರುವ ಯಮುನಾ ನದಿಯ ನೀರು ಸಂಪೂ ರ್ಣ ವಿಷಮಯವಾಗಿದೆಯಂತೆ. ‘ಜೀವರಾಶಿಗಳು ಬದುಕಲು ನೀರಿನಲ್ಲಿ ಅಗತ್ಯವಾಗಿ ಇರ ಬೇಕಾದ ಅಂಶಗಳೇ ಈ ನದಿನೀರಿನಲ್ಲಿಲ್ಲ, ಇದನ್ನು ನಂಬಿಕೊಂಡು ದೆಹಲಿಯ ಜನ ಬದು ಕುವಂತಿಲ್ಲ’ ಎಂದಿದೆಯಂತೆ ತಜ್ಞರ ವರದಿ. ಮುಂಜಾನೆ ಸ್ನಾನ ಮಾಡುವಾಗ, ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮ ದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಶ್ಲೋಕವನ್ನು ಹೇಳಿಕೊಳ್ಳುವುದು ಶ್ರದ್ಧಾವಂತ ಭಾರತೀಯರ ಪರಿಪಾಠ. ಈ ಪೈಕಿ ಯಮುನಾ ನದಿಯ ಕಥೆ ಹೀಗಾಗಿದ್ದರೆ, ಸರಸ್ವತಿ ನದಿ ‘ಗುಪ್ತಗಾಮಿನಿ’ ಆಗಿಬಿಟ್ಟಿದೆ; ಇನ್ನು ಕಾವೇರಿ ನದಿಯು ಕರ್ನಾಟಕ-ತಮಿಳು ನಾಡಿನ ನಡುವೆ ವರ್ಷಕ್ಕೊಮ್ಮೆಯಾದರೂ ಮುನಿಸು/ಅಸಮಾಧಾನಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Narada Sanchara: ‘ಮಿಸ್ಟರ್ ಫೈರ್’ರಿಂದ ‘ಮಿಸ್ ಫೈರ್’!

ಇದಕ್ಕೆಲ್ಲಾ ಕಾರಣರಾರು? ಎಂಬುದು ತ್ರಿಲೋಕ ಸಂಚಾರಿ ನಾರದರ ಪ್ರಶ್ನೆ. ಉತ್ತರವನ್ನು ಕಂಡುಹಿಡಿಯಲು ಅಥವಾ ಇದಕ್ಕೆ ಕಾರಣರಾರು ಎಂಬುದನ್ನು ತೋರಿಸಲು ಕೈನ ತೋರು ಬೆರಳನ್ನು ಬೇರೆ ಯಾವ ಕಡೆಗೂ ತಿರುಗಿಸುವುದು ಬೇಡ. ಇದು ಸ್ವಾರ್ಥಿ ಮನುಷ್ಯ ತನ್ನೆ ಡೆಗೇ ತೋರುಬೆರಳನ್ನು ತಿರುಗಿಸಿಕೊಳ್ಳಬೇಕಾದ ಬಾಬತ್ತು. ಯಮುನೆಯ ನೀರು ಈ ಮಟ್ಟಿಗೆ ವಿಷಮಯವಾಗಿದೆಯೆಂದರೆ, ಅದಕ್ಕೆ ಅತಿರೇಕದ ಪ್ರಮಾಣದಲ್ಲಿ ತ್ಯಾಜ್ಯವನ್ನು ಹರಿಬಿಡುತ್ತಿರುವ ಕೈಗಾರಿಕೆಗಳು ಉತ್ತರದಾಯಿಗಳಾಗಬೇಕು, ಅಲ್ಲವೇ? ಇದೇ ರೀತಿಯಲ್ಲಿ, ಸರಸ್ವತಿ ನದಿ ಕಣ್ಮರೆಯಾಗಿರುವುದಕ್ಕೂ, ‘ಜೀವನದಿ’ ಕಾವೇರಿಯು ಜೀವಹಿಂಡುವಂತಾ ಗಿರುವುದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದರೆ ತೋರುಬೆರಳು ನಮ್ಮ ಕಡೆಗೇ ತಿರುಗಿಕೊಳ್ಳುತ್ತದೆ.

ಮಾತ್ರವಲ್ಲ, ಮನುಷ್ಯನ ಸ್ವಾರ್ಥ, ದುರಾಸೆಗಳು ಹೀಗೇ ಹೆಚ್ಚಾಗುತ್ತಾ ಹೋದರೆ, ದೇಶದ ಮಿಕ್ಕ ನದಿಗಳಿಗೂ ಯಮುನೆಯ ಗತಿಯೇ ಒದಗುವುದನ್ನು ತಳ್ಳಿಹಾಕಲಾಗದು. ಅಂಥ ದುಸ್ಥಿತಿ ಒದಗುವ ಮುನ್ನ ಎಚ್ಚೆತ್ತುಕೊಳ್ಳುವುದು ಜಾಣತನವಲ್ಲವೇ?