ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pradeep Eshwar: ಇದು ಸಿದ್ದರಾಮಯ್ಯ ಕಾರ್ಯಕ್ರಮ, ನಿಮ್ಮಪ್ಪನ ಪ್ರೋಗ್ರಾಂ ಅಲ್ಲ: ಪ್ರದೀಪ್‌ ಈಶ್ವರ್‌ ಕೆಂಡ

Pradeep Eshwar: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವದಲ್ಲಿ ಘಟನೆ ನಡೆದಿದೆ. ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡುವಾಗ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಶಾಸಕ ಗರಂ ಆಗಿದ್ದಾರೆ.

ಇದು ಸಿದ್ದರಾಮಯ್ಯ ಕಾರ್ಯಕ್ರಮ, ನಿಮ್ಮಪ್ಪನದ್ದಲ್ಲ: ಪ್ರದೀಪ್‌ ಈಶ್ವರ್‌

Profile Prabhakara R Mar 15, 2025 1:52 PM

ಬೆಂಗಳೂರು: ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗರಂ ಆಗಿರುವ ಪ್ರದೀಪ್‌ ಈಶ್ವರ್ ಅವರು, ಬಿಜೆಪಿ ಕಾರ್ಯಕ್ರರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲಿಗೆ ಸಂಸದ ಪಿ.ಸಿ. ಮೋಹನ್‌ ಬಿಜೆಪಿಯ ಕೊಡುಗೆಗಳ ಬಗ್ಗೆ ಮಾತನಾಡಿದ್ದಾರೆ. ಬಳಿಕ ಪ್ರದೀಪ್‌ ಈಶ್ವರ್‌ ಅವರು ಮಕ್ಕಳ ಶಿಕ್ಷಣ ಕುರಿತಂತೆ ಮಾತನಾಡುತ್ತಿದ್ದರು. ಇದಕ್ಕೆ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರದೀಪ್ ಈಶ್ವರ್, ಸಮುದಾಯ ಡಿವೈಡ್‌ ಮಾಡಲು ಬಂದಿದ್ದೀರಾ ಇಲ್ಲಿಗೆ, ಬಿಜೆಪಿ ಗುಣಗಾನ ಮಾಡುವವರು ಬಾಯಿ ಮುಚ್ಚಿಕೊಂಡು ಕೂತ್ಕೋಬೇಕು. ಇದೇನು ಬಿಜೆಪಿ ಕಾರ್ಯಕ್ರಮ ಅಂದುಕೊಂಡಿದ್ದೀರಾ? ಈ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದು. ಇದು ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮ, ನಿಮ್ಮಪ್ಪನ ಸರ್ಕಾರ ಅಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಇದು ಸಿದ್ದರಾಮಯ್ಯನ ಕಾರ್ಯಕ್ರಮ, ನಿಮ್ಮಪ್ಪನ ಕಾರ್ಯಕ್ರಮ ಅಲ್ಲ ಗೆಟ್‌ ಲಾಸ್ಟ್‌ ಅಂತ ಕಿಡಿಕಾರಿದರು. ನಮಗೂ ನಮ್ಮ ಪಾರ್ಟಿ ಸಿದ್ಧಾಂತಗಳಿರುತ್ತೆ. ನೀವು ನಿಮ್ಮ ಪಕ್ಷವನ್ನು ಗುಣಗಾನ ಮಾಡಿದರೆ, ನಾವು ನಮ್ಮ ಪಕ್ಷವನ್ನು ಗುಣಗಾನ ಮಾಡಬೇಕಾಗುತ್ತದೆ ಅಂತ ವಾರ್ನಿಂಗ್‌ ಕೊಟ್ಟಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ಬಿಜೆಪಿ ಸಂಸದ ಪಿ.ಸಿ ಮೋಹನ್‌.. ಪ್ರದೀಪ್‌ ಈಶ್ವರ್‌ ನಿಮಗೆ ಉತ್ಸಾಹ ಇದೆ. ಆದರೆ ನೀವು ಇಲ್ಲಿ ಕೂತ್ಕೊಂಡು ಇದು ಸಿದ್ದರಾಮಯ್ಯನ ಪ್ರೋಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದ ಇಲ್ಲಿ ಇರಬೇಕೋ ಹೋಗಬೇಕೋ‌ ಹೇಳಿ? ಅಂತ ಗುಡುಗಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಗಣ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಇಬ್ಬರನ್ನು ಮನವೊಲಿಸುವ ಪ್ರಯತ್ನ ಮಾಡಿದರು.

ಈ ಸುದ್ದಿಯನ್ನೂ ಓದಿ | ಕೋಲಾರದ ಚಿನ್ನ ನಟಿ ಸೌಂದರ್ಯ; 21 ವರ್ಷದ ಬಳಿಕ ಸಾವಿನ ವಿಚಾರ ಮುನ್ನೆಲೆಗೆ ಬಂದಿದ್ದೇಕೆ?