ರಥೋತ್ಸವಕ್ಕೆ ಚೇಳೂರು ತಾಲ್ಲೂಕು ತಹಸೀಲ್ದಾರ್ ಶ್ರೀನಿವಾಸ ನಾಯುಡು ಚಾಲನೆ
ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಹಣ್ಣು ಮತ್ತು ಹೂವುಗಳಿಂದ ಅಲಂಕಾರ ಗೊಳಿಸಿದ್ದ ರಥದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳನ್ನು ಇಟ್ಟಿದ್ದರು. ನೆರೆದಿದ್ದ ಭಕ್ತರು ರಥಕ್ಕೆ ದವನ, ಹೂವು, ಬಾಳೆಹಣ್ಣು ಎಸೆದು ಹರಿಕೆ ತೀರಿಸಿಕೊಂಡರು. ರಥೋತ್ಸವದ ಅಂಗವಾಗಿ ಭಕ್ತಾದಿಗಳು ಮಜ್ಜಿಗೆ ಪಾನಕದೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ,ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ಚೇಳೂರು ತಾಲ್ಲೂಕು ಚಿಲಕಲನೇರ್ಪು ಹೋಬಳಿಯ ತಿರುಮಲಾಪುರ ಲಕ್ಷಿö್ಮÃ ನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

ಚೇಳೂರು : ಚೇಳೂರು ತಾಲೂಕಿನ ಚಿಲಕಲನೇರ್ಪು ಹೋಬಳಿಯ ತಿರುಮಲಾಪುರ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಹೋಳಿ ಹಬ್ಬದ ಹುಣ್ಣಿಮೆ ದಿನದಿಂದು ಅದ್ಧೂರಿಯಿಂದ ನೇರವೇರಿತು. ದೇಶದಾದ್ಯಂತ ಇತಿಹಾಸ ಪ್ರಸಿದ್ಧ ಎಷ್ಟೋ ದೇವಾಲಯ ಗಳಲ್ಲಿ ಹಗಲಿನಲ್ಲಿ ಬ್ರಹ್ಮರಥೋತ್ಸವ ನಡೆದರೆ, ತಿರುಮಲಾಪುರ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವವು ಮಧ್ಯರಾತ್ರಿ ಅದರಲ್ಲೂ ಬೆಟ್ಟಗುಡ್ಡಗಳ ಮಧ್ಯೆ ಕಲ್ಲು ಬಂಡೆ ಗಳ ನಡುವೆ ಮರದ ರಥ ಚಲಿಸುವುದು ಇಲ್ಲಿನ ವೈಶಿಷ್ಟ್ಯ. ರಥೋತ್ಸವ ಸಲುವಾಗಿ ದೇವ ಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳ ಲಾಗಿತ್ತು ಮೂಲ ದೇವರಿಗೆ ಪಂಚಾಮೃತ ಅಭಿಷೇಕ ಹೋಮ ವೇದ ಉಪನಿಷತ್ತುಗಳ ಮಂತ್ರಗಳ ಘೋಷಣೆ ಮೊಳಗಿದವು.
ಇದನ್ನೂ ಓದಿ: Chikkaballapur News: ಅನ್ನಭಾಗ್ಯ 10 ಕೆ.ಜಿ ಅಕ್ಕಿ ವಿತರಣೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚಾಲನೆ
ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಹಣ್ಣು ಮತ್ತು ಹೂವುಗಳಿಂದ ಅಲಂಕಾರ ಗೊಳಿಸಿದ್ದ ರಥದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳನ್ನು ಇಟ್ಟಿದ್ದರು. ನೆರೆದಿದ್ದ ಭಕ್ತರು ರಥಕ್ಕೆ ದವನ, ಹೂವು, ಬಾಳೆಹಣ್ಣು ಎಸೆದು ಹರಿಕೆ ತೀರಿಸಿಕೊಂಡರು. ರಥೋ ತ್ಸವದ ಅಂಗವಾಗಿ ಭಕ್ತಾದಿಗಳು ಮಜ್ಜಿಗೆ ಪಾನಕದೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ,ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ರಥೋತ್ಸವಕ್ಕೆ ಚೇಳೂರು ತಾಲ್ಲೂಕು ತಹಸೀಲ್ದಾರ್ ಶ್ರೀನಿವಾಸ ನಾಯುಡು ಚಾಲನೆ ನೀಡಿದರು.
ರಥೋತ್ಸವದಲ್ಲಿ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಶಿರಸ್ತೇದಾರ್ ಎಸ್.ಎಲ್.ಸತೀಷ್. ಚಿಲಕಲನೇರ್ಪು ಹೋಬಳಿಯ ರಾಜಸ್ವ ನೀರಿಕ್ಷಕ ಮುನಿರಾಜ್ ಬೆಸ್ಕಾ ಎಂಜಿನಿಯರ್ ಟಿ.ಎನ್.ಸುಧಾಕರರೆಡ್ಡಿ. ಬುರುಡಗುಂಟೆ ಗ್ರಾ.ಪಂ. ಅಧ್ಯಕ್ಷಿಣಿ ಗಾಯಿತ್ರಿ ಭರತ್. ದೇವಾಲಯದ ಧರ್ಮದರ್ಶಿಗಳು. ರಥೋತ್ಸವದ ರೂವಾರಿಗಳು ಸುತ್ತಮುತ್ತಲಿನ ಜನ ಪ್ರತಿನಿಧಿಗಳು ವಿವಿಧ ಗ್ರಾಮಗಳ ಪ್ರಮುಖ ಮುಖಂಡರು ಸೇರಿದಂತೆ ದಾನಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಥೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರು ರಥೋತ್ಸವಕ್ಕೂ ಮುನ್ನ ದೇವಾಲಯದ ಮುಂದೆ ಶಾಸಕರು ಸಾರ್ವಜನಿಕರಿಗಾಗಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದರು. ವೀ ಈ ವೇಳೆ ಕೆಂಚಾರ್ಲಹಳ್ಳಿ ಸಬ್-ಇನ್‌ಸ್ಪೇಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೋಲೀಸ್ ಬಂದೋಬಸ್ತು ಏರ್ಪಡಿಸಿದ್ದರು.