Drone Prathap: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆಯೇ ಗಗನಾಗೆ ತಾಳಿ ಕಟ್ಟೇ ಬಿಟ್ಟ ಡ್ರೋನ್ ಪ್ರತಾಪ್
ಪ್ರತಾಪ್ ವೇದಿಕೆ ಮೇಲೆ ಗಗನಾಗೆ ತಾಳಿ ಕಟ್ಟೇ ಬಿಟ್ಟಿದ್ದಾರೆ. ಹಾಗಂತ ಇದು ರಿಯಲ್ ಆಗಿ ಅಲ್ಲ. ಭರ್ಜರಿ ಬ್ಯಾಚುಲರ್ಸ್ನಲ್ಲಿ 10 ಕಂಟೆಸ್ಟೆಂಟ್ಗಳಿಗೆ ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡಡಬೇಕು ಎಂಬ ಟಾಸ್ಕ್ ನೀಡಲಾಗಿದೆ. ಇದಕ್ಕಾಗಿ ಗಗನಾ ಹಾಗೂ ಡ್ರೋನ್ ಪ್ರತಾಪ್ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಾಲಾಶ್ರೀ ಅವರ ಅಭಿನಯದ ರಾಮಾಚಾರಿ ಸೀನ್ ಅನ್ನು ರೀಕ್ರಿಯೇಟ್ ಮಾಡಿದ್ದಾರೆ.

Drone Prathap and Gagana

ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಡ್ರೋನ್ ಪ್ರತಾಪ್ ಝೀ ಕನ್ನಡದಲ್ಲಿ ಶುರುವಾಗಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ( Bharjari Bachelors ) ಕಾಣಿಸಿಕೊಂಡಿದ್ದು ಇಲ್ಲಿ ಇವರ ಹವಾ ಭರ್ಜರಿ ಆಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ.
ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್ ಪ್ರತಾಪ್ ಎಲ್ಲರ ಕಣ್ಣುಕುಕ್ಕುವಂತೆ ಮಾಡುತ್ತಿದ್ದಾರೆ. ಮೊದಲ ಸುತ್ತಿನಲ್ಲೇ ಱಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಪ್ರತಾಪ್ ಬಳಿಕ ಮೈ ಚಳಿ ಬಿಟ್ಟು ಸಖತ್ ಸ್ಟೆಪ್ ಹಾಕಿದ್ದರು. ಬಳಿಕ ಕಿರುತೆರೆ ಇತಿಹಾಸದಲ್ಲೇ ಈ ವರೆಗೆ ಯಾರೂ ಮಾಡಿದ ಸಾಧನೆಯೊಂದನ್ನ ಪ್ರತಾಪ್ ಮಾಡಿದ್ದರು. ಅದೇನೆಂದರೆ ಈ ಶೋನಲ್ಲಿ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್ ತಂದು ಗಗನಾಗೆ ಸರ್ಪ್ರೈಸ್ ಕೊಟ್ಟಿದ್ದರು.
ಕನ್ನಡದ ಹೆಣ್ಣು ಮಗಳು 1000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಳೆ ಎಂದು ಹೆಲಿಕಾಪ್ಟರ್ನಲ್ಲೇ ಜೋರಾಗಿ ಹೇಳಿ, ಗಗನಾಗೆ ಅರಿಶಿನ ಕುಂಕುಮ ಕೊಟ್ಟು ಕಣ್ಣೀರು ಒರೆಸಿದ್ದರು. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಪ್ರತಾಪ್ ವೇದಿಕೆ ಮೇಲೆ ತಾಳಿ ಕಟ್ಟೇ ಬಿಟ್ಟಿದ್ದಾರೆ. ಹಾಗಂತ ಇದು ರಿಯಲ್ ಆಗಿ ಅಲ್ಲ. ಭರ್ಜರಿ ಬ್ಯಾಚುಲರ್ಸ್ನಲ್ಲಿ 10 ಕಂಟೆಸ್ಟೆಂಟ್ಗಳಿಗೆ ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡಡಬೇಕು ಎಂಬ ಟಾಸ್ಕ್ ನೀಡಲಾಗಿದೆ.
ಇದಕ್ಕಾಗಿ ಗಗನಾ ಹಾಗೂ ಡ್ರೋನ್ ಪ್ರತಾಪ್ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಾಲಾಶ್ರೀ ಅವರ ಅಭಿನಯದ ರಾಮಾಚಾರಿ ಸೀನ್ ಅನ್ನು ರೀಕ್ರಿಯೇಟ್ ಮಾಡಿದ್ದಾರೆ. ಇದೇ ವೇಳೆ ಡ್ರೋನ್ ಪ್ರತಾಪ್ ಸೇಮ್ ಟು ಸೇಮ್ ಕ್ರೇಜಿಸ್ಟಾರ್ನಂತೆ ರೆಡಿಯಾಗಿ ನಟನೆ ಮಾಡಿದ್ದಾರೆ. ಅಲ್ಲದೇ ರಾಮಾಚಾರಿ ಸಿನಿಮಾದಲ್ಲಿ ರವಿಚಂದ್ರನ್ ಅವರು ಮಾಲಾಶ್ರೀಗೆ ತಾಳಿ ಕಟ್ಟಿದ ಹಾಗೇ ಇಲ್ಲೂ ಕೂಡ ಡ್ರೋನ್ ಪ್ರತಾಪ್ ಗಗನಾಗೆ ತಾಳಿ ಕೊಟ್ಟಿದ್ದಾರೆ. ಇದನ್ನೆಲ್ಲ ಕಂಡು ಜಡ್ಜಸ್ ಆದ ರಚಿತ ರಾಮ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಫಿದಾ ಆಗಿದ್ದಾರೆ.
Rakshak Bullet: ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ರಕ್ಷಕ್ ಬುಲೆಟ್: ಕಾರಣವೇನು?