Sunday, 19th May 2024

ಭಾಗ್ಯಗಳ ಪರಿಣಾಮದ ಲೆಕ್ಕ ಕೊಡಬೇಕು

ಶಿಶಿರ ಕಾಲ

shishirh@gmail.xom

ಹಣವನ್ನು ಉಚಿತವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ನೇರವಾಗಿ ಕೊಟ್ಟರೆ ನಿಷ್ಪ್ರಯೋಜಕ ಎಂಬುದನ್ನು ‘ಗಿವ್ ಡೈರೆಕ್ಟ್’ ಸಂಸ್ಥೆಯ ಪ್ರಯೋಗ ಸಾಬೀತುಮಾಡಿದೆ. ಇಂಥ ಯೋಜನೆಗಳು ಚಿಕ್ಕದಾಗಿ ಪ್ರಯೋಗವಾದ ನಂತರವೇ ಜಾರಿಯಾದರೆ ಸರಿ. ಅದು ಬಿಟ್ಟು ‘ಇಂಥ ಯೋಜನೆಗಳನ್ನೆಲ್ಲ ಹೊಟ್ಟೆ ತುಂಬಿದವರಷ್ಟೇ ವಿರೋಧಿಸುತ್ತಾರೆ’ ಎನ್ನುವುದು ಮೂರ್ಖತನ.

ನನಗೆ ಬಹಳ ದಿನದಿಂದ ಅವನೇ ನೆನಪಾಗುತ್ತಿದ್ದಾನೆ- ಮೈಕೆಲ್ ಕ್ರೆಮರ್. ಆತ ಈ ಬಿಟ್ಟಿ ಭಾಗ್ಯಗಳ ಪರಿಣಾಮವನ್ನು ಲೆಕ್ಕ ಹಾಕುವುದು, ತಿಳಿಯು ವುದು ಹೇಗೆಂದು ಜಗತ್ತಿಗೆ ಕಲಿಸಿದವ, ಅದಕ್ಕೆ ನೊಬೆಲ್ ಪಡೆದವ. ಸಾಮಾನ್ಯವಾಗಿ ನೊಬೆಲ್ ಗೆದ್ದವರ ಹೆಸರು ವರ್ಷಕ್ಕೊಮ್ಮೆ ಕೇಳಿಬರುತ್ತದೆ. ಅದರಲ್ಲಿ ಭಾರತೀಯ ಮೂಲದವರಿದ್ದರೆ ಒಂದಷ್ಟು ಹೆಮ್ಮೆ ಪಡುವುದು ಬಿಟ್ಟರೆ ಆ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಆದರೆ ಅಲ್ಲೊಂದಿಷ್ಟು ಒಳಕ್ಕಿಳಿದು ನೋಡಿದರೆ ಪ್ರತಿಯೊಬ್ಬರ ಸಾಧನೆಯ ಹಿಂದೆ ಅವರೆದುರು ಒಂದು ದೊಡ್ಡ ಸಾಮಾಜಿಕ ಸಮಸ್ಯೆ ಮತ್ತು ಅದಕ್ಕೆ ಅವರ ಕೆಲಸದಿಂದಾಗಿ ಒದಗಿದ ಪರಿಹಾರ ಕಾಣಿಸುತ್ತದೆ. ಅವುಗಳಲ್ಲಿ ಹೆಚ್ಚಿನವು ಜಗತ್ತನ್ನೇ ಬದಲಾಯಿಸಿದವಾಗಿರುತ್ತವೆ. ಆ ಕಾರಣಕ್ಕೇ ಅವರು ನೊಬೆಲ್‌ಗೆ ಅರ್ಹರೆನಿಸುವುದು. ಮೈಕೆಲ್ ಕ್ರೆಮರ್ ಅಮೆರಿಕಾದ ಆರ್ಥಿಕ ತಜ್ಞ.

ನ್ಯೂಯಾರ್ಕಿನವನು. ಕಾಲೇಜು ಓದು ಮುಗಿಸಿದ್ದೇ ಆತ ಪ್ರಾಯೋಗಿಕ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದು ಕೀನ್ಯಾದ ಬುಸಿಯಾ ನಗರವನ್ನು. ಬುಸಿಯಾ ಕಡುಬಡತನವುಳ್ಳ, ಕೀನ್ಯಾ-ಉಗಾಂಡಾದ ಗಡಿಯಲ್ಲಿರುವ ಊರು. ಒಂದು ಉದ್ದನೆಯ ಹೆದ್ದಾರಿ ಈ ಊರಿನ ಮೂಲಕ ಹಾದು ಉಗಾಂಡಾ ಮುಟ್ಟುತ್ತದೆ. ಆ ಹೆದ್ದಾರಿಯೇ ಈ ಊರು. ಬುಸಿಯಾ ಆಫ್ರಿಕಾದ ದೊಡ್ಡ, ಜನಜಂಗುಳಿಯ, ಆದರೆ ಹಿಂದುಳಿದ ನಗರ. ಮೈಕೆಲ್ ಅಲ್ಲೊಂದು ವರ್ಷ ಹೈಸ್ಕೂಲ್ ಮಾಸ್ತರ್ ಆಗಿ ಕೆಲಸ ಮಾಡಿದ. ನಂತರ ಅಮೆರಿಕಕ್ಕೆ ಮರಳಿ ಪಿಎಚ್‌ಡಿ ಪಡೆದ. ಅದು ಬಡವರ ಅಭಿವೃದ್ಧಿಗೆ ಸಂಬಂಧಿಸಿದ, ಅವರನ್ನು ಮೇಲಕ್ಕೆತ್ತುವ ಅರ್ಥಶಾಸದ ಯೋಜನೆಗಳ ಕುರಿತಾದದ್ದು.

ಯಾವುದೇ ಅಭಿವೃದ್ಧಿಗೆ ಹಣವನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಎಂಬುದೇ ಆತನ ಪಿಎಚ್‌ಡಿ ವಿಷಯವಾಗಿತ್ತು. ನಂತರ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕೆಲಸವೂ ಸಿಕ್ಕಿತು. ಆದರೆ ಅದೇಕೋ ಮೈಕೆಲ್‌ಗೆ ಕೀನ್ಯಾದ ಬುಸಿಯಾ ಬಹಳ ನೆನಪಾಗುತ್ತಿತ್ತು. ಒಮ್ಮೆ ಆತ ಅಲ್ಲಿನ ಸ್ನೇಹಿತರನ್ನು ಭೆಟ್ಟಿಯಾಗಲು ಕೀನ್ಯಾಕ್ಕೆ ಹೋದ. ಅಲ್ಲಿ ಆತನ ಸ್ನೇಹಿತನೊಬ್ಬ, ಬುಸಿಯಾದಲ್ಲಿ ಒಂದು ಘೆಎu ಮಾಡುತ್ತಿದ್ದ ಕೆಲಸವೊಂದರ ಬಗ್ಗೆ ಮೈಕೆಲ್‌ಗೆ ಹೇಳಿದ. ಸರಕಾರೇತರ ಅಮೆರಿಕನ್ ಸಂಸ್ಥೆಯೊಂದು ಅಲ್ಲಿನ ಶೈಕ್ಷಣಿಕ ಉದ್ಧಾರಕ್ಕೆಂದು ಶಾಲೆಗಳಿಗೆ ಪುಸ್ತಕಗಳು ಮತ್ತು ಹಣವನ್ನು ಕೊಡುವ ಯೋಜನೆಯನ್ನು ಹಮ್ಮಿಕೊಂಡಿತ್ತು.

ಅದರ ಮೊದಲ ಹಂತವಾಗಿ ಏಳು ಶಾಲೆಗಳನ್ನು ಆಯ್ಕೆ ಮಾಡಬೇಕಿತ್ತು. ಅದು ಮೈಕೆಲ್ ಕ್ರೆಮರ್ ನ ಸ್ನೇಹಿತನ ಕೆಲಸ. ಆಯ್ಕೆಯಾಯಿತು, ಪುಸ್ತಕದ ಹಂಚಿಕೆಯೂ ಆಯಿತು. ಆದರೆ ಇದರ ಪರಿಣಾಮದ ಅಂದಾಜು, ಹಣದ ಸದುಪಯೋಗ ಆ ಸಂಸ್ಥೆಗೆ ಮನವರಿಕೆಯಾಗಲಿಲ್ಲ. ಸ್ನೇಹಿತ ಮತ್ತು ಆ ಸಂಸ್ಥೆಯವರು ಇದರ ಪರಿಣಾಮವನ್ನು ಅರಿಯುವುದು ಹೇಗೆ ಎಂದು
ಯೋಚಿಸುತ್ತಿದ್ದರು.

ಹೊಸ ಔಷಧಿಗಳ ಪ್ರಯೋಗಗಳು ನಡೆಯುವುದು ಹೀಗೆ: ಒಂದೇ ವಯಸ್ಸು, ಆರೋಗ್ಯಮಟ್ಟ, ಪ್ರದೇಶದ ವ್ಯಕ್ತಿಯನ್ನು
ಗುರುತಿಸುವುದು ಮತ್ತು ಅವರನ್ನು ಔಷಽಯ ಪ್ರಯೋಗಕ್ಕೆ ಬಳಸುವುದು. ಸಾವಿರ ಜನರ ಮೇಲೆ ಪ್ರಯೋಗ ಮಾಡ
ಬೇಕೆಂದರೆ ೨ ಸಾವಿರದಷ್ಟು ಎಲ್ಲ ಹೋಲುವ ಜನರನ್ನು ಆಯ್ಕೆ ಮಾಡಿಕೊಳ್ಳುವುದು. ನಂತರದಲ್ಲಿ ಕಂಪ್ಯೂಟರ್ ಬಳಸಿ,
ಪೂರ್ವಗ್ರಹವಿಲ್ಲದೆ ಜನರ ಗುಂಪನ್ನು ಇಬ್ಭಾಗವಾಗಿಸುವುದು.

ಅದರಲ್ಲಿ ಒಂದು ಸಾವಿರ ಮಂದಿಗೆ ಹಳೆಯ ಔಷಧಿ ಕೊಡುವುದು ಮತ್ತು ಇನ್ನೊಂದು ಸಾವಿರ ಮಂದಿಗೆ ಹೊಸ ಔಷಧ ಕೊಡುವುದು. ಈ ಮೂಲಕ ಎರಡೂ ಗುಂಪಿನ ಪರಿಣಾಮದ ವ್ಯತ್ಯಾಸವನ್ನು ಅಭ್ಯಸಿಸುವುದು, ತಿಳಿಯುವುದು. ಇದನ್ನು Zbಟಞಜ್ಢಿಛಿb ಇಟ್ಞಠ್ಟಿಟ್ಝ್ಝಛಿb SಜಿZ (ಇS) ಎನ್ನುತ್ತಾರೆ. ಈ ವಿಧಾನ ಔಷಽಯ ಪ್ರಾಯೋಗಿಕ ಅಭ್ಯಾಸಕ್ಕೆ, ಪರಿಣಾಮ ತಿಳಿಯಲು, ಹೇಳಿ ಮಾಡಿಸಿದ್ದು. ೧೯೪೦ರಲ್ಲಿ ಟಿಬಿ ಔಷಧ, ೧೯೬೦ರಲ್ಲಿ ಪೋಲಿಯೋ ಲಸಿಕೆ ಇವೆಲ್ಲ ಎಷ್ಟು ಪರಿಣಾಮಕಾರಿ ಎಂಬುದರ ಪ್ರಯೋಗ ಗಳಾಗಿದ್ದು ಹೀಗೆ. ನಂತರದಲ್ಲಿ ಈ ರೋಗಗಳನ್ನು ಸಂಪೂರ್ಣ ಹತೋಟಿಗೆ ತಂದದ್ದು ಇತಿಹಾಸ.

ಇS ಎಂದರೆ ಮೊದಲು ಜನರ ಬಗ್ಗೆ ಮಾಹಿತಿ ಕಲೆಹಾಕುವುದು, ನಂತರ ಅವರಲ್ಲಿ ಹೋಲಿಕೆಯಿರುವವರನ್ನು ರಾಶಿಹಾಕಿ ಕೊಳ್ಳುವುದು, ತರುವಾಯ ಅವರಲ್ಲಿ ಅರ್ಧದಷ್ಟು ಜನರನ್ನು ಪ್ರಯೋಗಕ್ಕೆ ಬಳಸಿ ಕೊಂಡು ಉಳಿದವರಿಗೆ ಹೋಲಿಕೆ ಮಾಡಿ ಪರಿಣಾಮ ಗ್ರಹಿಸುವುದು. ವೈದ್ಯಕೀಯ ರಂಗದಲ್ಲಿ ಸಾಕಷ್ಟು ಬಳಕೆಯಾದ ಈ ಪ್ರಯೋಗವನ್ನು ಅರ್ಥಶಾಸದಲ್ಲಿ, ಯೋಜನೆಯ ಪರಿಣಾಮವನ್ನು ಅರಿಯಲು ಬಳಸುವಂತೆ ಸೂಚಿಸಿದ್ದು ಮೈಕೆಲ್ ಕ್ರೆಮರ್.

ಅದಕ್ಕಿಂತ ಮೊದಲು ಆರ್ಥಿಕ ಯೋಜನೆಗಳು, ಬಡವರ ಅಭಿವೃದ್ಧಿ ಎಂದರೆ, ಪುಕ್ಸಟ್ಟೆ ಹಣ ಹಂಚುವುದು ಎಂದೇ ಎಲ್ಲರೂ
ಅಂದುಕೊಂಡಿದ್ದರು. ಈ ಬಾರಿ ನೂರು ಶಾಲೆಗೆ ಪಠ್ಯಪುಸ್ತಕ ಕೊಡುವ ಯೋಜನೆಯಿತ್ತು. ಈ ಬಾರಿ ಮೈಕೆಲ್ ಕ್ರೆಮರ್ ಸೂಚಿಸಿದಂತೆ, ನೂರರ ಬದಲಿಗೆ ಕೀನ್ಯಾದ ಇನ್ನೂರು ಶಾಲೆಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಲಾಯಿತು. ಆ ಎಲ್ಲ ಶಾಲೆ ಮತ್ತು ಸಮಾಜದ ಸ್ಥಿತಿಗತಿಗಳು ಒಂದೇ ಇರುವಂತೆ ನೋಡಿಕೊಳ್ಳಲಾಯಿತು. ಆ ಕಾಲದಲ್ಲಿ ಕೀನ್ಯಾದ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳು ಸುಲಭಕ್ಕೆ ಸಿಗುತ್ತಿರಲಿಲ್ಲ. ಸುಮಾರು ಆರು ಮಕ್ಕಳಿಗೆ ಒಂದು ಪಠ್ಯಪುಸ್ತಕವಿರುತ್ತಿತ್ತು.

ಅಷ್ಟೂ ಮಂದಿ ಒಂದೇ ಪುಸ್ತಕವನ್ನು ಪಾಳಿಯಲ್ಲಿ, ದಿನಕ್ಕೊಬ್ಬರಂತೆ ಮನೆಗೊಯ್ದು ಓದಿಕೊಳ್ಳಬೇಕಿತ್ತು. ಸಮಸ್ಯೆ ಬಹಳ ನೇರ,
ಸ್ಪಷ್ಟ. ಪುಸ್ತಕಕ್ಕೆ ಮಕ್ಕಳು ಪರದಾಡುವಾಗ ಅವರಿಗೆ ಪುಸ್ತಕ ಕೊಟ್ಟುಬಿಟ್ಟರೆ ಅದು ಫಲಿತಾಂಶದಲ್ಲಿ ಗೋಚರವಾಗಬೇಕಲ್ಲ!!
ಇದು ಅತ್ಯುತ್ತಮ ಯೋಜನೆಯೇ ಅಲ್ವೇ? ಹೀಗಿರುವ ಸ್ಥಿತಿಯಲ್ಲಿ ಪುಸ್ತಕ ಪಡೆದ ಶಾಲೆಯ ಮಕ್ಕಳು ಒಳ್ಳೆಯ ಮಾಕ್ ಪಡೆಯ ಲೇಬೇಕು ಅಲ್ವೇ? ಆದರೆ ಪಠ್ಯಪುಸ್ತಕ ಪಡೆದ ಮಕ್ಕಳು, ಪುಸ್ತಕ ಪಡೆಯದ ಉಳಿದ ಶಾಲೆಗಳ ಮಕ್ಕಳಿಗಿಂತ ಹೇಳಿಕೊಳ್ಳು ವಂಥ ವಿಶೇಷ ಸಾಧನೆಯನ್ನೇನು ಮಾಡಿರಲಿಲ್ಲ.

ಇದೆಲ್ಲ ತಿಳಿಯಲು, ಹೋಲಿಸಲು ಸಾಧ್ಯವಾಗಿದ್ದು ಈ ಯಾದೃಚ್ಛಿಕ ಪ್ರಯೋಗದ (ಇS) ನೆರವಿನಿಂದ. ಆ ಇನ್ನೂರೂ ಶಾಲೆಗಳ ಫಲಿತಾಂಶ ಹೆಚ್ಚು ಕಡಿಮೆ ಒಂದೇ ಹಂತದಲ್ಲಿತ್ತು. ಪಠ್ಯಪುಸ್ತಕವನ್ನು ಪುಕ್ಸಟ್ಟೆ ಪಡೆದ ಶಾಲೆಯ ವಿದ್ಯಾರ್ಥಿಗಳು ಸ್ವಲ್ಪ ಚೆನ್ನಾಗಿ ಮಾಡಿದ್ದರೂ ಅದು ಅಂದುಕೊಂಡಷ್ಟು ಪ್ರಯೋಜಕವೆನಿಸಲಿಲ್ಲ. ಬಹುಶಃ ಇಂಥ ಹೋಲಿಕೆಯ ಪ್ರಯೋಗ ಮಾಡದಿದ್ದಿದ್ದರೆ
ಖಂಡಿತವಾಗಿ ಪುಸ್ತಕ ಫ್ರೀ ಕೊಡುವುದು ಬಹಳ ಒಳ್ಳೆಯ ಕೆಲಸ ಎಂದೇ ಎಲ್ಲರೂ ನಂಬಿಕೊಳ್ಳುತ್ತಿದ್ದರು ಅಲ್ಲವೇ? ನಂತರದಲ್ಲಿ
ಗೊತ್ತಾಗಿದ್ದು, ಆ ಭಾಗದ ಮಕ್ಕಳಲ್ಲಿ ಹೆಚ್ಚಿನವರಿಗೆ ಜಂತುಹುಳು ಸಮಸ್ಯೆಯಿದೆಯೆಂದು. ಹೊಟ್ಟೆ ನೋವಿನ ಕಾರಣದಿಂದ ಅಲ್ಲಿನ ಮಕ್ಕಳು ಶಾಲೆ ತಪ್ಪಿಸುತ್ತಿದ್ದರು. ಹಾಗಾಗಿ ಕಲಿಕೆಯಲ್ಲಿ ಹಿಂದಿದ್ದರು.

ಪುಸ್ತಕ ಕೊಟ್ಟಿದ್ದೂ ಪ್ರಯೋಜನವಾಗಿರಲಿಲ್ಲ. ಇದಕ್ಕೆ ಬಡತನ, ಇನ್ಯಾವ ಸಾಮಾಜಿಕ ಸ್ಥಿತಿಯೂ ಕಾರಣವಾಗಿರಲಿಲ್ಲ. ನಂತರ ಅಲ್ಲಿನ ಮಕ್ಕಳಿಗೆ ಜಂತು ಔಷಧಿ ಕೊಡುವ ಕೆಲಸವಾಯಿತು. ಪರಿಣಾಮ ಗ್ರಹಿಸಲು ಮತ್ತೆ ಯಾದೃಚ್ಛಿಕ ಹೋಲಿಕೆಯ ಪ್ರಯೋಗ ಮಾಡಲಾಯಿತು. ಈ ಬಾರಿ ಫಲಿತಾಂಶ ಸ್ಪಷ್ಟ ಗೋಚರಿಸಿತು. ಯಾವ ಶಾಲೆಗಳಲ್ಲಿ ಹೊಟ್ಟೆಯ ಜಂತುಹುಳಕ್ಕೆ ಔಷಧ ಒದಗಿಸಲಾಯಿತೋ ಅಲ್ಲೆಲ್ಲ ಅತ್ಯಂತ ಒಳ್ಳೆಯ ಫಲಿತಾಂಶ ನಿಚ್ಚಳವಾಗಿ ಕಾಣಿಸಿತ್ತು. ನೋಡಿ, ಸಮಸ್ಯೆಯೇ ಬೇರೆಯಿತ್ತು. ಮೇಲ್ನೋಟಕ್ಕೆ ಸರಿಯಾದದ್ದು ಅಂದುಕೊಂಡ ಪರಿಹಾರವೇ ತಪ್ಪಿತ್ತು.

ಅಲ್ಲಿಂದ ಮುಂದಕ್ಕೆ Zbಟಞಜ್ಢಿಛಿb ಇಟ್ಞಠ್ಟಿಟ್ಝ್ಝಛಿb SಜಿZ ವಿಶೇಷ ಪ್ರಯೋಗವಾಗಿ ಬಹುತೇಕ ಎಲ್ಲ ಆರ್ಥಿಕ ಯೋಜನೆಗಳ ಅನುಷ್ಠಾನದಲ್ಲಿ ಬಳಕೆಯಾಗುತ್ತಿದೆ. ಉಚಿತ ಯೋಜನೆಗಳ ಪರಿಣಾಮವನ್ನು ಅಳೆಯಲು ಕಳೆದ ಮೂರು ದಶಕದಿಂದ ಜಗತ್ತಿನೆಲ್ಲೆಡೆ ಸರಕಾರಗಳು ಇದನ್ನು ಬಳಸಿಕೊಳ್ಳುತ್ತಿವೆ. ಇದರಿಂದ ಯೋಜನೆಯ ಪರಿಣಾಮದ ಮಟ್ಟವನ್ನು ತಿಳಿಯಲು ಸಾಧ್ಯವಾಗುತ್ತಿದೆ. ಆ ಮೂಲಕ ಯೋಜನೆ ಮುಂದುವರಿಸಬೇಕೋ ಅಥವಾ ಹಣವನ್ನು ಇನ್ನೆಲ್ಲಿಯಾದರೂ ಬಳಸಿಕೊಳ್ಳ
ಬೇಕೋ ಎನ್ನುವುದನ್ನು ಸರಕಾರಗಳು ನಿರ್ಧರಿಸುತ್ತಿವೆ.

ಈ ಪ್ರಯೋಗ, ಲೆಕ್ಕಾಚಾರ ಅದೆಷ್ಟು ಪರಿಣಾಮಕಾರಿಯಾಗಿದೆ ಎನ್ನುವುದಕ್ಕೆ ಈ ಪ್ರಯೋಗವನ್ನು ನಿರ್ದೇಶಿಸಿದ ಮೈಕೆಲ್ ಕ್ರೆಮರ್‌ಗೆ ಬಂದ ನೊಬೆಲ್ ಪ್ರಶಸ್ತಿಯೇ ಸಾಕ್ಷಿ. ಘೆಎu ಎಂದಾಕ್ಷಣ ಅವರೆಲ್ಲ ಕಳ್ಳರು, ಮತಾಂತರಿಗಳು ಎನ್ನುವ ಭಾವನೆ ಈಗೀಗ ಹೆಚ್ಚಿದೆ. ಆದರೆ ನಿಜವಾಗಿ ಆಫ್ರಿಕಾದಂಥ ಹಿಂದುಳಿದ ದೇಶಗಳಲ್ಲಿ, ಭಾರತದಂಥ ಮುಂದುವರಿಯುತ್ತಿರುವ ದೇಶಗಳಲ್ಲಿ ಒಳ್ಳೆಯ ಕೆಲಸ ಮಾಡುವ ಅದೆಷ್ಟೋ ಘೆಎuಗಳು ಇವೆ. ಅವೆಲ್ಲ ತಮ್ಮ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದಿಲ್ಲ.

ಬದಲಿಗೆ ಈ ಪ್ರಯೋಗದಿಂದ ಉಚಿತ ಯೋಜನೆಗಳ ಪರಿಣಾಮಗಳನ್ನು ನೇರವಾಗಿ ತಿಳಿಯುತ್ತ, ಹಣವನ್ನು ಸದ್ಬಳಕೆ ಮಾಡುತ್ತಾ ಮುಂದೆ ಸಾಗಿವೆ. ಅಲ್ಲದೆ ಅಮೆರಿಕಾ, ಐರೋಪ್ಯ ಒಕ್ಕೂಟದ ರಾಷ್ಟ್ರಗಳು, ಆಫ್ರಿಕಾ ದೇಶಗಳು, ಆಸ್ಟ್ರೇಲಿಯಾ ಹೀಗೆ ಜಗತ್ತಿನ ಬಹುತೇಕ ದೇಶಗಳ ಸರಕಾರಗಳು ಉಚಿತ ಆರ್ಥಿಕ ಯೋಜನೆಗಳ ಪರಿಣಾಮವನ್ನು ಅರಿಯುವುದು ಇS
ಮೂಲಕ. ಪರಿಣಾಮ ತಿಳಿದು ಪ್ರಯೋಜನಕ್ಕೆ ಬಾರದ ಉಚಿತ ಭಾಗ್ಯಗಳನ್ನು ನಿಲ್ಲಿಸಲಾಗುತ್ತದೆ ಮತ್ತು ಯೋಗ್ಯವಾದ
ಯೋಜನೆ, ಭಾಗ್ಯಗಳಷ್ಟೇ ಮುಂದುವರಿದುಕೊಂಡು ಹೋಗುತ್ತವೆ.

ಈ ಮೂಲಕ ಹಣ ವ್ಯರ್ಥ ಪೋಲಾಗುವುದಿಲ್ಲ. ಭಾಗ್ಯಗಳು ಯೋಗ್ಯರಿಗೆ, ತೀರಾ ಅಗತ್ಯವಿದ್ದವರಿಗೆ ತಲುಪಿ ಸರಕಾರಿ ಹಣ ಸದ್ಬಳಕೆಯಾಗುತ್ತದೆ. ನಮ್ಮಲ್ಲಿ ‘ಅಪಾತ್ರರಿಗೆ ದಾನ ಕೊಡಬಾರದು’ ಎನ್ನುವುದು ಎಲ್ಲರ ಗಟ್ಟಿ ನಿಲುವು. ಯೋಗ್ಯರಿಗೆ ಸಹಾಯ ಮಾಡಬೇಕು ಎನ್ನುವುದು ಇದರ ಹಿಂದಿರುವ ಆಶಯ. ಭಿಕ್ಷುಕರ ಗುಂಪಿನಲ್ಲಿ ಒಬ್ಬರಿಗೆ ಒಂದೈದು ರುಪಾಯಿ ಕೊಡುವಾಗ, ‘ಇವರಲ್ಲಿ ಯಾರು ಯೋಗ್ಯ’ ಎಂದು ಒಂದು ಕ್ಷಣ ವಿಚಾರ ಮಾಡುವುದಿಲ್ಲವೇ? ಈಗ ಕರ್ನಾಟಕದಲ್ಲಿ ಚುನಾವಣೆ ಯಾದಾಗಿನಿಂದ ಬಿಟ್ಟಿ ಭಾಗ್ಯದ್ದೇ ಚರ್ಚೆ, ಪರ-ವಿರೋಧ.

ವಿರೋಧ ಪಕ್ಷ ದವರು ಇದರ ಆರ್ಥಿಕ ಹೊರೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಈಗೇನಿದ್ದರೂ ಈ ಬಿಟ್ಟಿ ಭಾಗ್ಯಗಳು ಜಾರಿ  ಯಾಗಲೇಬೇಕು ಎಂಬ ಸ್ಥಿತಿ. ಕಡೇಪಕ್ಷ, ಇದೆಲ್ಲ ಯೋಜನೆಯ ಪರಿಣಾಮವೇನು ಎಂದು ತಿಳಿಯುವ ಕೆಲಸವಾದರೂ ಆಗಬೇಕಿದೆ. ಆದರೆ ಆ ಬಗ್ಗೆ ಯಾರಿಗೂ ಆಸಕ್ತಿಯೇ ಇದ್ದಂತಿಲ್ಲ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕೊಡುವುದರಿಂದ ಅದು ಯಾವ ಭಾಗದ, ವರ್ಗದ, ವಯೋಮಾನದ
ಮಹಿಳೆಯರ ಸಬಲೀಕರಣಕ್ಕೆ ಹೇಗೆ ಸಹಾಯಕವಾಯಿತು ಎನ್ನುವುದನ್ನು ತಿಳಿಯುವ ಕೆಲಸವಾದರೂ ಆಗಬೇಕು. ಇನ್ನು
ನಿರುದ್ಯೋಗಿಗಳಿಗೆ ಹಣ ಕೊಡುವುದು, ತಾಳಿ ಭಾಗ್ಯ, ತಾಯಿ ಭಾಗ್ಯ, ಅಕ್ಕಿ ಭಾಗ್ಯ, ಕರೆಂಟ್ ಭಾಗ್ಯ, ಉದ್ಯೋಗ ಖಾತ್ರಿ
ಇವೆಲ್ಲ ಭಾಗ್ಯಗಳ ಪರಿಣಾಮ ತಿಳಿಯುವ ಕೆಲಸವೂ ಆಗಬೇಕು. ಆ ಮೂಲಕ, ಯಾವ ಯೋಜನೆಯನ್ನು ಯಾರಿಗೆ
ಟಾರ್ಗೆಟ್ ಮಾಡಿದರೆ, ವಿಸ್ತರಿಸಿದರೆ ಅದು ನಿಜವಾಗಿಯೂ ಅವರ ಜೀವನವನ್ನು ಬದಲಾಯಿಸುತ್ತದೆ, ಮೇಲಕ್ಕೆತ್ತುತ್ತದೆ
ಎನ್ನುವ ಯೋಗ್ಯ ಲೆಕ್ಕಾಚಾರವಾಗಬೇಕು.

ಈ ಎಲ್ಲ ಆರ್ಥಿಕ ಹೊರೆಯನ್ನು ಇಡೀ ಸಮಾಜ ಹೊರಬೇಕಾಗಿರುವುದರಿಂದ ಇದೆಲ್ಲದರ ಪರಿಣಾಮದ ಲೆಕ್ಕವನ್ನು ಕೇಳುವ ಹಕ್ಕು ಸಮಾಜಕ್ಕಿದೆ. ಬಿಟ್ಟಿ ಭಾಗ್ಯವನ್ನು ಅನುಮೋದಿಸುವವರು ಇದೆಲ್ಲದರ ಪರಿಣಾಮವನ್ನು ಪುರಾವೆಯಿಲ್ಲದೆ ಹೇಳಿದರೆ ಒಪ್ಪಲಿಕ್ಕಾಗುವುದಿಲ್ಲ. ಇಂದು ಭಾಗ್ಯಗಳನ್ನು ಹಂಗಿಸುವ ವರ್ಗವು ಪರಿಣಾಮವನ್ನು ಪ್ರಶ್ನಿಸದಿರುವುದು ಖೇದಕರ. ಸುಮ್ಮನೆ ಹುಡುಕಿದರೆ ಜಗತ್ತಿನ ಎಲ್ಲೆಲ್ಲಿ ಯಾವ ರೀತಿಯ ಯಾದೃಚ್ಛಿಕ (Zbಟಞ) ಆರ್ಥಿಕ ಯೋಜನಾ ಪ್ರಯೋಗಗಳಾಗಿವೆ ಎನ್ನವುದು ತಿಳಿಯುತ್ತದೆ. ಅದನ್ನು ತಿಳಿದು ಕೆಲಸ ಮಾಡುವುದು ಸರಕಾರದ ಕೆಲಸ. ಆರ್ಥಿಕ ಯೋಜನೆಗಳು ಚಿಕ್ಕದಾಗಿ ಪ್ರಯೋಗವಾದ ನಂತರವೇ ಜಾರಿಯಾದರೆ ಸರಿ.

ಅದು ಬಿಟ್ಟು ಎಲ್ಲರಿಗೂ ಉಚಿತವೆನ್ನುವ ಯೋಜನೆಗಳ ಔಚಿತ್ಯವನ್ನು ಪ್ರಶ್ನಿಸದೇ ಇರುವುದು, ಇದನ್ನೆಲ್ಲಾ ಹೊಟ್ಟೆ
ತುಂಬಿದವರಷ್ಟೇ ವಿರೋಽಸುತ್ತಾರೆ ಎನ್ನುವುದು ಮೂರ್ಖತನ. ಹಣವನ್ನು ಉಚಿತವಾಗಿ, ಆರ್ಥಿಕವಾಗಿ ಹಿಂದುಳಿದ
ವರಿಗೆ ನೇರವಾಗಿ ಕೊಟ್ಟರೆ ಅದು ನಿಷ್ಪ್ರಯೋಜಕ ಎನ್ನುವುದನ್ನು ‘ಗಿವ್ ಡೈರೆಕ್ಟ್’ ಎಂಬ ಸಂಸ್ಥೆಯ ಪ್ರಯೋಗವು ಸಾಬೀತು ಮಾಡಿದೆ. ಶಿಕ್ಷಣವನ್ನು ಉಚಿತವಾಗಿ ನೀಡಬೇಕು, ಆರೋಗ್ಯ ವಿಮೆಯನ್ನು ಕಡಿಮೆ ದರದಲ್ಲಿ ನೀಡಬೇಕು ಎಂದು ಅದೆಷ್ಟೋ ಆರ್ಥಿಕ ಪ್ರಯೋಗಗಳು ಹೇಳುತ್ತವೆ. ಆದರೆ, ಉಚಿತವಾಗಿ ಎಲ್ಲರಿಗೂ ಸಾರ್ವತ್ರಿಕ ಕೊಡುವುದನ್ನು ಇಲ್ಲಿಯವರೆಗಿನ ಅದ್ಯಾವ ಪ್ರಯೋಗಗಳೂ ಅನುಮೋದಿಸುವುದಿಲ್ಲ.

ಈಗ ಕರ್ನಾಟಕದ ಆಡಳಿತ ಪಕ್ಷವು ಹೇಳಿದ ಮಾತಿಗೆ ತಪ್ಪಲಾಗದ ಸ್ಥಿತಿಯಲ್ಲಿದೆ. ಕೊನೇಪಕ್ಷ ಇದೊಂದು ಸಾಮಾಜಿಕ
ಪ್ರಯೋಗವಾಗಲಿ. ಯಾವ ಭಾಗ್ಯಗಳು ಯಾರಿಗೆ ಪ್ರಯೋಜನಕಾರಿಯಾಗಿವೆ, ಮು-ತ್ತಿನ ಭಾಗ್ಯಗಳು ಎಲ್ಲಿ, ಹೇಗೆ, ಯಾವ ವರ್ಗವನ್ನು ಮೇಲೆತ್ತುತ್ತವೆ ಎನ್ನುವ ಲೆಕ್ಕಾಚಾರ ವನ್ನಾದರೂ ಸರಕಾರ ಮುಂಬರುವ ದಿನಗಳಲ್ಲಿ ಜನರ ಮುಂದಿಡಲಿ. ಆ ಕೆಲಸ ಮುಂದಿನ ಚುನಾವಣೆಯೊಳಗೇ ನಡೆಯಲಿ. ಹಾಗೆ ಲೆಕ್ಕ ಹಾಕಿ ಯೋಗ್ಯರಿಗಷ್ಟೇ ಬರುವ ವರ್ಷಗಳಲ್ಲಿ ಈ ಭಾಗ್ಯಗಳು ಸಿಗಲಿ ಮತ್ತು ಅವರ ಉದ್ಧಾರ ಈ ಮೂಲಕವಾಗಿ ನಡೆಯಲಿ- ಇದು ಸದಾಶಯ. ಅದು ಬಿಟ್ಟು ನಾವು ಬಿಟ್ಟಿ ಭಾಗ್ಯವನ್ನು ಕೊಟ್ಟು ಸಮಾಜದ ಉದ್ಧಾರ ಮಾಡಿದ್ದೇವೆ ಎಂದು ಬಾಯಲ್ಲಿ ಪಟಾಕಿ ಹೊಡೆದರೆ ಸರಕಾರದ ಮಾತನ್ನು ನಂಬುವುದಾದರೂ ಹೇಗೆ? ಪರಿಣಾಮದ ಲೆಕ್ಕ ಕೊಡುವಲ್ಲಿಯವರೆಗೆ ಈ ಯೋಜನೆಗಳ ಪ್ರಯೋಜನ ಜನರಿಗೆ ಮಾನವರಿಕೆಯಾಗುವುದಿಲ್ಲ. ಆರ್ಥಿಕ ಬಿಸಿ ಮುಟ್ಟಿದವರೆಲ್ಲ ಇದನ್ನು ಪ್ರಶ್ನಿಸುವುದು ನಿಲ್ಲುವುದಿಲ್ಲ, ನಿಲ್ಲಲೂಬಾರದು.

error: Content is protected !!