ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಇವರು ಜಾರ್ಜ್‌ ಸೊರೋಸ್‌ ಪ್ರತಿರೂಪ

ತಾನು ರಫೆಲ್ ಯುದ್ಧವಿಮಾನ ಖರೀದಿಯ ಕಡತ ಗಳ ಪರಿಶೀಲನೆ ನಡೆಸಿದ್ದಾಗಿ ಸೊರೋಸ್‌ನ ‘ಓಪನ್ ಸೊಸೈಟಿ ಫೌಂಡೇಷನ್’ ಹೇಳಿತ್ತು

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಜಾರ್ಜ್ ಸೊರೋಸ್ ಎಂಬ ಅಪಾಯಕಾರಿ ವ್ಯಕ್ತಿಯ ಬಗ್ಗೆ ಜಗತ್ತಿನ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ರಾಹುಲ್ ಗಾಂಧಿಯವರು ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಭಾರತದ ಸಾರ್ವಭೌಮತ್ವ ವನ್ನು ಬಲಿಕೊಟ್ಟು ಆತನ ಜತೆ ಕೈಜೋಡಿಸುತ್ತಿರುವುದು ಆತಂಕಕಾರಿ ಸಂಗತಿ.

ರಾಹುಲರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸೊರೋಸ್ ಸಂಸ್ಥೆಯ ಜತೆ ನೇರಸಂಪರ್ಕ ಹೊಂದಿರುವಸುನಿತಾ ವಿಶ್ವನಾಥ್ ಎಂಬ ಮಹಿಳೆಯ ಜತೆ ಸಭೆ ನಡೆಸಿದ್ದರು. ತಾನು ರಫೆಲ್ ಯುದ್ಧವಿಮಾನ ಖರೀದಿಯ ಕಡತ ಗಳ ಪರಿಶೀಲನೆ ನಡೆಸಿದ್ದಾಗಿ ಸೊರೋಸ್‌ನ ‘ಓಪನ್ ಸೊಸೈಟಿ ಫೌಂಡೇಷನ್’ ಹೇಳಿತ್ತು. ಆ ವರದಿಯ ಆಧಾರದ ಮೇಲೆ ರಾಹುಲರು ಆರೋಪ ಮಾಡಿದ್ದರು. ನಂತರ ನ್ಯಾಯಾಲಯವು ಕಾಂಗ್ರೆಸ್ಸಿಗೆ ಛೀಮಾರಿ ಹಾಕಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ವೇಳೆ ನಡೆದ ಹಿಂಸಾ ಚಾರದ ಹಿಂದಿದ್ದ ವ್ಯಕ್ತಿಯಾದ ಹರ್ಷ ಮಂದೆರ್‌ನ ಸಂಸ್ಥೆಗೆ ಜಾಜ್ ಸೊರೋಸ್ ನೇರವಾಗಿ ಹಣಸಹಾಯಮಾಡಿದ್ದ. ಈ ಹರ್ಷ ಮಂದೆರ್ ಯುಪಿಎ ಸರಕಾರದ ಅವಧಿಯಲ್ಲಿ ಸೋನಿಯಾ ಗಾಂಧಿಯವರ ಅತ್ಯಾಪ್ತನಾಗಿದ್ದ.

ರಾಹುಲರು ನಡೆಸಿದ ಭಾರತ್ ಜೋಡೋ ಯಾತ್ರೆಯು ಕರ್ನಾಟಕವನ್ನು ಪ್ರವೇಶಿಸಿದಾಗ, ‘ಓಪನ್ ಸೊಸೈಟಿ ಫೌಂಡೇ ಷನ್’ನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಸಲೀಲ್ ಶೆಟ್ಟಿ ಅದರಲ್ಲಿ ಭಾಗವಹಿಸಿದ್ದ. ಭಾರತದ ಆರ್ಥಿಕ ವೇಗಕ್ಕೆ ಕಡಿವಾಣ ಹಾಕಲು ಸಂಚುಹೂಡಿರುವ ಜಾರ್ಜ್ ಸೊರೋಸ್, ಮೋದಿಯವರ ವಿರುದ್ಧ ಹಲವು ಸುಳ್ಳು ನಿರೂಪಣೆಗಳನ್ನು ಮಾಡುವ ದೊಡ್ಡ ತಂಡವನ್ನೇ ಹುಟ್ಟುಹಾಕಿದ್ದಾನೆ.

ತಮ್ಮ ದೇಶದ ಸಾರ್ವಭೌಮತ್ವಕ್ಕೇ ಧಕ್ಕೆ ತರುವಂಥ ದೇಶವಿರೋಧಿ ಕೆಲಸಗಳಲ್ಲಿ ತೊಡಗಿರುವವರ ಪರವಾಗಿ ನಿಂತು ಧನಸಹಾಯ ಮಾಡುವ ಮೂಲಕ, ಆ ದೇಶಗಳಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಸೊರೋಸ್ಮಾಡುತ್ತಲೇ ಬಂದಿದ್ದಾನೆ. ಈತ ಹುಟ್ಟಿ ಬೆಳೆದ ದೇಶವಾದ ಹಂಗರಿ ಇವನನ್ನು ಉಚ್ಚಾಟಿಸಿದೆ. ಜಗತ್ತಿನ ಯಾವುದೇಮೂಲೆಯಲ್ಲೂ ಅರಾಜಕತೆ ಸೃಷ್ಟಿಸುವ ದೊಡ್ಡದೊಂದು ತಂಡ ಈತನ ಬಳಿಯಿದೆ.

‘ಓಪನ್ ಸೊಸೈಟಿ ಫೌಂಡೇಷನ್’ ಎಂಬ ಎನ್‌ಜಿಒ ಮೂಲಕ ವಿವಿಧ ದೇಶಗಳ ವಿಶ್ವವಿದ್ಯಾಲಯ, ಎನ್‌ಜಿಒ, ಸಂಶೋಧನಾ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಹೆಸರಿಗೆ ದಾನದ ಮೂಲಕ ಹಣ ನೀಡಿ, ದೇಶವಿರೋಧಿ ಕೃತ್ಯಗಳನ್ನು ಪ್ರಚೋದಿಸಿ, ಅಲ್ಲಿನ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಾನೆ ಸೊರೋಸ್.

scroll.in ಎಂಬ ಮಾಧ್ಯಮಕ್ಕೆ ಹೀಗೆಯೇ ಆತ ಧನಸಹಾಯ ಮಾಡಿದ್ದ. ಎಡಚರು ನಿರ್ವಹಿಸುತ್ತಿರುವಈ ಮಾಧ್ಯಮವು ವಸ್ತುನಿಷ್ಠ ಕೆಲಸವನ್ನು ಮಾಡುತ್ತಿಲ್ಲ. ಪ್ರಧಾನಿ ಮೋದಿಯವರ ವಿರುದ್ಧದ ಸುದ್ದಿಯನ್ನು ಇದುಸದಾ ಪ್ರಕಟಿಸುತ್ತಿರುತ್ತದೆ. ಅದಾನಿಯವರನ್ನು ಎಳೆತಂದು ಮೋದಿಯವರ ವಿರುದ್ಧದ ನಿರೂಪಣೆ ರೂಪಿಸುವು ದರಲ್ಲಿ ಈ ಮಾಧ್ಯಮ ಪ್ರಮುಖ ಪಾತ್ರ ವಹಿಸಿತ್ತು. ಭಾರತದ ಹಲವು ಪತ್ರಕರ್ತರನ್ನು ತನ್ನ ಫೌಂಡೇಷನ್‌ನ ಫೆಲೋಶಿಪ್ ವಿಭಾಗದಲ್ಲಿ ಸೊರೋಸ್ ನೇಮಿಸಿಕೊಂಡಿ ದ್ದಾನೆ. ಕಾಶ್ಮೀರಿ ಮೂಲದ ಬಷರತ್ ಪೀರ್ ಎಂಬ ಪತ್ರಕರ್ತ ಈ ಫೌಂಡೇಷನ್‌ನಲ್ಲಿ ೨೦೦೯-೨೦೧೦ರ ನಡುವೆ ಫೆಲೋಶಿಪ್ ಮಾಡಿದ್ದ. ನಂತರ ಈತ ಕಾಶ್ಮೀರದಲ್ಲಿ ದ್ದುಕೊಂಡು ಪಾಕಿಸ್ತಾನದ ಪರವಾದ ನಿರೂಪಣೆಯನ್ನು ಪ್ರಚಾರ ಮಾಡಿ, ಅಲ್ಲಿನ ಮುಸಲ್ಮಾನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದ.

‘ಕರ್ಫ್ಯೂ ನೈಟ್’ ಎಂಬ ಪುಸ್ತಕದ ಮೂಲಕ ಕಾಶ್ಮೀರಿ ಉಗ್ರರಿಗೆ ಅಮಾಯಕರ ಪಟ್ಟ ಕಟ್ಟುವ ನಿರೂಪ ಣೆಯನ್ನು ಮಾಡಿದ್ದ. ಸೊರೋಸ್ ತನ್ನ ಸಂಸ್ಥೆಯ ಮೂಲಕ ಭಾರತದೊಳಗಿನ ಕೆಲ ಪ್ರಭಾವಿಗಳಿಗೆ ಧನಸಹಾಯ ಮಾಡಿ, ಸರಕಾರದ ವಿರುದ್ಧ ಸುಳ್ಳು ನಿರೂಪಣೆ ಸೃಷ್ಟಿಸುವ ಕೆಲಸ ಮಾಡಿಸಿದ್ದಾನೆ. ಇಂದಿರಾ ಜೈಸಿಂಗ್ ಎಂಬ ವಕೀಲೆಯ ‘ಲಾಯರ‍್ಸ್ ಕಲೆಕ್ಟಿವ್’ ಎಂಬ ಎನ್‌ಜಿಒ ಸಂಸ್ಥೆಗೆ ತನ್ನ ಫೌಂಡೇಷನ್ ಮೂಲಕ ಸೊರೋಸ್ ಸುಮಾರು ನಾಲ್ಕು ಕೋಟಿ ಹತ್ತು ಲಕ್ಷ ರು. ಹಣವನ್ನು ನೀಡಿದ್ದಾನೆಂದು ಹೇಳಲಾಗುತ್ತದೆ. ಈ ಸಂಸ್ಥೆಯು ದೇಶವಿರೋಧಿ ನಿರೂಪಣೆ ಗಳನ್ನು ಪ್ರಚಾರ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ’ಯ ಹಲವು ನಿಯಮಗಳನ್ನು ಗಾಳಿಗೆ ತೂರಿದ್ದ ಕಾರಣ ಅದರ ಪರವಾನಗಿಯನ್ನು ರದ್ದುಮಾಡಲಾಗಿತ್ತು. ವಿದೇಶದಿಂದ ಬಂದ ದೇಣಿಗೆ ಹಣವನ್ನು ಈ ಸಂಸ್ಥೆಯು ಭಾರತದಲ್ಲಿ ರಾಜಕೀಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದರು.

ಈಕೆಯ ಸಂಸ್ಥೆಯಲ್ಲಿದ್ದ ವಕೀಲರಿಗೆ ಸರ್ವೋಚ್ಚ ನ್ಯಾಯಾಲಯವು ನೋಟಿಸ್ ನೀಡಿ ಹಾಜರಾಗುವಂತೆ ಸೂಚಿಸಿತ್ತು. ನಂತರ ಸಿಬಿಐ 2018ರಲ್ಲಿ ಕೇಸನ್ನು ದಾಖಲಿಸಿಕೊಂಡು ತನಿಖೆಗೆ ಚಾಲನೆ ನೀಡಿತ್ತು. ಇಂದಿರಾ ಜೈಸಿಂಗ್‌ರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ದೇಶವಿರೋಽ ಸೊರೋಸ್ ಜತೆ ಕೈಜೋಡಿಸುವ ರಾಹುಲರು, ಸಿಬಿಐ ನಡೆಸಿದ್ದ ಈ ದಾಳಿಯನ್ನು ರಾಜಕೀಯೀ ಕರಣಗೊಳಿಸಿದ್ದರು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಭಾಷಣವೊಂದರಲ್ಲಿ ಇಂದಿರಾ ಜೈಸಿಂಗ್, “ಭಾರತದಲ್ಲಿ ರಾಜಕೀಯ ಹಕ್ಕುಗಳ ಅಗತ್ಯವಿದ್ದು, ಪ್ರಜಾಪ್ರಭುತ್ವವು ಅಪಾಯದಲ್ಲಿದೆ" ಎಂದು ಹೇಳಿದ್ದರು.

“ಭಾರತದಲ್ಲಿ ಎಲ್ಲರಿಗೂ ಸಮಾನವಾದಂಥ ಸಾಮಾಜಿಕ ನ್ಯಾಯ ಸಿಗುವುದಿಲ್ಲ" ಎಂಬ ಸುಳ್ಳು ನಿರೂಪಣೆ ಯನ್ನು ಪ್ರಚಾರ ಮಾಡಿದ್ದರು. ಜಾರ್ಜ್ ಸೊರೋಸ್ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಮರ್ತ್ಯಸೇನ್ ಈ ಇಬ್ಬರೂ ‘ನಾಮತಿ’ ಎಂಬ ಎನ್‌ಜಿಒನಲ್ಲಿ ಸಲಹೆಗಾರರಾಗಿದ್ದಾರೆ.

ಈ ಸಂಸ್ಥೆಯ ಹಣದ ಮೂಲ- ‘ಓಪನ್ ಸೊಸೈಟಿ ಫೌಂಡೇಷನ್’. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದಲ್ಲಿ ಪೌರತ್ವ ನೀಡುವ ವಿಷಯವನ್ನು ರಾಜಕೀಯೀಕರಣಗೊಳಿಸಿದ್ದಅಮರ್ತ್ಯಸೇನ್, “ಭಾರತದಲ್ಲಿ ಅಲ್ಪಸಂಖ್ಯಾತರ ಪಾತ್ರವನ್ನು ನಿಯಂತ್ರಿಸುವ ಸಲುವಾಗಿ ಈ ಕಾಯ್ದೆಯನ್ನುಜಾರಿಗೆ ತರಲಾಗುತ್ತಿದೆ" ಎಂದು ಸುಳ್ಳು ಹೇಳಿದ್ದರು. ಇವರ ಬಹುತೇಕ ಅಂಕಣಗಳು ಸೊರೋಸ್ ಬೆಂಬಲಿತ scroll.in ಮತ್ತು The Wire ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು. ಅದಾನಿಯವರ ವಿರುದ್ಧ ಹಿಂಡನ್ ಬರ್ಗ್ ಸಂಶೋ ಧನಾ ಸಂಸ್ಥೆ ನೀಡಿದ್ದ ವರದಿಯ ಹಿಂದೆ ಸೊರೋಸ್ ಕೈವಾಡವಿದೆ ಎನ್ನಲಾಗುತ್ತದೆ. ಹಣ ಮಾಡುವ ಉದ್ದೇಶ ದಿಂದ 1992ರಲ್ಲಿ ಇಂಗ್ಲೆಂಡ್‌ನ ಷೇರು ಮಾರುಕಟ್ಟೆ ಯನ್ನೇ ಹಾಳುಮಾಡಿದ್ದ ಸೊರೋಸ್, ಈ ರೀತಿಯ ವರದಿ ತಯಾರಿಸಿ ಭಾರತೀಯ ಷೇರು ಮಾರುಕಟ್ಟೆಯನ್ನೂ ಹಾಳು ಮಾಡುವುದು ಕಷ್ಟವೇನಲ್ಲ.

ಇಸ್ರೇಲ್‌ನಲ್ಲಿರುವ ಹಲವು ದೇಶವಿರೋಧಿ ಎನ್‌ಜಿಒಗಳಿಗೆ ಈತನ ಫೌಂಡೇಷನ್ ಮೂಲಕ ಹಣ ನೀಡಲಾಗುತ್ತಿದೆ. ‘ಪಾಪ್ಯುಲರ್ ಫ್ರಂಟ್ ಫಾರ್ ಲಿಬರೇಷನ್ ಆಫ್‌ ಪ್ಯಾಲೆಸ್ತೀನ್’ ಸಂಘಟನೆಯನ್ನು ಅಮೆರಿಕ ಮತ್ತು ಐರೋಪ್ಯ ದೇಶಗಳು ‘ಭಯೋತ್ಪಾದಕ ಸಂಘಟನೆ’ ಎಂದು ಹೇಳಿವೆ. ಈ ಸಂಸ್ಥೆಯೊಂದಿಗೆ ನೇರಸಂಬಂಧ ಹೊಂದಿರುವವ್ಯಕ್ತಿಗಳಿಗೆ ಸೊರೋಸ್ ತನ್ನ ಸಂಸ್ಥೆಯ ಮೂಲಕ ಹಣಸಹಾಯ ಮಾಡುತ್ತಿದ್ದಾನೆ.

ಇಂಗ್ಲೆಂಡ್‌ನ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ BLACK WEDNESDAY ಯ ಹಿಂದಿದ್ದುದು ಜಾರ್ಜ್ ಸೊರೋ ಸ್‌ನ ಕೈವಾಡ. ಷೇರು ಮಾರುಕಟ್ಟೆಯಲ್ಲಿ ಪೌಂಡ್ಸ್ ಪಾತಾಳಕ್ಕೆ ಕುಸಿಯುತ್ತಿದ್ದಾಗಿನ ಸಂದರ್ಭ ವನ್ನು ಬಳಸಿಕೊಂಡು, ಸುಮಾರು ಒಂದು ಬಿಲಿಯನ್ ಪೌಂಡ್ ಕರೆನ್ಸಿಯನ್ನು ಬ್ಯಾಂಕಿನಿಂದ ಸಾಲ ಪಡೆದು, ಷೇರು ಮಾರುಕಟ್ಟೆಯಲ್ಲಿ ಇಂಗ್ಲೆಂಡ್ ನಿಗದಿಪಡಿಸಿದ್ದ ಮಾರಾಟ ಬೆಲೆಯ ಮಿತಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ. ಅಷ್ಟೊಂದು ದೊಡ್ಡ ಮಟ್ಟದ ಮಾರಾಟವನ್ನು ಕಂಡ ಮಾರುಕಟ್ಟೆಯ ಇತರ ಹೂಡಿಕೆದಾರರು ಗಾಬರಿಗೊಂಡು ತಮ್ಮಲ್ಲಿದ್ದ ಅಷ್ಟೂ ಪೌಂಡ್ ಕರೆನ್ಸಿಯನ್ನು ಮಾರತೊಡಗಿದರು. ಮಾರಾಟ ಹೆಚ್ಚಾದಂತೆ ಪೌಂಡಿನ ಮೌಲ್ಯ ಮತ್ತಷ್ಟು ಪಾತಾಳಕ್ಕೆ ಕುಸಿಯಿತು. ಆಗ ಸೊರೋಸ್ ಸುಮಾರು 10 ಬಿಲಿಯನ್ ನಷ್ಟು ಕರೆನ್ಸಿಯನ್ನು ಖರೀದಿಸಿ, ಇಂಗ್ಲೆಂಡ್ ನಿಗದಿಪಡಿಸಿದ್ದ ಮಾರಾಟ ಬೆಲೆಯ ಮಿತಿಗೆ ಮಾರಿ, ಒಂದೇ ದಿನದಲ್ಲಿಒಂದು ಬಿಲಿಯನ್ ಪೌಂಡ್‌ನಷ್ಟು ಲಾಭ ಮಾಡಿದ. ಈತ ಸೃಷ್ಟಿಸಿದ್ದ ಕೃತಕ ಕರೆನ್ಸಿ ಅಭಾವದಿಂದಾಗಿ ಇಂಗ್ಲೆಂಡ್‌ನಮಾರುಕಟ್ಟೆಯೇ ಅಲುಗಾಡಿತ್ತು, ಬ್ಯಾಂಕುಗಳು ಕರೆನ್ಸಿಯನ್ನು ನೀಡಲಾಗದೆ ಅಲ್ಲಿನ ವಿದೇಶಿ ವಿನಿಮಯವು ಪಾತಾಳಕ್ಕೆ ಕುಸಿದಿತ್ತು. ಈತ ನಡೆಸಿದ್ದ ಹಗರಣದಿಂದ ತಲ್ಲಣ ಗೊಂಡಿದ್ದ ಐರೋಪ್ಯ ದೇಶಗಳು ತಮ್ಮ ಆರ್ಥಿಕತೆಯನ್ನು ಮರಳಿ ಹಳಿಗೆ ತಂದುಕೊಳ್ಳಲು ಸುಮಾರು 15 ವರ್ಷಗಳೇ ಬೇಕಾದವು.

‘ಬ್ಯಾಂಕ್ ಆಫ್ ಇಂಗ್ಲೆಂಡ್’ ಅನ್ನು ಮುಳುಗಿಸಿದಾತ ‌ಎಂಬ ಹಣೆಪಟ್ಟಿ ಜಾರ್ಜ್ ಸೊರೋಸ್‌ಗಿದೆ. 19 ವರ್ಷಗಳ ಕಾಲ ಇಂಗ್ಲೆಂಡನ್ನು ಆಳುತ್ತಿದ್ದ ಕನ್ಸರ್ವೇಟಿವ್ ಪಕ್ಷವು ಈತನ ಇಂಥ ಕಿತಾಪತಿಯಿಂದಾಗಿ ಅಧಿಕಾರ ಕಳೆದುಕೊಳ್ಳುವಂತಾಯಿತು, ನಂತರ ಲೇಬರ್ ಪಕ್ಷವು ಅಧಿಕಾರಕ್ಕೆ ಬಂತು.

ಫ್ರಾನ್ಸ್‌ನ ಷೇರು ಮಾರುಕಟ್ಟೆಯಲ್ಲಿ, ಕಂಪನಿಗಳ ಒಳಮಾಹಿತಿಯನ್ನು ಬಳಸಿಕೊಂಡು ಹಣ ಮಾಡಿದಆರೋಪದ ಮೇಲೆ ಅಲ್ಲಿನ ನ್ಯಾಯಾಲಯವು ಈತನನ್ನು ದೋಷಿ ಎಂದು ಘೋಷಿಸಿತ್ತು. ಈತ ಥಾಯ್ಲೆಂಡ್,ಮಲೇಷ್ಯಾ ಮತ್ತು ರಷ್ಯಾ ದೇಶ ಗಳಲ್ಲೂ ಇದೇ ಮಾದರಿಯಲ್ಲಿ ಹಣ ಮಾಡಿ ಪರಾರಿಯಾಗಿದ್ದವ. ಹೀಗೆ ಗಳಿಸಿದ ದುಡ್ಡನ್ನು ಜಗತ್ತಿನ ವಿವಿಧ ದೇಶಗಳ ಆರ್ಥಿಕ ನೀತಿಗಳ ಮತ್ತು ಅಲ್ಲಿನ ಜನರ ಮೇಲೆ ಪ್ರಭಾವ ಬೀರಲು ಬಳಸುವ ಮೂಲಕ, ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಸೊರೋಸ್ ನಿರಂತರವಾಗಿ ಮಾಡುತ್ತಾ ಬಂದಿದ್ದಾನೆ. ತಾವಿರುವ ದೇಶದ ಸಾರ್ವಭೌಮತ್ವಕ್ಕೇ ಧಕ್ಕೆ ತರುವಂಥ ದೇಶವಿರೋಧಿ ಕೆಲಸಗಳಲ್ಲಿ ತೊಡಗಿರುವವರ ಪರವಾಗಿ ನಿಂತು ಅವರಿಗೆ ಧನಸಹಾಯ ಮಾಡುವ ಮೂಲಕ, ಅಂಥ ವಿವಿಧ ದೇಶಗಳಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಮಾಡಿಕೊಂಡೇ ಬಂದಿರುವಾತ ಸೊರೋಸ್.

ಸ್ಯಾಮ್ ಪಿತ್ರೋಡ ಮೂಲಕ ರಾಹುಲ್ ಗಾಂಧಿಯವರನ್ನು ಬಳಸಿಕೊಂಡು, 2024ರ ಭಾರತದ ಲೋಕಸಭಾ ಚುನಾವಣೆ ಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸಲು ಈತ ಯತ್ನಿಸಿದ್ದ ವಿಷಯ ಚರ್ಚೆಗೆ ಬಂದಿತ್ತು.ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲೂ ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸಿ, ಡೆಮಾಕ್ರಟಿಕ್ ಪಕ್ಷವನ್ನು ಅಽಕಾರಕ್ಕೆ ತರಲು ಸೊರೋಸ್ ಹಲವು ತಿಂಗಳುಗಳಿಂತ ತೆರೆಮರೆಯಲ್ಲಿ ಯತ್ನಿಸಿದ್ದನೆಂದು ಅಲ್ಲಿನ ಮಾಧ್ಯಮಗಳುವರದಿಮಾಡಿವೆ. ಈತ ತನ್ನ ಸಂಸ್ಥೆಯ ಮೂಲಕ ಅಮೆರಿಕದ ಎಡಚರ ಬೆಂಬಲಿತ ಮಾಧ್ಯಮಗಳ ಮೇಲೆ ಸಂಪೂರ್ಣಹಿಡಿತ ಸಾಽಸುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗುತ್ತದೆ.

“ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ, ದೇಶದ ಜನರ ಆಸ್ತಿಯನ್ನು ಲೆಕ್ಕ ಮಾಡಿಸಿ ಎಲ್ಲರಿಗೂ ಹಂಚುತ್ತೇವೆ"ಎಂದು ರಾಹುಲರು ಹೇಳಿದ್ದರ ಹಿಂದಿನ ‘ಮಾಸ್ಟರ್ ಮೈಂಡ್’ ಈ ಸೊರೋಸ್. ತನ್ನ ಸಂಸ್ಥೆಯ ಮೂಲಕಸೊರೋಸ್ ನಡೆಸುತ್ತಿರುವ ತಂತ್ರಗಾರಿಕೆಯ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದ ಅಮೆರಿಕದ ವ್ಯಕ್ತಿ ಎಂದರೆಅದು ಎಲಾನ್ ಮಸ್ಕ್. ಸೊರೋಸ್ ತನ್ನ ವೈಯಕ್ತಿಕ ಹಿತಾಸಕ್ತಿಯ ಚಿಂತನೆಗಳ ಮೂಲಕ ಅಮೆರಿಕವನ್ನುಮುಂದೊಂದು ದಿನ ದೊಡ್ಡ ಮಟ್ಟದ ಅಪಾಯಕ್ಕೆ ತಳ್ಳುತ್ತಾನೆಂಬ ಸ್ಪಷ್ಟ ಕಲ್ಪನೆ ಎಲಾನ್ ಮಸ್ಕ್‌ಗೆ ಇತ್ತು.ಹೀಗಾಗಿ ಮಾಧ್ಯಮ ಸಂದರ್ಶನಗಳಲ್ಲಿ ಸೊರೋಸ್ ಮತ್ತು ಅವನ ಯೋಚನೆಗಳ ವಿರುದ್ಧ ಮಸ್ಕ್ ನೇರವಾಗಿ ಮಾತನಾಡುತ್ತಿದ್ದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರ ನಿಂತಿದ್ದ ಸೊರೋಸ್ ಎಷ್ಟೇ ಯತ್ನಿಸಿದರೂ, ಎಲಾನ್ ಮಸ್ಕ್‌ರ ತಂತ್ರಗಾರಿಕೆಯಿಂದಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದರು. ಸೊರೋಸ್ ನಡೆಸಿದ ದೇಶವಿರೋಽ ಕೃತ್ಯಗಳ ವಿರುದ್ಧ ತಿರುಗಿಬಿದ್ದ ಹಂಗರಿ, ಇಂಗ್ಲೆಂಡ್, ಫ್ರಾನ್ಸ್, ಥಾಯ್ಲೆಂಡ್, ಮಲೇಷ್ಯಾ, ರಷ್ಯಾ ದೇಶಗಳು ಆತನನ್ನು ತಮ್ಮ ನೆಲದಿಂದ ಓಡಿಸಿವೆ. ಆದರೆ ರಾಹುಲ್ ಗಾಂಽಯವರು ಮಾತ್ರ ಸೊರೋಸ್ ಜತೆಕೈಜೋಡಿಸಿ, ಆತ ಭಾರತದ ಮೇಲೆ ಮಾಡುವ ಸುಳ್ಳು ನಿರೂಪಣೆಗಳನ್ನು ಬಳಸಿಕೊಂಡು ರಾಜಕೀಯ ಮಾಡುವಲ್ಲಿನಿರತರಾಗಿದ್ದಾರೆ!

ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್‌ ಹಿಟ್‌ ಮ್ಯಾನ್‌ʼ