Saturday, 14th December 2024

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ…ಹೊಡೀರಿ ಹಲ್ಗಿ !

ಕದನ ಕುತೂಹಲ

ಡಾ.ಸಿ.ಜೆ.ರಾಘವೇಂದ್ರ ವೈಲಾಯ

‘ಗರೀಬಿ ಹಠಾವೋ’ ಎಂದು ಹೇಳುತ್ತಲೇ ೭ ದಶಕಗಳಿಂದ ದೆಹಲಿಯಲ್ಲಿ ಅಧಿಕಾರವನ್ನುಂಡ ಕಾಂಗ್ರೆಸ್ ಈಗ ಮತ್ತೊಂದು ಬಾರಿ ‘ನ್ಯಾಯ್ ಯೋಜನೆ’ಯ ಹಸರಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರವನ್ನು ಹಿಡಿಯಲು ಹೊಂಚುಹಾಕುತ್ತಿದೆ. ಈಗ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಿರುವ ಜನರ ಸಂಪತ್ತಿನ ಮರುಹಂಚಿಕೆ ಎನ್ನುವುದು ೧೯೪೭ರ ದೇಶವಿಭನೆಯ ರೀತಿಯಲ್ಲಿ ಇರಲಿದೆಯೇ? ಅಂದು ನಡೆದ ಅಮಾಯಕರ ಸಾವು- ನೋವುಗಳನ್ನು ಯಾರು ತಾನೇ ಮರೆತಾರು.

‘ನಾವು ಕಷ್ಟಪಟ್ಟು ದುಡಿದು ಗಳಿಸಿದ ಸಂಪತ್ತನ್ನು ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಹಂಚಲಿದೆ’ ಎಂದು ಪ್ರಧಾನಿ ಮೋದಿ ಯವರು ಎಚ್ಚರಿಸಿದ್ದು ಈಗ ದೇಶವ್ಯಾಪಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅಲ್ಪಸಂಖ್ಯಾತರೆಂದರೆ ಮುಸಲ್ಮಾನರು ಮಾತ್ರವೇನು? ನಿಜವಾಗಲೂ ಭಾರತದಲ್ಲಿ ಬೌದ್ಧರು, ಪಾರಸಿಕರು, ಜೈನರು, ಸಿಖ್ಖರು ಮತ್ತು ಕ್ರೈಸ್ತರು ಅಲ್ಪಸಂಖ್ಯಾತರು. ಇವರ ಹಕ್ಕುಗಳ ಕುರಿತು ಯಾವ ವಿಪಕ್ಷಗಳೂ ಮಾತ ನಾಡುತ್ತಿಲ್ಲ, ಏಕೆಂದರೆ ಇವರು ಭಿಕ್ಷಾಂದೇಹಿಗಳಲ್ಲ. ವೋಟುಬ್ಯಾಂಕ್ ಅಂತೂ ಅಲ್ಲವೇ ಅಲ್ಲ.

ಅಸಲಿಗೆ ದೇಶದ ಜನಸಂಖ್ಯೆಯ ಶೇ.೧೫ರಷ್ಟು ಇರುವ ಮುಸಲ್ಮಾನರು ಈಗ ಅಲ್ಪಸಂಖ್ಯಾತರೇ ಅಲ್ಲ. ಇವರೀಗ ಭಾರತದಲ್ಲಿ ೨ನೇ ಅತಿದೊಡ್ಡ ಬಹುಸಂಖ್ಯಾತ ವರ್ಗ. ಆದರೂ ದೇಶದ ಒಟ್ಟು ತೆರಿಗೆದಾರರ ಪೈಕಿ ಇವರ ಪಾಲು ಕೇವಲ ಶೇ.೮ರಷ್ಟು. ಇವರಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗಿದ್ದರೆ ಅದಕ್ಕೆ ಕಾರಣ ಅವರ ಅನಕ್ಷರತೆ ಮತ್ತು ಜನಸಂಖ್ಯಾ ಸ್ಪೋಟಗಳೇ ಹೊರತು ಬೇರೇ ನಲ್ಲ. ಒಟ್ಟು ಜನಸಂಖ್ಯೆಯ ಶೇ.೧.೪ರಷ್ಟಿರುವ ತೆರಿಗೆ
ದಾರರೇ ಈ ದೇಶದ ನಿಜವಾದ ಅಲ್ಪಸಂಖ್ಯಾತರು.

ದುರದೃಷ್ಟವೆಂದರೆ ಇವರ ಹಕ್ಕುಗಳನ್ನು ಭಾರತದಲ್ಲಿ ಕೇಳುವವರೇ ಇಲ್ಲ. ಇವರ ಕೂಗೇನಿದ್ದರೂ ಅರಣ್ಯ ರೋದನವಷ್ಟೇ. ಅಲ್ಪಸಂಖ್ಯಾತರ ಒಗ್ಗಟ್ಟು ಅವರನ್ನು ಸಶಕ್ತರನ್ನಾಗಿ ರೂಪುಗೊಳಿಸಿದೆ. ಅಳುವ ಮಗುವಿಗೆ ಯಾವತ್ತೂ ಹೆಚ್ಚಿನ ಹಾಲು ದೊರೆಯುತ್ತದೆ. ಹೀಗೆ ಒಬ್ಬರಿಗೆ ಅನ್ಯಾಯ ಮಾಡಿ ಅವರ ಸಂಪತ್ತನ್ನು ಇನ್ನೊಬ್ಬರಿಗೆ ಹಂಚುವುದು ನ್ಯಾಯದ ವಿಡಂಬನೆಯಲ್ಲವೇ? ‘ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ’ ಎನ್ನುವುದನ್ನು ಮತದಾರ ಒಪ್ಪುವನೇ? ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧ ವಾಗಿ ‘ಸೆಕ್ಯುಲರ್’ ಮತ್ತು ‘ಸೋಷಿಯಲಿಸ್ಟ್’ ಎಂಬೆರಡು ಹೊಸ ಶಬ್ದಗಳನ್ನು ತುರ್ತು ಪರಿಸ್ಥಿತಿಯ (೧೯೭೫-೭೭) ಸಂದರ್ಭದಲ್ಲಿ ಅನೈತಿಕವಾಗಿ ತೂರಿಸಿ ಸಂವಿಧಾನದ ಮೂಲ ಆಶಯವನ್ನೇ ತಿರುಚಿದ್ದು ಇದೇ ಕಾಂಗ್ರೆಸ್.

ಹೀಗಿರುವಾಗ ಕಾಂಗ್ರೆಸ್ಸಿಗರು ಯಾವ ಮುಖ ಇಟ್ಟುಕೊಂಡು ಸಂವಿಧಾನದ ರಕ್ಷಣೆಯ ಮಾತನ್ನಾಡುತ್ತಾರೆ? ಷಾ ಬಾನೋ ಪ್ರಕರಣದಲ್ಲಿ ದೇಶದ ನ್ಯಾಯ ವ್ಯವಸ್ಥೆಗೇ ಸೆಡ್ಡು ಹೊಡೆದು ಕಾನೂನಿಗೆ ತಿದ್ದುಪಡಿ ತಂದು ಮಹಿಳೆಯರಿಗೆ ಮೋಸ ಮಾಡಿದ ಪಕ್ಷವು ಈಗ ಸ್ತ್ರೀ ಸಬಲೀಕರಣದ ಮಾತನ್ನಾಡೋದು ಆಷಾಢಭೂತಿತನವಲ್ಲದೇ ಮತ್ತೇನು? ದೇಗುಲದ ಹುಂಡಿಗೆ ಕನ್ನಹಾಕಿ, ದಲಿತರ ಅನುದಾನಕ್ಕೆ ಕತ್ತರಿ ಹಾಕಿದವರು ೭ ದಶಕ ಗಳಿಂದ ಈ ದೇಶದ ಬಡವ ರನ್ನು ಬಕ್ರಾ ಮಾಡುತ್ತಲೇ ಬಂದಿದ್ದಾರೆ. ಭ್ರಷ್ಟ ಪಕ್ಷವೊಂದು ಇಂದು ಜನರಿಗೆ ಪೊಳ್ಳು ಭರವಸೆಗಳ ಟ್ರೇಲರ್ ತೋರಿಸುತ್ತಿದೆ.

ಅಸಲಿಗೆ ಯಾವ ವಾರಂಟಿಯೂ ಇಲ್ಲದ ಈ ಗ್ಯಾರಂಟಿಗಳನ್ನು ಮತದಾರ ಅಷ್ಟು ಸುಲಭವಾಗಿ ನಂಬಲಾರ. ಯಾವುದೇ ಬ್ರಾಂಡಿಗೆ ತನ್ನ ವಿಶ್ವಾ
ಸಾರ್ಹತೆಯೇ ಮೂಲ ಬಂಡವಾಳ. ಹಳಿಯಿಲ್ಲದ ರೈಲಿನಂಥ ಈ ಭರವಸೆಗಳನ್ನು ಜನ ನಂಬರು. ಏಕೆಂದರೆ ಇವರ ಮುಂದಿರೋದು ಮೋದಿ ಎಂಬ
ಪ್ರಚಂಡ ಶಕ್ತಿ. ಎರಡು ದಶಕಗಳ ಯಶಸ್ವಿ ಸಾರ್ವಜನಿಕ ಜೀವನದ ಮೋದಿಯವರ ಟ್ರಾಕ್ ರೆಕಾರ್ಡ್ ಜನರಿಗೆ ಚೆನ್ನಾಗಿ ತಿಳಿದಿದೆ. ಅದು ಕಾಂಗ್ರೆಸ್ಸಿಗರಿಗೂ
ಗೊತ್ತು. ಹಾಗಾಗಿ ಕೈಪಾಳಯದ ಬಹುತೇಕ ಘಟಾನು ಘಟಿಗಳು ಈ ಬಾರಿ ಸ್ಫರ್ಧಿಸಲು ಕುಂಟುನೆವ ಹೇಳಿ ಹಿಂಜರಿಯುತ್ತಿದ್ದಾರೆ.

ಆದರೂ ‘ಯುದ್ಧಾಯ ಕೃತನಿಶ್ಚಯಂ…’ ಯಾವ ಜಾತಿಯವರ ಜನಸಂಖ್ಯೆ ಎಷ್ಟೋ ಅದಕ್ಕನುಗುಣವಾಗಿ ಪ್ರತಿನಿಧಿತ್ವ ಅಥವಾ ಮೀಸಲಾತಿ ಎನ್ನುತ್ತಿದೆ ಕಾಂಗ್ರೆಸ್ ಪ್ರಣಾಳಿಕೆ. ಅಸಲಿಗೆ ಈ ಜಾತಿ ಗಣತಿಯೆಂಬುದು ೧೯೦೧ರಲ್ಲಿ ಬ್ರಿಟಿಷ್ ಅಧಿಕಾರಿ ಹೋಪ್ ರಿಸ್ಲೆ ಆರಂಭಿಸಿದ ದೇಶವಿಭಜಕ ಸಂಚು. ಇದನ್ನೇ ಆಧರಿಸಿ ೧೯೦೫ರಲ್ಲಿ ಅವರು ಬಂಗಾಳವನ್ನು ಒಡೆದು ಆಳಿದ್ದು ಹಾಗೂ ಮುಂದೆ ೧೯೪೭ರಲ್ಲಿ ದೇಶವನ್ನೇ ಒಡೆದಿದ್ದು. ತಾವು ಅಧಿಕಾರಕ್ಕೆ ಬಂದರೆ
ದೇಶವ್ಯಾಪಿ ಆರ್ಥಿಕ ಮತ್ತು ಸಾಮಾಜಿಕ ಗಣತಿ ಮಾಡಿ ಜನರ ಸಂಪತ್ತಿನ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಅನುಕೂಲಸ್ಥರ ಆಸ್ತಿಗಳನ್ನು ಮುಟ್ಟು
ಗೋಲು ಹಾಕಿ, ನ್ಯಾಯವಾಗಿ ದುಡಿದು ಗಳಿಸಿದವರನ್ನು ಶಿಕ್ಷಿಸಿ, ಬಿಟ್ಟಿಕೂಳು ತಿನ್ನುವವರನ್ನು ಪೋಷಿಸುವ ಹುನ್ನಾರವಿದು. ಇದು ಬಸವಣ್ಣನವರ ‘ಕಾಯಕವೇ ಕೈಲಾಸ’ವನ್ನು ಅಣಕವಾಡುವಂತಿದೆ.

ಕಮ್ಯುನಿಸ್ಟ್ ಮತ್ತು ಮಾವೋವಾದಿ ಚಿಂತನೆಗಳೇ ಇವರಿಗೆ ಮೂಲ ಪ್ರೇರಣೆ. ಇದು ನಗರ ನಕ್ಸಲರ ರಹಸ್ಯ ಕಾರ್ಯ ಸೂಚಿಯ ಅವಿಭಾಜ್ಯ ಅಂಗ. ಕಷ್ಟಪಟ್ಟು ದುಡಿದು ಗಳಿಸುವ ಪ್ರತಿಯೊಬ್ಬರೂ ಮತದಾನಕ್ಕೂ ಮುಂಚೆ ಆಲೋಚಿಸಬೇಕಾದ ವಿಷಯವಿದು. ನಾವು ಆಮಿಷಗಳಿಗೆ ಬಲಿಯಾಗದೆ ನಮ್ಮ ಭಾವಿ ಪೀಳಿಗೆಯ ಕುರಿತು ಆಲೋಚಿಸಿ ಜಾಗರೂಕತೆಯಿಂದ ಮತ ಚಲಾಯಿಸಬೇಕಿದೆ.

ಮಿತಿಮೀರಿ ಮಕ್ಕಳನ್ನು ಹಡೆದು ಈ ದೇಶದ ಸಂಪನ್ಮೂಲಗಳನ್ನು ಬರಿದುಮಾಡುತ್ತಿರುವ ಅಕ್ರಮ ವಲಸಿಗರ ಕುಟುಂಬದ ಜವಾಬ್ದಾರಿಯನ್ನು, ಕಷ್ಟ
ಪಟ್ಟು ದುಡಿದು ತೆರಿಗೆ ಕಟ್ಟಿ ಮರ್ಯಾದೆಯಿಂದ ಬದುಕುತ್ತಿರುವ ಒಂದೆರಡು ಮಕ್ಕಳಿರುವ ಕುಟುಂಬವು ಹೊರಬೇಕೆನ್ನುವುದೇ ಕಾಂಗ್ರೆಸ್ಸಿನ ನ್ಯಾಯವೇ? ದೇಶದ ಪ್ರಾಮಾಣಿಕರ ತೆರಿಗೆ ಹಣ ವನ್ನು ಮತಬ್ಯಾಂಕ್ ರಾಜಕೀಯದ ಕಾರಣದಿಂದ, ಸರಕಾರಿ ಕೃಪಾಪೋಷಿತ ಜೀವನ ನಡೆಸುವವರನ್ನು ಸಾಕಲು ದುರ್ಬಳಕೆ ಮಾಡುವ ಚಿಂತನೆ ಅದೆಷ್ಟು ನಕಾರಾತ್ಮಕ! ಆಂಗ್ಲರ ಕಾಲದ ವಸಾಹತುಶಾಹಿ ಚಿಂತನೆಯ ಪ್ರತಿರೂಪದಂಥ ಧೋರಣೆಯಿದು.

ಮನಮೋಹನ್ ಸಿಂಗರು ‘ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸ್ಲಿಮರಿಗಿದೆ’ ಎಂದು ಹಿಂದೊಮ್ಮೆ ಹೇಳಿದ್ದನ್ನು ಭಾರತದ ಬಹುಸಂಖ್ಯಾತರು ಎಚ್ಚರಿಕೆಯಿಂದ ಗ್ರಹಿಸಬೇಕಿದೆ. ‘ಕಾಂಗ್ರೆಸ್ಸಿನ ೨೦೨೪ರ ಚುನಾವಣಾ ಪ್ರಣಾಳಿಕೆಗೂ ೧೯೪೭ರ ಮುಸ್ಲಿಂ ಲೀಗಿನ ಪ್ರಣಾಳಿಕೆಗೂ ಸಾಮ್ಯತೆಗಳಿವೆ’ ಎಂಬ ಮೋದಿಯವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಬೇಕಾಬಿಟ್ಟಿ ಮಾತನಾಡಿ ದವವರಲ್ಲ.

ಅನೇಕ ರಹಸ್ಯ ಗುಪ್ತಚರ ಮಾಹಿತಿಗಳು ಅವರಿಗೆ ಲಭ್ಯವಿರುತ್ತವೆ. ಕಾಂಗ್ರೆಸ್ಸಿನ ಹಲವು ನಾಯಕರು ‘ನಮ್ಮದು ಮುಸ್ಲಿಮರ ಪಕ್ಷ’ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ‘ಭಾರತ್ ಮಾತಾ ಕೀ ಜೈ’ ಎನ್ನಲು ಅಲ್ಲಿ ಹೈಕಮಾಂಡಿನ ಅನುಮತಿ ಕೇಳುವ ಪರಿಸ್ಥಿತಿ ಯಿದೆ. ೧೯೩೭ರಲ್ಲಿ ‘ವಂದೇ ಮಾತರಂ’ಗೆ ಕತ್ತರಿ ಹಾಕಿದ್ದೂ ಇದೇ ಕಾಂಗ್ರೆಸ್. ಸಂದರ್ಭ ಸಿಕ್ಕಾಗಲೆಲ್ಲಾ ದೇಶದ ಹೊರಗೆ ಭಾರತದ ಕುರಿತು ಲಘುವಾಗಿ ಮಾತನಾಡುವ ಹಾಗೂ ದೇಶದ ಜನಪ್ರಿಯ
ನೀತಿಗಳನ್ನು ಟೀಕಿಸುವ ರಾಹುಲ್ ಗಾಂಧಿಯವರು ವಿದೇಶಗಳಿಗೆ ಹೋಗಿ ಬಂದಾಗಲೆಲ್ಲಾ ಒಂದಿಲ್ಲೊಂದು ದೇಶವಿರೋಧಿ ಆಂದೋಲನ ನಡೆದಿರು
ವುದಕ್ಕೆ ನಾವೆಲ್ಲಾ ಸಾಕ್ಷಿಗಳಿದ್ದೇವೆ. ಚೀನಾ, ಪಾಕಿಸ್ತಾನಗಳ ಜತೆಗೆ ಖಲಿಸ್ತಾನಿಗಳು, ಹಲವು ಎನ್‌ಜಿಒಗಳು ಮತ್ತು ಸೋರೋಸ್ ಮೊದಲಾದ ಬಂಡವಾಳಶಾಹಿ ಶಕ್ತಿಗಳು ಇವೆಯೆಂಬುದನ್ನು ನಾವು ಮರೆಯಬಾರದು.

ಇವೆಲ್ಲಾ ಅನಿರೀಕ್ಷಿತ ಘಟನೆಗಳೇನಲ್ಲ, ನಿರ್ದಿಷ್ಟ ಕಾರ್ಯಸೂಚಿಯಡಿಯ ಪ್ರಾಯೋಜಿತ ಕಾರ್ಯಕ್ರಮಗಳಿವು. ರಾಹುಲರ ಮಾತುಗಳನ್ನು
ನಿರ್ಲಕ್ಷಿಸಿದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ವೈಚಾರಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ಸಿಗೆ ಈಗ ಗ್ಯಾರಂಟಿಗಳ ಹೊರತಾಗಿ ಯಾವುದೇ ಸಕಾ
ರಾತ್ಮಕ ಕಾರ್ಯಸೂಚಿಗಳೂ ಸಿಗದಂತಾಗಿವೆ. ದೇಶ ವ್ಯಾಪಿ ೪೦ ಕ್ಷೇತ್ರಗಳಲ್ಲೂ ಗೆಲ್ಲುವ ಖಾತ್ರಿಯಿಲ್ಲದವರಿಗೆ ಬೇಕಾಬಿಟ್ಟಿ ಭರವಸೆ ನೀಡುವುದು ಕಷ್ಟವೇನಲ್ಲ. ಅನ್ನ ದಾಸೋಹಕ್ಕಿಂತಲೂ ದುಡಿದು ತಿನ್ನಲು ನಮ್ಮನ್ನು ಸಜ್ಜುಗೊಳಿಸುವ ಅಕ್ಷರ ದಾಸೋಹವೇ ಶ್ರೇಷ್ಠ. ಐ qsಟ್ಠ Z’ಠಿ ಟ್ಞqಜ್ಞ್ಚಿಛಿ mಛಿಟmಛಿ ಠಿeಛ್ಞಿ ಟ್ಞ್ಛ್ಠoಛಿ ಎನ್ನುವಂತೆ Zmಛಿಠಿ ಚಿಟಞಚಿಜ್ಞಿಜ ರೀತಿಯಲ್ಲಿ ಕೊನೆಯ ಕ್ಷಣದಲ್ಲಿ ಹಲವಾರು ಅಂಕಿ-ಸಂಖ್ಯೆಗಳಿರುವ ಸರಣಿ ಪತ್ರಿಕಾ
ಜಾಹೀರಾತು ನೀಡಿ ಜನರನ್ನು ದಾರಿ ತಪ್ಪಿಸುವ ಯತ್ನವೂ ನಡೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಂತೂ ಈಗ ಫೇಕ್ ನ್ಯೂಸ್ ಎಗ್ಗಿಲ್ಲದೆ ಪಸರಿಸುತ್ತಿವೆ. Uಜ್ಞಿ ಚಿqs eಟಟh ಟ್ಟ ಟಟh ಎನ್ನುವುದೇ ಇವರ ಅಂತಿಮ ಮಾನದಂಡ. ಅವರಿಗೆ ತಾವು ಗೆಲ್ಲುವುದು ಬೇಕಿಲ್ಲ, ಆದರೆ ಮೋದಿ ಸೋಲಬೇಕು. ಮುಂದೇನು? ದೇಶದ ಸಂಪತ್ತನ್ನೂ ಎಲ್ಲರೂ ಹಂಚಿಕೊಂಡು ತಿನ್ನೋದು, ಅಷ್ಟೇ! ಈ ಕಣ್ಣಾಮುಚ್ಚಾಲೆ ಆಟದಲ್ಲಿ ಜನಸಾಮಾನ್ಯರ ಗೋಳು ಕೇಳುವವರಿಲ್ಲ. ಬಡವನಿಗೆ ಬೇಕಿರುವುದು ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯ ಸಹಾಯವೇ ಹೊರತು, ಆತನ ಬಡತನವನ್ನೇ ಅಣಕಿಸುವ ರೀತಿಯ ಬಿಟ್ಟಿ ಭಾಗ್ಯಗಳಲ್ಲ. ಕಾಲು ಮುರಿದವನು ಕೂಡ ತಾನು ಬೇಗನೆ ಸ್ವತಂತ್ರವಾಗಿ ನಡೆದಾಡ ಬೇಕೆಂದು ಬಯಸುತ್ತಾನೆಯೇ ಹೊರತು, ಆಜೀವ ಪರ್ಯಂತ ಸ್ಟ್ರೆಚರ್‌ನಲ್ಲಿದ್ದು ಸೇವೆ ಮಾಡಿಸಿ ಕೊಂಡಿರಲು ಹಂಬಲಿಸಲಾರ. ಜನರು ಸಬಲರಾಗುವುದು, ವಿದ್ಯಾವಂತರಾಗುವುದು, ಅಭಿವೃದ್ಧಿ ಹೊಂದಿ ಸ್ವತಂತ್ರರಾಗುವುದು ಕಾಂಗ್ರೆಸ್ಸಿಗೆ ಬೇಕಿಲ್ಲ; ಜನರು ಸದಾಕಾಲ ಬಡತನ ರೇಖೆಯ ಕೆಳಗಿದ್ದು, ಹತ್ತಾರು ಜಾತಿ ಮತಗಳಾಗಿ ಒಡೆದು, ಪರಸ್ಪರ ಕಚ್ಚಾಡುತ್ತಾ, ಬಿಟ್ಟಿ ಯೋಜನೆಗಳಿಗಿಂತ ಹೆಚ್ಚೇನೂ ನಿರೀಕಿಸದೆ ಸದಾ ತನ್ನ ಜೀತದ ಮತಬ್ಯಾಂಕುಗಳಾಗಿ ಇರುವುದೇ ಅದಕ್ಕೆ ಬೇಕಿದೆ.

೫ರಿಂದ ೧೦ ಕೋಟಿ ಮಹಿಳೆಯರಿಗೆ ವಾರ್ಷಿಕ ೧ ಲಕ್ಷ ರುಪಾಯಿಗಳ ಸಹಾಯಧನವೆಂಬ ಘೋಷಣೆಗೆ ತಲೆ ಬುಡವೇ ಇಲ್ಲ. ಇದೊಂದೇ ಯೋಜನೆಗೆ ಬೇಕಾದ ವಾರ್ಷಿಕ ಧನ ೫ರಿಂದ ೧೦ ಲಕ್ಷ ಕೋಟಿ ರುಪಾಯಿ. ದೇಶದ ಒಟ್ಟು ವಾರ್ಷಿಕ ಬಜೆಟ್ ಇರೋದೇ ೩೦ ಲಕ್ಷ ಕೋಟಿ. ಹೀಗಿರುವಾಗ ಈ
ಭರವಸೆ ಈಡೇರಿಸಲು ಇವರು ಹಣವನ್ನು ಎಲ್ಲಿಂದ ತರುತ್ತಾರೆ? ನಮ್ಮ ಬಜೆಟ್ ಇರೋದು ೨೦೪೭ರೊಳಗೆ ದೇಶವನ್ನು ಅಭಿವೃದ್ಧಿಗೊಳಿಸುವ ಜನಪರ ಕಾರ್ಯ ತಂತ್ರವನ್ನು ಸಾಧಿಸಲಿಕ್ಕಾಗಿಯೇ ಹೊರತು ಕುಳಿತು ಉಣ್ಣುವವರಿಗೆ ಹಂಚಲಿಕ್ಕೆ ಅಲ್ಲ. ‘ಕುಳಿತು ತಿಂದರೆ ಕುಡಿಕೆ ಹೊನ್ನೂ ಸಾಲದು’ ಎಂಬ ಗಾದೆಯೇ ಇಲ್ಲವೇ? ಇಷ್ಟೇ ಅಲ್ಲ, ಸಂವಿಧಾನದ ಮೂಲ ಆಶಯವನ್ನೇ ಬಲಿಕೊಟ್ಟು ಮೀಸಲಾತಿಯನ್ನು ಶೇ.೮೦ರಿಂದ ೧೦೦ರವರೆಗೂ ಏರಿಸುವ ಗುಪ್ತ
ಕಾರ್ಯಸೂಚಿ ಇದೆ.

ದೇಶದಲ್ಲಿ ಪ್ರತಿಭೆಗೆ ಯಾವುದೇ ಬೆಲೆಯಿಲ್ಲದಂತೆ ಮಾಡುವ ಹುನ್ನಾರ ನಡೆಯುತ್ತಿದೆ. ಸರಕಾರಿ ಸಂಸ್ಥೆಗಳಲ್ಲಿ ಅಲ್ಲದೆ, ಖಾಸಗಿ ರಂಗದಲ್ಲೂ ಮೀಸಲಾತಿ ನೀಡುವ ಚಿಂತನೆಗಳಿವೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಯ ನಾಗಾಲೋಟಕ್ಕೆ ಕಡಿವಾಣ ಹಾಕುವ ಎಲ್ಲಾ ಕ್ರಿಯಾಯೋಜನೆಗಳಿವೆ ಎಂದಾಯಿತು. ಅಲ್ಲಿಗೆ ಪ್ರತಿಭೆಗೆ ಬೆಲೆಯೇ ಇಲ್ಲವೇ? ಹಾಗಿದ್ದರೆ ಪರೀಕ್ಷೆ ಏಕೆ ಬೇಕು? ನಾವು ಕಷ್ಟಪಟ್ಟು ಕೆಲಸ ಏಕೆ ಮಾಡಬೇಕು, ತೆರಿಗೆ ಏಕೆ ಕಟ್ಟಬೇಕು? ಶ್ರಮಿಕರನ್ನು ಅಣಕಿಸುವ ಇಂಥ ರಾಜಕೀಯ ದಾಳಗಳು ‘ಕಾಯಕವೇ ಕೈಲಾಸ’ ಎಂದ ಬಸವಣ್ಣನವರ ವಿರೋಧಿಯಲ್ಲದೆ ಮತ್ತೇನು? ನಾನಾ ಕ್ಷೇತ್ರಗಳಲ್ಲಿನ ಹೂಡಿಕೆ ಯ ಮೂಲಕ ದೇಶದ ಮಧ್ಯಮ ವರ್ಗದ ಜನರಿಗೆ ಉದ್ಯೋಗ ನೀಡಿ, ರಫ್ತು ಮಾಡಿ ದೇಶದಲ್ಲಿ ಸಂಪತ್ತನ್ನು ನಿರ್ಮಿಸುತ್ತಿರುವ ಕಾರ್ಪೊರೇಟ್ ಜಗತ್ತಿನ ಅಂಬಾನಿ-ಅದಾನಿಗಳೆಂಬ ಅನ್ನದಾತರನ್ನು eಟ್ಞಜಿಛಿ ZmಜಿಠಿZಜಿoಠಿ ಎಂದು ಅವಮಾನಿಸುವುದು ಎಷ್ಟು ಸರಿ? ನಾವು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ನಮ್ಮ ಉದ್ಯಮಿ ಗಳನ್ನು ಕೈಹಿಡಿದು ಮುನ್ನಡೆಸುವ ಸರಕಾರ ಬೇಕು.

ಸೋಲು ಗೆಲುವುಗಳೇನೇ ಇದ್ದರೂ ಬೆನ್ನ ಹಿಂದೆ ನಿಂತು ನಮ್ಮ ವಿಜ್ಞಾನಿಗಳಿಗೆ ಉತ್ತೇಜಿಸಬಲ್ಲ ನಾಯಕತ್ವ ಬೇಕು. ಸೋಲಿಗೆ ಹೆದರುವವನೆಂದೂ
ಸಾಧಕನಾಗಲಾರ. ಯಶಸ್ವಿ ನೇತಾರನು ಉತ್ತಮ ಕನಸುಗಾರನಾಗಿರಬೇಕು. ಇದನ್ನು ಕಾಂಗ್ರೆಸ್ಸಿನ ಈಗಿನ ನಾಯಕರು ಮಾಡಬಲ್ಲರೇ? ಸೋಲೋ ಕುದುರೆಯ ಮೇಲೆ ಯಾರೂ ಬಾಜಿ ಹೂಡಲ್ಲ… ಓಲೈಕೆಯ ಇಳಿಜಾರಿನಲ್ಲಿರುವ ಇವರ ಪ್ರಣಾಳಿಕೆಯಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವ ಮಾತೇ
ಇಲ್ಲ. ಕೃಷಿ ಕಾಯ್ದೆ ಜಾರಿಯ ಸಮಯ, ಕೋವಿಡ್ ಲಸಿಕೆಯ ಸಂದರ್ಭ ಮತ್ತು ನೋಟ್ ಬಂದಿಯ ಕಾಲದಲ್ಲಿ ಇವರು ಜನರ ದಾರಿತಪ್ಪಿಸಿದ್ದನ್ನು
ಮರೆಯಲಾದೀತೇ? ದೇಶಕ್ಕೆ ದೂರಗಾಮಿ ಹಿತ ನೀಡುವಂಥ ಇಅಅ, ಘ್ಕೆಇ, ಖಿಇಇ ಜಾರಿ, ಅನುಚ್ಛೇದ ೩೭೦ರ ರದ್ದತಿ, ಜಿಎಸ್‌ಟಿ ಹೀಗೆ ಎಲ್ಲವನ್ನೂ ಹಿಂಪಡೆಯುತ್ತೇವೆ ಎನ್ನುವ ಕಾಂಗ್ರೆಸ್ ಈಗ ಹಿಂದಿನಂತೆ ರಾಷ್ಟ್ರೀಯವಾದಿ ಪಕ್ಷವಾಗಿ ಉಳಿದಿಲ್ಲ; ಅದು ಮೋದಿ ವಿರೋಧ ಮಾಡುತ್ತಾ ಮಾಡುತ್ತಾ
ಈಗ ಪ್ರಕಟವಾಗಿ ಬಹುಸಂಖ್ಯಾತರ ಹಾಗೂ ಭಾರತದ ವಿರೋಽಯಾಗಿ ಮಾರ್ಪಾಡಾಗಿದೆ.

ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮುಂತಾದ ಎಲ್ಲಕ್ಕೂ ಕಾಂಗ್ರೆಸ್ಸಿಗರ ವಿರೋಧವಿದೆ. ಕೇವಲ ವಿರೋಧಕ್ಕಾಗಿ ವಿರೋಧ ಎನ್ನುವುದು ಇವರ ಧೋರಣೆ. ಪುರಂದರದಾಸರು ಇಂದು ಬದುಕಿದ್ದಿದ್ದರೆ ‘ಎಲ್ಲವನ್ನೂ ಮಾಡುವುದು ವೋಟಿಗಾಗಿ, ಕಂತೆ ನೋಟಿಗಾಗಿ’ ಎನ್ನುತ್ತಿದ್ದರೇನೋ? ವಿಪಕ್ಷಗಳ ರಾಜಕೀಯ ನಡೆಗಳು ಅತ್ಯಂತ ಅಪಾಯಕಾರಿಯಾಗಿವೆ, ದೂರದೃಷ್ಟಿ ರಹಿತವಾಗಿದೆ ಎಂಬುದಂತೂ ಸ್ಪಷ್ಟವಾಗಿದೆ.

ದೇಶದ ಹಿತದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಸಹಕರಿಸುವ ರಚನಾತ್ಮಕ ವಿಪಕ್ಷವನ್ನು ಈ ದೇಶ ಕಂಡು ದಶಕಗಳೇ ಸಂದವು. ಮೋದಿಯವರ ಅಭಿವೃದ್ಧಿ ಯ ಮುನ್ನೋಟಕ್ಕೆ ಪರ್ಯಾಯವಾದ ಯಾವುದೇ ನೀಲಿನಕ್ಷೆಯನ್ನು ಕಾಂಗ್ರೆಸ್ ಜನರ ಮುಂದೆ ಪ್ರಸ್ತುತ ಪಡಿಸಿಲ್ಲ. ಒಟ್ಟಿನಲ್ಲಿ ‘ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎಂಬಂತಿದೆ ಕೆಲವರ ಪರಿಸ್ಥಿತಿ. ಆದರೆ, ಪ್ರಜಾತಂತ್ರ ದಲ್ಲಿ ಅಂತಿಮವಾಗಿ ಜನರೇ ಹೈಕಮಾಂಡ್. ಎಲ್ಲಾ ಪ್ರಶ್ನೆಗಳಿಗೂ ಜೂ.೪ರಂದು ಅಂತಿಮ ಉತ್ತರ ದೊರೆಯಲಿದೆ.

(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)