ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ರಾನಾಸಿ-ಡಿಕೆಶಿ ಮಾತಾಡಿದ್ದೇನು?

“ಮಹಾಕುಂಭಮೇಳದ ಸಂದರ್ಭದಲ್ಲಿ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಮುಳುಗುಹಾಕಿಬಿಟ್ಟರೆ ದೇಶದ ಜನರ ಬಡತನ ನಿವಾರಣೆಯಾಗಿ ಬಿಡು ವುದೇ?" ಎಂದು ಎಐಸಿಸಿ ಅಧ್ಯಕ್ಷರು ಬಹಿರಂಗವಾಗಿ ಹೇಳಿಕೆ ನೀಡಿದ್ದನ್ನೂ, ಅದೇ ಪ್ರಯಾಗ್‌ ರಾಜ್‌ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪುಣ್ಯ ಸ್ನಾನ ಮಾಡಿ, “ಇದು ನನ್ನ ವೈಯಕ್ತಿಕ ನಂಬಿಕೆಗೆ ಸಂಬಂಧಿಸಿದ ವಿಷಯ" ಎಂದು ಸಮಜಾಯಿಷಿ ನೀಡಿದ್ದನ್ನೂ ನೀವು ಬಲ್ಲಿರಿ

Narada Sanchara: ರಾನಾಸಿ-ಡಿಕೆಶಿ ಮಾತಾಡಿದ್ದೇನು?

Profile Ashok Nayak Feb 15, 2025 12:34 PM

ನಾರದ ಸಂಚಾರ

ಎಐಸಿಸಿ ಅಧ್ಯಕ್ಷರ ಧೋರಣೆಯೇ ಬೇರೆ, ಕೆಪಿಸಿಸಿ ಅಧ್ಯಕ್ಷರ ಅನುಸರಣೆಯೇ ಬೇರೆ ಎಂಬುದು ನಿಮಗೆ ಇತ್ತೀಚೆಗೆ ಗೊತ್ತಾಗಿರಬೇಕು. ಅಂದರೆ, “ಮಹಾಕುಂಭಮೇಳದ ಸಂದರ್ಭದಲ್ಲಿ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಮುಳುಗುಹಾಕಿಬಿಟ್ಟರೆ ದೇಶದ ಜನರ ಬಡತನ ನಿವಾರಣೆಯಾಗಿ ಬಿಡು ವುದೇ?" ಎಂದು ಎಐಸಿಸಿ ಅಧ್ಯಕ್ಷರು ಬಹಿರಂಗವಾಗಿ ಹೇಳಿಕೆ ನೀಡಿದ್ದನ್ನೂ, ಅದೇ ಪ್ರಯಾಗ್‌ ರಾಜ್‌ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪುಣ್ಯಸ್ನಾನ ಮಾಡಿ, “ಇದು ನನ್ನ ವೈಯಕ್ತಿಕ ನಂಬಿಕೆಗೆ ಸಂಬಂಧಿಸಿದ ವಿಷಯ" ಎಂದು ಸಮಜಾಯಿಷಿ ನೀಡಿದ್ದನ್ನೂ ನೀವು ಬಲ್ಲಿರಿ. ಆದರೆ, ಕಲಹಪ್ರಿಯ ನಾರದರ ಮನದಲ್ಲಿ ಕುತೂಹಲವು ಗರಿಗೆದರುವುದಕ್ಕೆ ಕಾರಣವಾಗಿದ್ದು ಇವಿಷ್ಟೇ ಬೆಳವಣಿಗೆಗಳಲ್ಲ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಏರೋ ಇಂಡಿಯಾ 2025’ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾಗ ತಮ್ಮೊಂದಿಗೆ ವೇದಿಕೆ ಹಂಚಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಮಾತಾಡಿದ ಸಂದ ರ್ಭವು ನಾರದರಲ್ಲಿ ಒಂದಷ್ಟು ಸಂಚಲನ ಮೂಡಿಸಿರೋದಂತೂ ಹೌದು.

ಇದನ್ನೂ ಓದಿ: Narada Sanchara: ಇವರು ‘ಹೆಡ್‌ಲೈನ್’ ಶೂರರು!

ಕಾರಣ, ಹೇಳಿ ಕೇಳಿ ಇಬ್ಬರೂ ರಾಜಕೀಯ ಎದುರಾಳಿಗಳು. ಇಷ್ಟಾಗಿಯೂ ಇವರಿಬ್ಬರೂ ಅಷ್ಟೊಂ ದು ಗಾಢವಾಗಿ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದರಲ್ಲಾ, ಇವರ ನಡುವೆ ಏನೆಲ್ಲಾ ವಿಚಾರ ವಿನಿಮಯ ನಡೆದಿರಬಹುದು ಎಂಬ ಕಲ್ಪನೆಯೇ ನಾರದರಲ್ಲಿ ಕುತೂಹಲ ಕೆರಳುವುದಕ್ಕೆ ಕಾರಣ ವಾಗಿದೆ. ಈ ಇಬ್ಬರು ನಾಯಕರಿಗೂ ‘ಕಾಲರ್ ಮೈಕ್’ ಹಾಕಿರಲಿಲ್ಲವಾದ್ದರಿಂದ, ಮಹಾ ಕುಂಭ ಮೇಳದ ವಿಷಯ ಮತ್ತು ಅದರಲ್ಲಿ ತಾವಿಬ್ಬರೂ ಪುಣ್ಯಸ್ನಾನ ಮಾಡಿದ ಸಂಗತಿಯೇ ಈ ಮಾತು ಕತೆಯ ಹೂರಣವಾಗಿದ್ದಿರಬಹುದು ಎಂಬುದು ನಾರದರ ಊಹೆ!

ಆದರೆ ತರುವಾಯದಲ್ಲಿ ರಾಜನಾಥ್ ಸಿಂಗ್ ಅವರು ಏರೋ ಇಂಡಿಯಾ ಪ್ರದರ್ಶನ ಕಾರ್ಯ ಕ್ರಮದ ಬಗ್ಗೆ ಪ್ರತಿಕ್ರಿಯಿಸುತ್ತಾ ಮಹಾಕುಂಭಮೇಳದ ವಿಷಯವನ್ನೂ ಅದರೊಳಗೆ ತೂರಿಸಿದ್ದು ಗಮನ ಸೆಳೆಯುವಂತಿತ್ತು. “ನಮ್ಮ ಪೂರ್ವಜರು ಭಾರತದ ಆಂತರಿಕ ಶಕ್ತಿಯನ್ನು ಪ್ರತಿನಿಧಿಸಿದರೆ, ನಂತರದವರು ದೇಶದ ಬಾಹ್ಯಶಕ್ತಿಯನ್ನು ಪ್ರದರ್ಶಿಸಿದರು" ಎಂದು ಸಿಂಗ್ ಸಾಹೇಬರು ಹೇಳಿದ್ದೇ ಇದಕ್ಕೆ ಸಾಕ್ಷಿ. ಒಟ್ಟಿನಲ್ಲಿ, ರಾಜಕಾರಣವೆಂಬುದು ಒಂದು ಸಮಯಸೂರ್ತಿಯ ಮತ್ತು ‘ರಂಗ್‌ ಬಿರಂಗಿ’ಯಾಗಿರುವ ಬಾಬತ್ತು ಅನ್ನೋದಂತೂ ನಿಜ ಕಣ್ರೀ!