Narada Sanchara: ಇವರು ‘ಹೆಡ್‌ಲೈನ್’ ಶೂರರು!
ಹೆಡ್‌ಲೈನ್ ಶೂರರು’ ಎಂಬ ಹಣೆಪಟ್ಟಿಯನ್ನು, ಸುದ್ದಿಗೆ ಗ್ರಾಸವಾಗುವವರಿಗೆ ಲಗತ್ತಿಸಬೇಕೋ ಅಥವಾ ಅಂಥ ಹೆಡ್‌ಲೈನುಗಳನ್ನು ಸ್ವತಃ ಹುಟ್ಟುಹಾಕುವವರಿಗೆ ಕೊಡಬೇಕೋ ಎಂಬುದು ಪತ್ರಕರ್ತರ ಪಾಲಿನ ಲೇಟೆಸ್ಟ್ ಜಿಜ್ಞಾಸೆ ಕಣ್ರೀ!
ನಾರದ ಸಂಚಾರ
ಹೆಡ್‌ಲೈನ್ ಶೂರರು’ ಎಂಬ ಹಣೆಪಟ್ಟಿಯನ್ನು, ಸುದ್ದಿಗೆ ಗ್ರಾಸವಾಗುವವರಿಗೆ ಲಗತ್ತಿಸಬೇಕೋ ಅಥವಾ ಅಂಥ ಹೆಡ್‌ಲೈನುಗಳನ್ನು ಸ್ವತಃ ಹುಟ್ಟುಹಾಕುವವರಿಗೆ ಕೊಡಬೇಕೋ ಎಂಬುದು ಪತ್ರ ಕರ್ತರ ಪಾಲಿನ ಲೇಟೆಸ್ಟ್ ಜಿಜ್ಞಾಸೆ ಕಣ್ರೀ! ಅದರಲ್ಲೂ ‘ಶಿಸ್ತಿನ ಪಕ್ಷ’ ಎಂದೇ ಹೆಸರಾದ ಬಿಜೆಪಿ ಯಲ್ಲಿ ‘ಬಣ ಬಡಿದಾಟ’ ಶುರುವಾದ ಮೇಲಂತೂ, ಈ ಪರಿಪಾಠ ತಾರಕಕ್ಕೆ ಏರಿಬಿಟ್ಟಿದೆ.
ಇದನ್ನೂ ಓದಿ: Narada Sanchara: ಏಟು-ಎದುರೇಟು!
“ಸಂಸದ ಡಾ.ಕೆ. ಸುಧಾಕರ್ ಬಿಜೆಪಿಗೆ ಐರನ್ ಲೆಗ್ ಇದ್ದಂತೆ" ಎಂಬುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಉದುರಿಸಿರುವ ಆಣಿಮುತ್ತು ಇದಕ್ಕೊಂದು ಉದಾಹರಣೆ. ಮಿಕ್ಕಂತೆ, ಶಾಸಕ ಬಸನಗೌಡ ಪಾಟೀಲ ಯತ್ನಾಳರು, “ಬಿ.ವೈ.ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾವು ಬಿಜೆಪಿ ಸಂಘಟನೆ ಮಾಡಿದ್ದೇವೆ; ಈ ಬಚ್ಚಾನಿಂದ ನಾವು ಕಲಿಯಬೇಕೇ?" ಎಂಬ ಬುಲೆಟ್ಟನ್ನು ಸಿಡಿಸಿದ್ದರೆ, ಮತ್ತೊಂದೆಡೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು, “ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ನಂಬಿಕೆಗೆ ಅನರ್ಹ ಎಂದು ಮೊದಲೇ ಹೇಳಿದ್ದೆ, ನನ್ನ ಮಾತು ಈಗ ನಿಜವಾಗಿದೆ" ಎಂದು ಉಲಿದಿದ್ದಾರೆ.
“ಈ ಮಾತುಗಳಿಗೆ ಡಾ.ಸುಧಾಕರ್ ಮತ್ತು ಬಿ.ವೈ. ವಿಜಯೇಂದ್ರರು ನೀಡಿರುವ ತಿರುಗೇಟು ಏನು?" ಅಂತ ಮಾತ್ರ ಕೇಳದಿರಿ, ಪುಟದಲ್ಲಿ ಜಾಗದ ಪ್ರಾಬ್ಲಮ್ಮು!