Friday, 13th December 2024

ಪೋಷಕರಿಗೆ ನಟ ಧನುಷ್ ಐಷಾರಾಮಿ ಮನೆ ಉಡುಗೊರೆ

ಚೆನ್ನೈ: ಮಿಳು ನಟ ಧನುಷ್ ತಮ್ಮ ಪೋಷಕರಿಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧನುಷ್ ನಟನೆಯ `ವಾತಿ’ ಸಿನಿಮಾ ಸಕ್ಸಸ್‌ ಪ್ರದರ್ಶನ ಕಾಣುತ್ತಿದೆ. ಫೆ.17ಕ್ಕೆ ತೆರೆಗೆ ಬಂದ ಈ ಚಿತ್ರ ಇದೀಗ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಬೆನ್ನಲ್ಲೇ ಹೊಸ ಮನೆಯ ಗೃಹ ಪ್ರವೇಶ ಸೋಮವಾರ ಅದ್ದೂರಿಯಾಗಿ ನೆರವೇರಿದೆ.

ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ಹೊಸ ಮನೆ ಕಟ್ಟಿಸಿದ್ದು, ಇದೀಗ ಗೃಹ ಪ್ರವೇಶ ಸಂಭ್ರಮ ನೆರವೇರಿದೆ. ಹೊಸ ಮನೆ ಬರೋಬ್ಬರಿ 150 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಈ ಮನೆಯನ್ನು ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.