ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anant Ambani and Radhika Merchant: ಅನಂತ್ ಅಂಬಾನಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ಬಾಲಿವುಡ್ ಸೆಲೆಬ್ರಿಟಿಗಳು

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವರ್ಷ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಅಂಬಾನಿ ಕುಟುಂಬ ಆಯೋಜಿಸಿದೆ. ಕಳೆದ ವರ್ಷ ಮೂರು ದಿನಗಳ ಅದ್ಧೂರಿ ಮದುವೆ ಕಾರ್ಯ ಕ್ರಮಕ್ಕೆ ದೇಶ ವಿದೇಶದ ಗಣ್ಯರು ಆಗ ಮಿಸಿದ್ದರು. ಮದುವೆ ಪೂರ್ವ ಕಾರ್ಯಕ್ರಮದಿಂದ ಹಿಡಿದು ಎಲ್ಲವೂ ಬಹಳ ಅದ್ಧೂರಿಯಾಗಿಯೇ ನೆರವೇರಿತ್ತು. ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ವಾರ್ಷಿ ಕೋತ್ಸವಕ್ಕೆ ಒಂದು ವರ್ಷ ಪೂರೈಸಿದ್ದು ಬಾಲಿವುಡ್ ನ ಅನೇಕ ಗಣ್ಯರು ಅನಂತ್ ಅಂಬಾನಿ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ಅನಂತ್ ಅಂಬಾನಿ ವಿವಾಹ ವಾರ್ಷಿಕೋತ್ಸವಕ್ಕೆ  ಶುಭ ಕೋರಿದ ಬಾಲಿವುಡ್ ನಟರು!

Anant Ambani and Radhika Merchant

Profile Pushpa Kumari Jul 13, 2025 7:24 PM

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕುಟುಂಬಗಳ ಸಾಲಿನಲ್ಲಿ ಅನಂತ್ ಅಂಬಾನಿ ಕುಟುಂಬ ಕೂಡ ಒಂದಾಗಿದೆ. ಅವರ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮವಾದರೂ ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಅಂತೆಯೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Ambani and Radhika Merchant) ಅವರ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವರ್ಷ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಅಂಬಾನಿ ಕುಟುಂಬ ಆಯೋಜಿಸಿದೆ. ಕಳೆದ ವರ್ಷ ಮೂರು ದಿನಗಳ ಅದ್ಧೂರಿ ಮದುವೆ ಕಾರ್ಯ ಕ್ರಮಕ್ಕೆ ದೇಶ ವಿದೇಶದ ಗಣ್ಯರು ಆಗಮಿಸಿದ್ದರು. ಮದುವೆ ಪೂರ್ವ ಕಾರ್ಯಕ್ರಮದಿಂದ ಹಿಡಿದು ಎಲ್ಲವೂ ಬಹಳ ಅದ್ಧೂರಿ ಯಾಗಿಯೇ ನೆರವೇರಿತ್ತು. ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವರ್ಷ ಪೂರೈಸಿದ್ದು ಬಾಲಿವುಡ್ ನ ಅನೇಕ ಗಣ್ಯರು ಅನಂತ್ ಅಂಬಾನಿ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಮತ್ತು ನಟ ರಣವೀರ್ ಸಿಂಗ್ ಅವರು ಸೋಶಿಯಲ್ ಮಿಡಿಯಾದಲ್ಲಿ ಶುಭಾ ಶಯಗಳನ್ನು ತಿಳಿಸಿದ್ದಾರೆ. ಕಳೆದ ವರ್ಷದ ಬ್ಲ್ಯಾಕ್ ಆ್ಯಂಡ್ ವೈಟ್ ವೆಡ್ಡಿಂಗ್ ಫೋಟೊ ಜೊತೆಗೆ ಕ್ಯಾಪ್ಶನ್ ಕೂಡ ನಟ ಶಾರುಖ್ ಖಾನ್ ಹಂಚಿ ಕೊಂಡಿದ್ದಾರೆ. ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು... ಹೀಗೆ ಸದಾ ಕಾಲ‌ ಇಬ್ಬರೂ ಒಟ್ಟಿಗೆ ಇರಿ.. ಎಂದು ಹಾರೈಸುತ್ತೇನೆ. ನಿಮ್ಮ ಪ್ರೀತಿ, ಆರೋಗ್ಯ ಚಿರಕಾಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.

ಅನಂತ್ ಮತ್ತು ರಾಧಿಕಾ ಅವರ ಫೋಟೋವನ್ನು ನಟ ರಣವೀರ್ ಸಿಂಗ್ ಕೂಡ ಹಂಚಿ ಕೊಂಡಿದ್ದಾರೆ. ನನ್ನ ಪ್ರೀತಿಯ ಅನಂತ್ ಮತ್ತು ರಾಧಿಕಾ ಅವರಿಗೆ ಮೊದಲ ವಿವಾಹ ವಾರ್ಷಿ ಕೋತ್ಸವದ ಶುಭಾಶಯಗಳು ಎಂದು ಕ್ಯಾಪ್ಶನ್ ಬರೆದು ಕೊಂಡಿದ್ದಾರೆ. ಇವರ ಪೋಸ್ಟ್ ಕಂಡು ಅಭಿಮಾನಿಗಳು ಕೂಡ ಅನಂತ್ ದಂಪತಿಗೆ ಶುಭಕೋರಿದ್ದಾರೆ.

ಇದನ್ನು ಓದಿ:Anant Ambani: ಪ್ರೀತಿಯ ಶ್ವಾನ ʼಹ್ಯಾಪಿʻಯನ್ನು ಕಳೆದುಕೊಂಡ ಅಂಬಾನಿ ಕುಟುಂಬ! ಭಾವನಾತ್ಮಕ ಪೋಸ್ಟ್ ವೈರಲ್

ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರು ಉದ್ಯಮಿ ವೀರೇನ್ ಮರ್ಚೆಂಟ್ ಅವರ ಮಗಳು ರಾಧಿಕಾ ಜೊತೆಗೆ ಜುಲೈ 12, 2024ರಂದು ವಿವಾಹ ವಾಗಿ ದ್ದಾರೆ. ಮುಂಬೈನಲ್ಲಿ ಮೂರು ದಿನಗಳ ಕಾಲ ಮದುವೆಯ ಸಂಭ್ರಮಾಚರಣೆ ನಡೆದಿತ್ತು. ಕಿಮ್ ಮತ್ತು ಕ್ಲೋಯ್ ಕಾರ್ಡಶಿಯಾನ್, ಜಾನ್ ಸೀನಾ, ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಹಾಗೂ ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಸೇರಿದಂತೆ ಇತರ ಬಾಲಿವುಡ್ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಷ್ಟು ಮಾತ್ರವಲ್ಲದೆ ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ 50 ಜೋಡಿಗಳಿಗೆ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯವು ನಡೆದಿತ್ತು. ಅದರ ಜೊತೆಗೆ ಬಡ ಮಕ್ಕಳಿಗೆ ಸೌಲಭ್ಯ ವಿತರಣೆ, ಅನಾಥ ಮಕ್ಕಳಿಗೆ ಮೂಲ ಭೂತ ಸೌಕರ್ಯ ವಿತರಣೆ ಇತ್ಯಾದಿ ಸಮಾಜ ಸೇವೆಯ ಕಾರ್ಯಕ್ರಮ ಕೂಡ ಮಾಡಲಾಗಿತ್ತು. ಇದೀಗ ಅವರ ಒಂದು ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಅನೇಕ ಗಣ್ಯರು ಶುಭ ಕೋರುತ್ತಿದ್ದಾರೆ.