Ayesha Khan: ಬಾಲಿವುಡ್ ನಟಿ ಆಯೇಷಾ ಖಾನ್ ಬೋಲ್ಡ್ ಫೋಟೊ ಶೂಟ್; ನೆಟ್ಟಿಗರು ಫಿದಾ!
ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ನಟಿ ಆಯೇಷಾ ಖಾನ್ ಅವರು ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಹಿಂದಿ ಬಿಗ್ ಬಾಸ್ 17ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ನಟಿ ಆಯೇಷಾ ಅವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದಾರೆ. ಅದೇ ರೀತಿ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದ ಇವರು ತಮ್ಮ ಫೋಟೊವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಈ ಬಾರಿ ಕೂಡ ಬೋಲ್ಡ್ ಫೋಟೊ ಶೂಟ್ ಮಾಡಿಕೊಂಡಿದ್ದಾರೆ.

Ayesha Khan


ನಟಿ ಆಯೇಷಾ ಖಾನ್ ಅವರು ಬ್ಲ್ಯಾಕ್ ಗೌನ್ ತೊಟ್ಟು ವಿಭಿನ್ನವಾಗಿ ಕಂಡಿದ್ದಾರೆ. ಅವರು ಫ್ರೀ ಹೇರ್ ಸ್ಟೈಲ್ ಮಾಡಿಕೊಂಡಿದ್ದು ಗೌನ್ನಲ್ಲಿ ಪ್ರಿನ್ಸೆಸ್ ಲುಕ್ ಮೂಲಕ ಮಿಂಚಿದ್ದಾರೆ. ಲೇಯರ್ಡ್ ಮುತ್ತಿನ ಹಾರ ತೊಟ್ಟ ಕಾರಣ ಇವರ ಧಿರಿಸಿಗೆ ಹೊಸ ಮೆರುಗು ನೀಡಿದೆ. ನಟಿಯು ನ್ಯಾಚುರಲ್ ಮೇಕಪ್ ನಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಆಯೇಷಾ ಅವರು ಬ್ಲ್ಯಾಕ್ ಕಲರ್ ಗೌನ್ ಗೆ ಮ್ಯಾಚಿಂಗ್ ಆಗಿ ನೆಟ್ ಗ್ಲೌಸ್ ಧರಿಸಿದ್ದನ್ನು ಕಾಣಬಹುದು. ಮಾಡೆಲಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಈ ಫೋಟೊದಲ್ಲಿ ಗ್ಲಾಮರಸ್ ಬೆಡಗಿಯಂತೆ ಕಂಡಿದ್ದಾರೆ. ಇವರ ಹೇರ್ ಸ್ಟೈಲ್ ಮತ್ತು ಮೇಕಪ್ ನಿಂದ ಸ್ಟನಿಂಗ್ ಲುಕ್ ನೀಡುವಂತೆ ಮಾಡಿದೆ.

ನಟಿ ಆಯೇಷಾ ಅವರ ಇನ್ನೊಂದು ಫೋಟೊದಲ್ಲಿ ಡೈಮಂಡ್ ರಿಂಗ್ ಹೈಲೈಟ್ ಆಗಿದೆ. ಅವರ ಬ್ಲ್ಯಾಕ್ ಗೌನ್ ಶೋಲ್ಡರ್ ಲೆಸ್ ಆದ ಕಾರಣ ಸಖತ್ ಬೋಲ್ಡ್ ಆಗಿ ನಟಿ ಆಯೇಷಾ ಕಂಡಿದ್ದಾರೆ. ನೈಟ್ ನೇಚರ್ ನಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದು ನೆಟ್ಟಿಗರ ಗಮನಸೆಳೆಯುವಂತೆ ಮಾಡಿದೆ.

ಬಲ್ವೀರ್ ರಿಟರ್ನ್ಸ್ ಮೂಲಕ ಬಾಲಿವುಡ್ ಸಿನಿಮಾರಂಗಕ್ಕೆ ನಟಿ ಆಯೇಷಾ ಪಾದಾರ್ಪಣೆ ಮಾಡಿದ್ದರು. ಬಿಗ್ ಬಾಸ್ 17 ರಲ್ಲಿ ಕಾಣಿಸಿಕೊಂಡ ಬಳಿಕ ಇವರ ಖ್ಯಾತಿ ಮತ್ತಷ್ಟು ಪ್ರಸಿದ್ಧಿ ಪಡೆಯಿತು. ಆಯೇಷಾ ಅವರಿಗೆ ಲಕ್ಕಿ ಬಾಸ್ಕರ್ ಸಿನಿಮಾ ಆಫರ್ ಕೂಡ ಬಂದಿತ್ತು. ಆದರೆ ಅವರಿಗೆ ಬೇರೆ ಸಿನಿಮಾ ಜೊತೆಗೆ ಬ್ಯುಸಿ ಇದ್ದ ಕಾರಣ ಈ ಸಿನಿಮಾದಲ್ಲಿ ಅವರು ಅಭಿನಯಿಸಿಲ್ಲ. ಬಳಿಕ ಸನ್ನಿ ಡಿಯೋಲ್ ಅವರ ಜಾತ್ ನಂತಹ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಮುಖಚಿತ್ರಂ, ಜಾತ್, ಕಸೌತಿ ಜಿಂದಗಿ ಕೇ ಮತ್ತು ಬಲ್ವೀರ್ ರಿಟರ್ನ್ಸ್ನಲ್ಲಿ ಕಾಣಿಸಿಕೊಂಡ ಬಳಿಕ ಅವರಿಗೆ ಸಾಲು ಸಾಲು ಸಿನಿಮಾ ಆಫರ್ಸ್ ಕೂಡ ಬರುತ್ತಿದೆ. ಸಿನಿಮಾ ಜೊತೆಗೆ ಟಿವಿ ಸೀರಿಯಲ್ಸ್ ಮತ್ತು ರಿಯಾಲಿಟಿ ಶೋ ನಲ್ಲಿಯೂ ಭಾಗಿಯಾಗುತ್ತಿದ್ದಾರೆ. ಸದ್ಯ ಅವರು ದಿಲ್ ಕೋ ರಫು ಕರ್ ಲೀ ಟಿವಿ ಸೀರಿಸ್ ಶೂಟಿಂಗ್ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿಯ ಬ್ಲ್ಯಾಕ್ ಗೌನ್ ತೊಟ್ಟ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.