Wednesday, 11th December 2024

ತೆಲುಗಿನ ‘ಕಣ್ಣಪ್ಪ’ ಚಿತ್ರಕ್ಕೆ ಅಕ್ಷಯ್​ ಕುಮಾರ್..!

ಮುಂಬೈ: ಮುಖೇಶ್​ ಕುಮಾರ್​ ಸಿಂಗ್​ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ ಸಿನಿಮಾದ ಪಾತ್ರ ವರ್ಗ ಹಿರಿದಾಗುತ್ತಿದೆ. ವಿಷ್ಣು ಮಂಚು ಅವರು ಹೀರೋ ಆಗಿ ನಟಿಸುತ್ತಿದ್ದಾರೆ.
ಪುರಾಣದ ಕಥೆಯನ್ನು ಆಧರಿಸಿ ಸಿದ್ಧವಾಗುತ್ತಿರುವ ಈ ಸಿನಿಮಾ ತಂಡಕ್ಕೆ ಈಗ ನಟ ಅಕ್ಷಯ್​ ಕುಮಾರ್​ ಅವರು ಸೇರ್ಪಡೆ ಆಗಿದ್ದಾರೆ. ಇದು ಅಕ್ಷಯ್​ ಕುಮಾರ್ ಒಪ್ಪಿಕೊಂಡ ಮೊದಲ ತೆಲುಗು ಸಿನಿಮಾ. ಹೀರೋ ಆಗಿ ಬ್ಯಾಕ್​ ಟು ಬ್ಯಾಕ್ ಸಿನಿಮಾ ಗಳನ್ನು ಮಾಡುತ್ತಿರುವ ಅಕ್ಷಯ್​ ಕುಮಾರ್​ ಅವರು ತೆಲುಗಿನ ‘ಕಣ್ಣಪ್ಪ’ ಚಿತ್ರದಲ್ಲಿ ಯಾವ ಪಾತ್ರ ಮಾಡಲಿದ್ದಾರೆ.

 ‘ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ವಿಷ್ಣು ಮಂಚು ಅವರ ಮಹತ್ವಾಕಾಂಕ್ಷಿ ಸಿನಿಮಾವಾದ ‘ಕಣ್ಣಪ್ಪ’ ಚಿತ್ರದ ಪಾತ್ರವರ್ಗಕ್ಕೆ ಬಾಲಿವುಡ್​ನ ಸೂಪರ್​ ಸ್ಟಾರ್​ ಅಕ್ಷಯ್​ ಕುಮಾರ್​ ಸೇರ್ಪಡೆ ಆಗಿದ್ದಾರೆ. ಪ್ರಭಾಸ್​, ಪ್ರಭುದೇವ, ಮೋಹನ್​ಲಾಲ್​, ಶರತ್​ಕುಮಾರ್​ ಮುಂತಾ ದವರ ಬಳಿಕ ಅಕ್ಷಯ್​ ಕುಮಾರ್​ ಅವರ ಗ್ರ್ಯಾಂಡ್​ ಎಂಟ್ರಿ ಆಗಿದೆ’ ಎಂದು ಅವರು ಪೋಸ್ಟ್​ ಮಾಡಿ ದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಹಲವು ಸಿನಿಮಾಗಳು ಸೋಲು ಕಂಡಿವೆ. ಆದ್ದರಿಂದ ಅವರು ದಕ್ಷಿಣ ಭಾರತದ ಸಿನಿಮಾ ಒಪ್ಪಿಕೊಂಡಿರಬಹುದು ಎಂದು ನೆಟ್ಟಿಗರು ಮಾತನಾಡಿ ಕೊಳ್ಳುತ್ತಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯಿಸಿರುವ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಏ.10ರಂದು ಈದ್​ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.