Wednesday, 1st May 2024

ತಾಪಮಾನ ತೀವ್ರ ಕುಸಿತ: 216 ರಸ್ತೆ ಬಂದ್

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತವಾಗಿದೆ. ಹೀಗಾಗಿ ಹಲವು ಮಾರ್ಗಗಳನ್ನು ನಿರ್ಬಂಧಿಸಲಾಗಿದೆ.

ನೂರಾರು ಪ್ರವಾಸಿಗರು ಹಿಮಪಾತದಲ್ಲಿ ಸಿಕ್ಕಿಕೊಂಡಿರುವುದು ವರದಿಯಾಗಿದೆ. ರಸ್ತೆ ಮೇಲೆ ಬಿದ್ದ ಹಿಮವನ್ನು ತೆಗೆಯಲು ಸಾಧ್ಯವಾಗದೆ ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.

ಹಿಮಪಾತದೊಂದಿಗೆ ಮಳೆ ಕೂಡ ಮುಂದುದಿದ್ದು ಪ್ರವಾಸಿಗರು ಆತಂಕದಲ್ಲಿದ್ದಾರೆ. ರಸ್ತೆಯುದ್ದಕ್ಕೂ ವಾಹನಗಳ ಸಾಲುಗಟ್ಟಿ ನಿಂತಿದ್ದು ಹಿಮ ವಾಹನನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.

ಕಳೆದ 24 ಗಂಟೆಗಳಲ್ಲಿ ಲಾಹೌಲ್, ಸ್ಪಿತಿ, ಶಿಮ್ಲಾ, ಕುಲು ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಅಧಿಕ ಹಿಮಪಾತ ದಾಖಲಾಗಿದೆ. ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ತಾಪಮಾನ ಕಡಿಮೆಯಾಗುತ್ತಿದೆ.

ಹಿಮಾಚಲದಲ್ಲಿ ಹಿಮಪಾತದಿಂದಾಗಿ ಹಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತ ಗೊಂಡಿದೆ. ರಾಜ್ಯದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಟ್ಟು 216 ರಸ್ತೆ ಗಳನ್ನು ಬಂದ್ ಮಾಡಲಾಗಿದೆ.

ಲಾಹೌಲ್ ಮತ್ತು ಸ್ಪಿತಿಯಲ್ಲಿ ಹೆಚ್ಚಿನ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ 148, ಕಿನ್ನೌರ್‌ನಲ್ಲಿ 25, ಕುಲುವಿನಲ್ಲಿ 12, ಚಂಬಾದಲ್ಲಿ 7, ಕಂಗ್ರಾದಲ್ಲಿ 2, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದಲ್ಲದೇ ಹಲವೆಡೆ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿದೆ.

error: Content is protected !!