Friday, 13th December 2024

56ನೇ ವಯಸ್ಸಿನಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದ ಒಡಿಶಾ ಶಾಸಕ !

ಭುವನೇಶ್ವರ: ಒಡಿಶಾದಲ್ಲೊಬ್ಬ ಶಾಸಕ ತಮ್ಮ 56ನೇ ವಯಸ್ಸಿನಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆಯುವ ಮೂಲಕ ತಮ್ಮ ನಾಲ್ಕು ದಶಕಗಳ ಕನಸನ್ನು ಈಡೇರಿಸಿಕೊಂಡಿ ದ್ದಾರೆ.

ಒಡಿಶಾದ ಫುಲ್ಬಾನಿ ಕ್ಷೇತ್ರದ ಬಿಜೆಡಿ ಪಕ್ಷದ ಅಂಗದ ಕನ್ಹಾರ್ ಅವರು ಕೌಟುಂಬಿಕ ಸಮಸ್ಯೆಯಿಂದಾಗಿ 1978 ರಲ್ಲಿ ಶಿಕ್ಷಣ ಮೊಟಕುಗೊಳಿಸಿದ್ದರು. ಹತ್ತನೇ ತರಗತಿ ಪರೀಕ್ಷೆ ಬರೆಯಬೇಕೆಂಬ ಬಯಕೆ ಅವರದಾಗಿತ್ತಾದರೂ ಸಾಧ್ಯವಾಗಿರಲಿಲ್ಲ.

ಆದರೆ, ಈ ವರ್ಷ ಕನ್ಹಾರ್ ಅವರು, ಹತ್ತನೇ ತರಗತಿಯ ಮೊದಲ ದಿನದ ಪರೀಕ್ಷೆ ಬರೆದಿದ್ದಾರೆ. ತಮ್ಮ ಇಬ್ಬರು ಸ್ನೇಹಿತರೊಂದಿಗೆ ರುಜಂಗಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ.

ನಾನು 1978 ರಲ್ಲಿ 10 ನೇ ತರಗತಿಯಲ್ಲಿದ್ದಾಗ ಕೌಟುಂಬಿಕ ಸಮಸ್ಯೆಗಳಿಂದಾಗಿ ಪರೀಕ್ಷೆ ಬರೆಯಲಾಗಲಿಲ್ಲ. ಇತ್ತೀಚೆಗೆ 50 ವರ್ಷ ಕ್ಕಿಂತ ಮೇಲ್ಪಟ್ಟವರೂ ಪರೀಕ್ಷೆ ತೆಗೆದುಕೊಳ್ಳ ಬಹುದು ಎಂಬುದನ್ನು ತಿಳಿದುಕೊಂಡೆ. ಶಿಕ್ಷಣ ಪಡೆಯಲು ಯಾವುದೇ ವಯಸ್ಸಿನ ಅಡ್ಡಿ ಇರುವುದಿಲ್ಲ ಎಂಬುದನ್ನು ಮನಗಂಡಿದ್ದೇನೆ ಎಂದು ತಿಳಿಸಿದ್ದಾರೆ.

ಕನ್ಹಾರ್ ಅವರೊಂದಿಗೆ ಪರೀಕ್ಷೆ ಬರೆಯುತ್ತಿರುವ ಸ್ನೇಹಿತರಲ್ಲಿ ಒಬ್ಬರು ಸರಪಂಚರಾಗಿದ್ದಾರೆ.