Sunday, 12th May 2024

ತಮಿಳುನಾಡು, ಕೇರಳದಲ್ಲೂ ಪಿಎಫ್‌ಐ ಮೇಲೆ ನಿಷೇಧ

ನವದೆಹಲಿ/ಚೆನ್ನೈ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ತಮಿಳು ನಾಡು ಹಾಗೂ ಕೇರಳ ಸರ್ಕಾರಗಳೂ ಕೂಡ ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿವೆ.

ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಕೋಮು ದ್ವೇಷ ಹರಡಲು ಈ ಸಂಘಟನೆಗಳು ಯತ್ನಿಸಿದ್ದವು ಎಂಬುದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ಮೇಲೆ ನಿಷೇಧ ಹೇರಿತ್ತು.

2006 ರಲ್ಲಿ ಆರಂಭವಾದ ಪಿಎಫ್‌ಐ ಸಂಘಟನೆ ನಂತರದ ದಿನಗಳಲ್ಲಿ ಕೋಮು ಗಲಭೆ ನಡೆದ ವೇಳೆ ಈ ಸಂಘಟನೆಯ ಕಾರ್ಯಕರ್ತರ ಹೆಸರುಗಳು ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ವಿವಿಧ ರಾಜ್ಯಗಳಲ್ಲಿದ್ದ ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. 

error: Content is protected !!