Saturday, 12th October 2024

ಶಿಮ್ಲಾದಲ್ಲಿ ಮುಂದುವರಿದ ಭೂಕುಸಿತ: ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಮ್ಮರ್‌ಹಿಲ್‌ನ ಶಿವ ದೇವಸ್ಥಾನದ ಬಳಿ ಸಂಭವಿಸಿದ ಭೂಕುಸಿತದ ಅವಶೇಷಗಳಡಿ ಅನೇಕರು ಸಿಲುಕಿದ್ದು, ಮೂರನೇ ದಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಭೂಕುಸಿತ ಸಂಭವಿಸಿದ್ದು, ದೊಡ್ಡ ಪ್ರಮಾಣ ದಲ್ಲಿ ಹಾನಿಯುಂಟುಮಾಡಿದೆ. ವಿಶೇಷವಾಗಿ ರಾಜಧಾನಿ ಶಿಮ್ಲಾದಲ್ಲಿರುವ ಶಿವ ದೇವಾ ಲಯದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಅನೇಕರು ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದಾರೆ.

ಲಾಲ್ ಕೋಠಿ ಮತ್ತು ಕೃಷ್ಣನಗರದಲ್ಲಿ ಸಹ ಭೂಕುಸಿತವಾಗಿದ್ದು, ಇಂದು ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಶಿಮ್ಲಾದ ಕೃಷ್ಣನಗರದಲ್ಲಿ ಸಹ ಭೂಕುಸಿತ ಸಂಭವಿಸಿದ ಪ್ರಕರಣಗಳು ನಿನ್ನೆ ಮುನ್ನೆಲೆಗೆ ಬಂದಿವೆ. ಕಸಾಯಿಖಾನೆ ಸೇರಿದಂತೆ 5ಕ್ಕೂ ಹೆಚ್ಚು ಮನೆಗಳು ಭೂಕುಸಿತಕ್ಕೆ ಒಳಗಾಗಿದೆ.