Sunday, 19th May 2024

ಬೆಳ್ಳಿ ಬೆಲೆ ಎರಡು ಸಾವಿರ ರೂ. ಏರಿಕೆ

ನವದೆಹಲಿ: ಬೆಳ್ಳಿಯ ಬೆಲೆಯಲ್ಲಿ ಬುಧವಾರ ದಾಖಲೆಯ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 2,150 ರೂ. ಏರಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,250 ರೂ. ಇದ್ದುದು 46,550 ರೂ. ಆಗಿದೆ.

ಭಾರತದಲ್ಲಿ ಮೂರು ದಿನಗಳಿಂದ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿತ್ತು. ಇಂದು ಚಿನ್ನದ ಬೆಲೆ 10 ಗ್ರಾಂಗೆ 330 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಒಂದೇ ದಿನ ದಲ್ಲಿ 2,150 ರೂ. ಏರಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ 50,450 ರೂ. ಇದ್ದುದು 50,780 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾ ರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,640 ರೂ. ಮುಂಬೈ- 46,550 ರೂ, ದೆಹಲಿ- 46,550 ರೂ, ಕೊಲ್ಕತ್ತಾ- 46,550 ರೂ, ಬೆಂಗಳೂರು- 46,550 ರೂ, ಹೈದರಾಬಾದ್- 46,550 ರೂ, ಕೇರಳ- 46,550 ರೂ, ಪುಣೆ- 46,600 ರೂ, ಮಂಗಳೂರು- 46,550 ರೂ, ಮೈಸೂರು- 46,550 ರೂ. ಇದೆ.

24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ: ಚೆನ್ನೈ- 51,970 ರೂ, ಮುಂಬೈ- 50,780 ರೂ, ದೆಹಲಿ- 50,780 ರೂ, ಕೊಲ್ಕತ್ತಾ- 50,780 ರೂ, ಬೆಂಗಳೂರು- 50,780 ರೂ, ಹೈದರಾಬಾದ್- 50,780 ರೂ, ಕೇರಳ- 50,780 ರೂ, ಪುಣೆ- 50,820 ರೂ, ಮಂಗಳೂರು- 50,780 ರೂ, ಮೈಸೂರು- 50,780 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಇಂದು ಬೆಳ್ಳಿ ಬೆಲೆ ದಾಖಲೆಯ ಏರಿಕೆ ಕಂಡಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮ ನಿಸುವುದಾದರೆ, ಬೆಂಗಳೂರು- 65,600 ರೂ, ಮೈಸೂರು- 65,600 ರೂ., ಮಂಗಳೂರು- 65,600 ರೂ., ಮುಂಬೈ- 61,550 ರೂ, ಚೆನ್ನೈ- 65,600 ರೂ, ದೆಹಲಿ- 61,550 ರೂ, ಹೈದರಾಬಾದ್- 65,600 ರೂ, ಕೊಲ್ಕತ್ತಾ- 65,600 ರೂ. ಆಗಿದೆ.

error: Content is protected !!