Friday, 13th December 2024

ಉದ್ಯೋಗ ಸೃಷ್ಠಿಸಲು ಸಂಸ್ಥೆಗಳಿಗೆ ’ಸಬ್ಸಿಡಿ’ ಯೋಜನೆ: ವಿತ್ತ ಸಚಿವೆ ನಿರ್ಮಲಾ ಘೋಷಣೆ

ನವದೆಹಲಿ: ಉದ್ಯೋಗಿಗಳ ನಿವೃತ್ತಿ ನಿಧಿ ಮತ್ತು ಉದ್ಯೋಗದಾತರಿಗೆ ಎರಡು ವರ್ಷದ ಸಬ್ಸಿಡಿ ಲಭ್ಯವಾಗುವಂತೆ ಹೊಸ ನೇಮ ಕಾತಿ ಮಾಡುವ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಹೊಸ ಉದ್ಯೋಗ ಸೃಷ್ಟಿ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಗುರುವಾರ ಘೋಷಿಸಿದ್ದಾರೆ.

ನೌಕರರ ಕೊಡುಗೆ (ಶೇ.12 ರಷ್ಟು ವೇತನ) ಮತ್ತು ಉದ್ಯೋಗದಾತರ ಕೊಡುಗೆ (ಶೇ.12 ರಷ್ಟು ವೇತನ) ಒಟ್ಟು 24 ಶೇಕಡಾ ವೇತನ ವನ್ನು ಸಂಸ್ಥೆಗಳಿಗೆ ಎರಡು ವರ್ಷಗಳವರೆಗೆ ನೀಡಲಾಗುವುದು ಎಂದು ಹೇಳಿದರು.

ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ ಅಡಿಯಲ್ಲಿ, ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ನೋಂದಾಯಿತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸಂಸ್ಥೆಗೆ ಈ ಸಬ್ಸಿಡಿ ಸಿಗಲಿದೆ. ಇಪಿಎಫ್‌ಒ-ನೋಂದಾಯಿತ ಸಂಸ್ಥೆಯಲ್ಲಿ ಮಾಸಿಕ ₹15,000 ಕಡಿಮೆ ವೇತನದಲ್ಲಿ ಉದ್ಯೋಗಕ್ಕೆ ಸೇರುವ ಯಾವುದೇ ಹೊಸ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.

ಇದು ಮಾರ್ಚ್ 1, 2020 ರಿಂದ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗದಿಂದ ನಿರ್ಗಮಿಸಿದ 15 ಸಾವಿರ ರೂ.ಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದ ಇಪಿಎಫ್ ಸದಸ್ಯರಿಗೆ ಮತ್ತು 2020 ರ ಅಕ್ಟೋಬರ್ 1 ರಂದು ಅಥವಾ ನಂತರ ಉದ್ಯೋಗ ದಲ್ಲಿರುವವರಿಗಾಗಿದೆ.

50 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕನಿಷ್ಠ ಎರಡು ಹೊಸ ಉದ್ಯೋಗಿಗಳನ್ನುಸೇರಿಸಬೇಕು. 50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಆ ಸಂಸ್ಥೆಗಳು ಕನಿಷ್ಠ ಐದು ಹೊಸ ಉದ್ಯೋಗಗಳನ್ನು ನೀಡಬೇಕಾಗುತ್ತದೆ. ಈ ಯೋಜನೆ ಜೂನ್ 30, 2021 ರವರೆಗೆ ಕಾರ್ಯನಿರ್ವಹಿಸಲಿದೆ