ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mangaluru News: ಹಿಂದೂ ಮುಖಂಡನ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ!

Mangaluru News: ಅಪಘಾತವೆಸಗಿದ ಖಾಸಗಿ ಬಸ್‌ಗೆ ಕಲ್ಲು ತೂರಿದ ಪ್ರಕರಣದಲ್ಲಿ ಹಿಂದು ಮುಖಂಡನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

ಹಿಂದೂ ಮುಖಂಡನ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ!

Profile Prabhakara R Jul 5, 2025 4:00 PM

ಮಂಗಳೂರು: ಮಂಗಳೂರಿನ ಹಿಂದೂ ಮುಖಂಡನ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವ ಘಟನೆ (Mangaluru News) ನಡೆದಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಮೊಬೈಲ್ ತನಿಖೆ ವೇಳೆ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದನ್ನು ನೋಡಿ ಪೊಲೀಸರೇ ಶಾಕ್‌ ಅಗಿದ್ದಾರೆ. ಮಂಗಳೂರಿನ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹ ಸಂಯೋಜಕ ಸಮಿತ್‌ರಾಜ್ ಧರೆಗುಡ್ಡೆ ಎಂಬಾತನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

ಅಪಘಾತವೆಸಗಿದ ಖಾಸಗಿ ಬಸ್‌ಗೆ ಕಲ್ಲು ತೂರಿದ ಪ್ರಕರಣದಲ್ಲಿ ಸಮಿತ್ ರಾಜ್ ಧರೆಗುಡ್ಡೆಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದರು. ಆಗ ಮೊಬೈಲ್ ಡಾಟಾ ಎಕ್ಸ್‌ಟ್ರಾಕ್ಟ್‌ ಮಾಡಿಸಲು ಕೋರ್ಟ್ ಮತ್ತು ಮೇಲಾಧಿಕಾರಿ ಅನುಮತಿ ಪಡೆದಿದ್ದ ಪೊಲೀಸರು, ಅನುಮತಿಯ ಬಳಿಕ ಮಂಗಳೂರಿನ ಸೆನ್ ಲ್ಯಾಬ್‌ನಲ್ಲಿ ಡಾಟಾ ಎಕ್ಸ್‌ಟ್ರಾಕ್ಟ್‌ ಮಾಡಿದ ವೇಳೆ 50ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಇವುಗಳಲ್ಲಿ ಕರಾವಳಿಯ ಪ್ರಭಾವಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಕೂಡ ಇದೆ ಎಂದು ತಿಳಿದುಬಂದಿದೆ.

ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೂಡಬಿದಿರೆ ಇನ್ಸ್ಪೆಕ್ಟರ್ ದೂರು ನೀಡಿದ್ದು, ಹೀಗಾಗಿ ಮೂಡಬಿದಿರೆ ಠಾಣೆಯಲ್ಲಿ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲು ಮಾಡಲಾಗಿದೆ. ಆ ಅಶ್ಲೀಲ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಅಥವಾ ಇನ್ಯಾರಿಗೋ ಕಳುಹಿಸುವ ಸಾಧ್ಯತೆ ಇರುವುದರಿಂದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಸಾಧ್ಯತೆ ಹಿನ್ನೆಲೆ ಎಫ್‌ಐಆರ್ ದಾಖಲು ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Physical Abuse: ಅತ್ಯಾಚಾರ, ವಂಚನೆ ಪ್ರಕರಣ: ತಲೆಮರೆಸಿಕೊಂಡಿದ್ದ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಅರೆಸ್ಟ್

ವಿಡಿಯೋಗಳ ಸಂಬಂಧ ಸಮಿತ್ ರಾಜ್ ಧರೆಗುಡ್ಡೆಗೆ ನೊಟೀಸ್ ನೀಡಲು ಪೊಲೀಸರು ಸಿದ್ಧತೆ ಮಾಡಿದ್ದಾರೆ. ಸದ್ಯ ಬಸ್‌ಗೆ ಕಲ್ಲು ತೂರಿದ ಕೇಸ್‌ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿರುವ ಸಮಿತ್ ರಾಜ್‌ನನ್ನು ಪೊಲೀಸರು ಮತ್ತೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.