Viral News: ಸೋನಮ್, ಮುಸ್ಕಾನ್ ರೀತಿ ಕೊಲೆ ಮಾಡ್ತೇನೆ... ಅಕ್ರಮ ಸಂಬಂಧ ಪ್ರಶ್ನಿಸಿದ ಗಂಡನಿಗೆ ಪತ್ನಿಯಿಂದ ಧಮ್ಕಿ
ಮಧ್ಯಪ್ರದೇಶದ (Madhyapradesh) ಇಂದೋರ್ (Indore) ನಲ್ಲಿ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ ಆಕೆಯನ್ನು ಈ ಬಗ್ಗೆ ಪ್ರಶ್ನಿಸಿದಾಗ ನಿಮಗೆ ಹನಿಮೂನ್ ಕೊಲೆ ಪ್ರಕರಣ (Honeymoon murder case) ನೆನಪಿದೆಯೇ ಎಂದು ಹೇಳಿ ಬೆದರಿಸಿದ್ದಾಳೆ ಎಂದು ಪತಿ ಈಗ ತನ್ನ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾನೆ.


ಇಂದೋರ್: ಮೇಘಾಲಯದಲ್ಲಿ (meghalaya) ನಡೆದ ಹನಿಮೂನ್ ಕೊಲೆ ಪ್ರಕರಣವನ್ನು (honeymoon murder case) ದೇಶವೇ ಮರೆಯಲು ಸಾಧ್ಯವಿಲ್ಲ. ಇದು ಹೆಚ್ಚಿನ ಗಂಡ ಹೆಂಡತಿ ಮಧ್ಯೆ ಅನುಮಾನ ಸೃಷ್ಟಿ ಮಾಡುವಂತೆ ಮಾಡಿದೆ. ಇದರ ನಡುವೆಯೇ ಕೆಲವು ಮಹಿಳೆಯರು ಈ ಪ್ರಕರಣವನ್ನು ನೆನಪಿಸಿ ಗಂಡನನ್ನು ಬೆದರಿಸುತ್ತಿದ್ದಾರೆ. ಇಂತಹ ಒಂದು ಪ್ರಕರಣ ಈಗ ಮಧ್ಯಪ್ರದೇಶದ (Madhyapradesh) ಇಂದೋರ್ (indore) ನಲ್ಲಿ ನಡೆದಿದೆ. ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ ಆಕೆಯನ್ನು ಈ ಬಗ್ಗೆ ಪ್ರಶ್ನಿಸಿದಾಗ ನಿಮಗೆ ಹನಿಮೂನ್ ಕೊಲೆ ಪ್ರಕರಣ ನೆನಪಿದೆಯೇ ಎಂದು ಹೇಳಿ ಬೆದರಿಸಿದ್ದಾಳೆ ಎಂದು ಪತಿ ಈಗ ತನ್ನ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾನೆ.
ಮನೆ ಮಾಲೀಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಪ್ರಶ್ನಿಸಿದ ಪತಿಗೆ ಆಕೆಯು ಹನಿಮೂನ್ ಕೊಲೆ ಪ್ರಕರಣ ಮರೆತಿದ್ದೀರಾ ಎಂದು ಪ್ರಶ್ನಿಸಿ ನಿಮ್ಮನ್ನು ಅದೇ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಏಳು ವರ್ಷಗಳಿಂದ ಮನೆ ಮಾಲೀಕನ ಜೊತೆ ಮಹಿಳೆಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಪ್ರಶ್ನಿಸಿದ ಗಂಡನಿಗೆ ಆಕೆ ಬೆದರಿಕೆ ಹಾಕಿದ್ದಾಳೆ. ಕಳೆದ ಏಳು ವರ್ಷಗಳಿಂದಲೂ ತನ್ನ ಬಾಯಿ ಮುಚ್ಚಿಸಲು ಆಕೆ ಈ ರೀತಿ ಬೆದರಿಕೆ ಹಾಕುತ್ತಿರುವುದಾಗಿ ಆಕೆಯ ಗಂಡ ಆರೋಪಿಸಿದ್ದಾನೆ.
ಇದನ್ನೂ ಓದಿ: Jaguar Crash: ಫೈಟರ್ ಜೆಟ್ ಪತನ- ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದ ಪೈಲಟ್‌ನ ದುರಂತ ಅಂತ್ಯ!
ಮಧ್ಯಪ್ರದೇಶದ ಇಂದೋರ್ ನ ದೀಪಕ್ ಸಾಹು ಎಂಬಾತ 2019ರಲ್ಲಿ ಆರತಿ ಎಂಬಾಕೆಯನ್ನು ವಿವಾಹವಾಗಿದ್ದ. ಅವರಿಗೆ ಈಗ ಎಂಟು ವರ್ಷದ ಮಗನಿದ್ದಾನೆ. ಆದರೆ ಆಕೆ ಮನೆ ಮಾಲೀಕ ಸಚಿನ್ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ದೀಪಕ್ ದೂರಿದ್ದಾನೆ. ತನ್ನ ಅನೈತಿಕ ಸಂಬಂಧದ ಬಗ್ಗೆ ಸೋನಮ್ ಆಗಬೇಕು ಅಥವಾ ಮಿರತ್ ನ ಮುಸ್ಕಾನ್ ಆಗುತ್ತೇನೆ. 35 ತುಂಡು ಮಾಡಿ ನಿಮ್ಮನ್ನು ಡ್ರಮ್ ನಲ್ಲಿ ತುಂಬುತ್ತೇನೆ ಎನ್ನುವ ಬೆದರಿಕೆಯನ್ನು ತನ್ನ ಗಂಡನಿಗೆ ಹಾಕಿದ್ದಾಳೆ ಎಂದು ದೀಪಕ್ ದೂರಿನಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. ಪತ್ನಿಯಿಂದ ತನಗೆ ಮತ್ತು ತನ್ನ ಮಗನಿಗೆ ರಕ್ಷಣೆ ನೀಡುವಂತೆ ದೀಪಕ್ ಈಗ ಪೊಲೀಸರ ಮೊರೆ ಹೋಗಿದ್ದಾನೆ.