ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಟ್ರಾಫಿಕ್‍ನಿಂದ ಬೇಸತ್ತವರಿಗೆ ಇಲ್ಲಿದೆ ಸೂಪರ್‌ ಪರಿಹಾರ! ಏನಿದು ವೈರಲ್‌ ಪೋಸ್ಟ್‌?

ಬೆಂಗಳೂರಿನಲ್ಲಿ ಟ್ರಾಫಿಕ್‍ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬೆಂಗಳೂರು ನಿವಾಸಿಗಳಿಗೆ ದೊಡ್ಡ ತಲೆನೋವಾಗಿದೆ. ಆದರೆ ಟ್ರಾಫಿಕ್ ಜಾಮ್‍ನಿಂದ ನಿರಾಶೆಗೊಂಡು ಕಚೇರಿಗೆ ಹೋಗುವ ಒಬ್ಬರು ಇತ್ತೀಚೆಗೆ ಸರಳ ಆದರೆ ಪ್ರಾಯೋಗಿಕವಾದ ಸಲಹೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.

ಟ್ರಾಫಿಕ್‍ನಿಂದ ಬೇಸತ್ತಿದ್ದೀರಾ? ಈ ಟ್ರಿಕ್ಸ್‌ ಫಾಲೋ ಮಾಡಿ

Profile pavithra Jul 11, 2025 1:56 PM

ಬೆಂಗಳೂರು: ಬೆಂಗಳೂರು ದಿನದಿಂದ ದಿನಕ್ಕೆ, ಟ್ರಾಫಿಕ್ ಜಾಮ್(Traffic Jam) ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿರುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕರು ಹಲವಾರು ಸಲಹೆಗಳನ್ನು ನೀಡಿದ್ದರು. ಆದರೆ ಏನು ಪ್ರಯೋಜನವಾಗಲಿಲ್ಲ. ಆದರೆ ಇದೀಗ ಈ ಟ್ರಾಫಿಕ್ ಜಾಮ್‍ನಿಂದ ನಿರಾಶೆಗೊಂಡು ಕಚೇರಿಗೆ ಹೋಗುವ ಒಬ್ಬರು ಇತ್ತೀಚೆಗೆ ಸರಳ ಆದರೆ ಪ್ರಾಯೋಗಿಕ ಸಲಹೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲರ ಗಮನಸೆಳೆದು ವೈರಲ್(Viral News) ಆಗಿದೆ.

ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ವ್ಯಕ್ತಿ ಬೆಂಗಳೂರಿನ ನಿವಾಸಿಗಳಿಗೆ ನಿಮ್ಮ ವಾಹನವನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ನಡೆದುಕೊಂಡು ಹೋಗುವ ಸಲಹೆಯನ್ನು ನೀಡಿದ್ದಾರೆ. ಅವರ ಪ್ರಕಾರ, ಬೆಂಗಳೂರಿನಲ್ಲಿ ನಡೆಯುವುದು ವಾಸ್ತವವಾಗಿ ವಾಹನದಲ್ಲಿ ಹೋಗುವುದಕ್ಕಿಂತ ವೇಗವಾಗಿ ನಿಮ್ಮನ್ನು ಸ್ಥಳಕ್ಕೆ ತಲುಪಿಸಬಹುದು ಮತ್ತು ಇಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗುವಂತೆ ನಡೆಯಲು ಉತ್ತಮವಾಗಿದೆ ಎಂದಿದ್ದಾರೆ.

ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು, “ಆದರೆ ನಡೆಯಲು ಸ್ಥಳವಿದೆಯೇ?” ಎಂದು ಕೇಳಿದರೆ ಇದಕ್ಕೆ ಮತ್ತೊಬ್ಬರು "ಸುರಂಗ ಮಾರ್ಗವೊಂದೇ ಪರಿಹಾರ" ಎಂದು ಹಂಚಿಕೊಂಡಿದ್ದಾರೆ. "ಎಲ್ಲೆಡೆ ಸಂಚಾರ ಕೆಟ್ಟದಾಗಿದೆ. ಗೊರಗುಂಟೆಪಾಳ್ಯಕ್ಕೆ ಹೋಗುವ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್‍ನಿಂದಾಗಿ ಪ್ರತಿದಿನ 20 ನಿಮಿಷ ತಡವಾಗುತ್ತದೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಒಬ್ಬ ವ್ಯಕ್ತಿ, "ನಡೆಯಲು ಪಾದಚಾರಿ ಮಾರ್ಗ ಎಲ್ಲಿದೆ?" ಎಂದು ಕೇಳಿದ್ದಾರೆ. "ಪಾದಚಾರಿ ಮಾರ್ಗವಿಲ್ಲದಿದ್ದರೆ, ಸುರಂಗವನ್ನು ಅಗೆಯಲು ಪ್ರಾರಂಭಿಸಿ. ಸುರಂಗವು ಮುಂದಿನ ದಾರಿ" ಎಂದು ಮತ್ತೊಬ್ಬರು ಹೇಳಿದ್ದಾರೆ. "ನಡೆಯಲು ಯಾವುದೇ ಪಾದಚಾರಿ ಮಾರ್ಗವಿಲ್ಲ. ಅದು ಎಲ್ಲೆಲ್ಲಿ ಲಭ್ಯವಿದೆಯೋ ಅಲ್ಲೆಲ್ಲಾ ಬೀದಿ ವ್ಯಾಪಾರಿಗಳು ಅದನ್ನು ಅತಿಕ್ರಮಿಸಿದ್ದಾರೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡ ಸಂಚಾರ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಅವರು, ಪ್ರಪಂಚದಾದ್ಯಂತದ ಪ್ರತಿಯೊಂದು ಪ್ರಮುಖ ಮಹಾನಗರವು ಸಂಚಾರ ಸಮಸ್ಯೆಯನ್ನು ಎದುರಿಸುತ್ತದೆ. ಏಕೆಂದರೆ, ಈ ನಗರಗಳು ಉದ್ಯೋಗಕ್ಕೆ ಆಕರ್ಷಕ ಸ್ಥಳಗಳಾಗಿವೆ. ಬೆಂಗಳೂರಿನ ವಿಷಯವೇನೆಂದರೆ, ಇಲ್ಲಿ ಅತಿ ಹೆಚ್ಚು ವಾಹನಗಳಿವೆ. ಇದು 1000 ಜನಸಂಖ್ಯೆ ಇದ್ದರೆ 872 ವಾಹನಗಳೇ ಇವೆ. ಆದ್ದರಿಂದ, ನಮ್ಮಲ್ಲಿ 1.5 ಕೋಟಿ ಜನಸಂಖ್ಯೆ ಇದ್ದು, 1.23 ಕೋಟಿ ವಾಹನ ಜನಸಂಖ್ಯೆ ಇದೆ.

ಈ ಸುದ್ದಿಯನ್ನೂ ಓದಿ:Viral Video: ಕೈಯಲ್ಲಿ ಬಂದೂಕು ಹಿಡಿದು ನಡುರಸ್ತೆಯಲ್ಲಿ ಕುಣಿದ ಮಹಿಳೆ; ಕೊನೆಗೆ ಆಗಿದ್ದೇನು?

ಹಿಂದೆ, ಬೆಂಗಳೂರು ನಗರದಲ್ಲಿ ಸಾಕಷ್ಟು ಸಾರ್ವಜನಿಕ ಸಾರಿಗೆ ಇರಲಿಲ್ಲ. ಮೆಟ್ರೋ ಶುರುವಾಗುವ ಮೊದಲು, ಜನರಿಗೆ ಬಿಎಂಟಿಸಿ ಬಸ್‌ಗಳು ಮಾತ್ರ ಇದ್ದವು. ಕೋಲ್ಕತ್ತಾದಂತಹ ಇತರ ನಗರಗಳಲ್ಲಿ ಟ್ರಾಮ್‌ಗಳು ಇದ್ದವು, ದೆಹಲಿಯಲ್ಲಿ ವರ್ಷಗಳ ಕಾಲ ಮೆಟ್ರೋ ಇತ್ತು ಮತ್ತು ಮುಂಬೈನಲ್ಲಿ ಸ್ಥಳೀಯ ರೈಲುಗಳು ಇದ್ದವು. ಆದರೆ ಬೆಂಗಳೂರಿನಲ್ಲಿ ಅಂತಹ ಸೇವೆಗಳು ಇರಲಿಲ್ಲ, ಇದು ಸಂಚಾರ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಿತು ಎಂದು ಅವರು ಹೇಳಿದ್ದಾರೆ.