ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shantanu Naidu: ರತನ್‌ ಟಾಟಾ ಆಪ್ತ ಶಾಂತನು ನಾಯ್ಡುಗೆ ಸಿಕ್ತು ವಿಶೇಷ ಗೌರವ!

ರತನ್ ಟಾಟಾರ ಆಪ್ತರಾಗಿದ್ದ ಶಂತನು ನಾಯ್ಡು ಅವರಿಗೆ ವಿಕಸಿತ ಭಾರತ 2047 – ಗೂಗಲ್ ಫಾರ್ ಎಜುಕೇಶನ್ ಸಮ್ಮಿಟ್‌ನಲ್ಲಿ ‘ಸಾಮಾಜಿಕ ಪ್ರಭಾವದ ನಾಯಕ 2025’ ಎಂಬ ಗೌರವವನ್ನು ನೀಡಲಾಗಿದೆ. ಭಾರತದಾದ್ಯಂತ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವವರನ್ನು ಗೌರವಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರತನ್ ಟಾಟಾ ಆಪ್ತ ಸ್ನೇಹಿತನಿಗೆ ಸಿಕ್ಕಿತು ವಿಶೇಷ ಗೌರವ

ಶಾಂತನು ನಾಯ್ಡು

Profile Sushmitha Jain Jul 11, 2025 10:13 PM

ನವದೆಹಲಿ: ರತನ್ ಟಾಟಾರ (Ratan Tata) ಆಪ್ತರಾಗಿದ್ದ ಶಾಂತನು ನಾಯ್ಡು (Shantanu Naidu) ಅವರಿಗೆ ವಿಕಸಿತ ಭಾರತ 2047 – ಗೂಗಲ್ ಫಾರ್ ಎಜುಕೇಶನ್ ಸಮ್ಮಿಟ್‌ನಲ್ಲಿ ‘ಸಾಮಾಜಿಕ ಪ್ರಭಾವದ ನಾಯಕ 2025’ (Social Impact Leader of the Year) ಎಂಬ ಗೌರವವನ್ನು ನೀಡಲಾಗಿದೆ. ಭಾರತದಾದ್ಯಂತ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವವರನ್ನು ಗೌರವಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

“ಚಿಕ್ಕ ಪ್ರಶಸ್ತಿ, ಅಮ್ಮನೊಂದಿಗೆ ಹೋಗಿ, ಸ್ಫೂರ್ತಿದಾಯಕ ಸ್ನೇಹಿತರನ್ನು ಭೇಟಿಯಾದೆ” ಎಂದು ಶಾಂತನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು, ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಅಮನ್ ಗುಪ್ತಾ, ಸುನೀಲ್ ಶೆಟ್ಟಿ, ಮತ್ತು ರಾಜ್ ಶಮಾನಿ ಜೊತೆಗೆ ಕಾಣಿಸಿಕೊಂಡಿದ್ದು, ಭಾರತದಲ್ಲಿ ಶಾಲಾ ಮಟ್ಟದ ಉದ್ಯಮಶೀಲತೆಯ ಉದಯವನ್ನು ಎತ್ತಿ ತೋರಿದರು.

“ಶಾಲಾ ಉದ್ಯಮಿಗಳಿಗೆ ಭಾರತದಲ್ಲಿ ಇಷ್ಟು ಉತ್ಸಾಹವಿರುತ್ತದೆ ಎಂದು ಭಾವಿಸಿರಲಿಲ್ಲ. ಇಲ್ಲಿ ಕೆಲವರು ಕೆಲಸಕ್ಕಿಳಿಯಲು ತಯಾರಾಗಿದ್ದಾರೆ” ಎಂದು ಅವರು ಹೇಳಿದರು. ಈ ಪೋಸ್ಟ್ ಶೀಘ್ರವೇ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಶಂತನು ಅವರನ್ನು ಹಾಡಿ ಹೊಗಳಿದ್ದಾರೆ.

ಈ ಸುದ್ದಿಯನ್ನೂ ಓದಿ: Ratan Tata: ರತನ್ ಟಾಟಾ ಬಿಟ್ಟು ಹೋದ 3,800 ಕೋಟಿ ರೂ. ಆಸ್ತಿ ಹಂಚಿಕೆ ವಿವರ ಬಹಿರಂಗ

ಒಬ್ಬ ನೆಟ್ಟಿಗ, “ನೀವು ಇದಕ್ಕೆ ಯೋಗ್ಯರು. ಹೆಮ್ಮೆಯಾಗಗುತ್ತಿದೆ, ಶುಭಾಶಯಗಳು. ಅಮ್ಮನೊಂದಿಗಿರುವ ಈ ಕ್ಷಣ ಇನ್ನಷ್ಟು ಸಿಹಿಯಾಗಿದೆ; ಆಕೆಗೆ ಖಂಡಿತಾ ಗರ್ವವಿರಲಿದೆ” ಎಂದು ಬರೆದಿದ್ದಾರೆ. “ನಿಮ್ಮ ಉತ್ತಮ ಭಾರತದ ಕನಸು ನಿಜಕ್ಕೂ ಸ್ಫೂರ್ತಿದಾಯಕ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. “ಚೆನ್ನಾಗಿ ಮಾಡಿದ್ದೀರಿ! ನಮಗೆ ಯುವ ಜನರಿಂದ ಇನ್ನಷ್ಟು ನಾಯಕತ್ವ ಬೇಕು” ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಶಾಂತನು ನಾಯ್ಡು, ರತನ್ ಟಾಟಾ ಜತೆ ಉತ್ತಮ ಸಂಬಂಧ ಹೊಂದಿದ್ದರಿಂದ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಯುವ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಅವರ ಕೆಲಸವು ಭಾರತದ ಭವಿಷ್ಯಕ್ಕೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಈ ಪ್ರಶಸ್ತಿಯು ಶಂತನು ಅವರ ಸಮಾಜಮುಖಿ ಚಿಂತನೆ ಮತ್ತು ಶಾಲಾ ಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಅವರ ಪ್ರಯತ್ನಗಳಿಗೆ ಸಂದ ಗೌರವವಾಗಿದೆ.