ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈ ಟ್ಯಾಕ್ಸಿಯಲ್ಲಿದೆ ವಿಶಿಷ್ಟ ಕೂಲಿಂಗ್‌ ವ್ಯವಸ್ಥೆ; ಸಖತ್‌ ಕೂಲ್‌ ಮಗಾ! ಎಂದ ನೆಟ್ಟಿಗರು

ಅಫ್ಘಾನಿಸ್ತಾನದಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದಾಗಿ ಕಂದಹಾರ್‌ನ ಬ್ಲೂ ಟ್ಯಾಕ್ಸಿ ಚಾಲಕರು ತಮ್ಮ ಪ್ರಯಾಣಿಕರನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಕೈಯಿಂದ ಮಾಡಿದ ಕೂಲಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದಾರೆ. ಬ್ಲೂ ಟ್ಯಾಕ್ಸಿಗಳು ಈಗ ಛಾವಣಿಯ ಮೇಲೆ ಕೂಲಿಂಗ್‌ ವ್ಯವಸ್ಥೆ ಮಾಡಿವೆ.

ಸೆಕೆಯಿಂದ ಪಾರಾಗಲು ಈ ಟ್ಯಾಕ್ಸಿ ಚಾಲಕ ಮಾಡಿದ ಐಡಿಯಾಕ್ಕೆ ನೆಟ್ಟಿಗರು ಫಿದಾ

Profile pavithra Jul 11, 2025 1:22 PM

ಕಾಬೂಲ್: ಸಾಮಾನ್ಯವಾಗಿ ನಾವು ನೋಡಿರುವಂತೆ ಕೆಲವೊಂದು ವಾಹನಗಳಲ್ಲಿ ಎಸಿ ಇರುತ್ತದೆ. ಆದರೆ ಕೆಲವೊಂದು ವಾಹನಗಳಲ್ಲಿ ಎಸಿಯ ವ್ಯವಸ್ಥೆ ಇರುವುದಿಲ್ಲ. ಅಂತಹ ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ವಲ್ಪ ಅನಾನುಕೂಲವಾಗಬಹುದು. ಹಾಗಾಗಿ ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದಾಗಿ ಕಂದಹಾರ್‌ನ ಬ್ಲೂ ಟ್ಯಾಕ್ಸಿ ಚಾಲಕರು ತಮ್ಮ ಪ್ರಯಾಣಿಕರನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಒಂದು ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇಲ್ಲಿನ ಬ್ಲೂ ಟ್ಯಾಕ್ಸಿಗಳ ಛಾವಣಿಯ ಮೇಲೆ ಈಗ ಕೈಯಿಂದ ಮಾಡಿದ ಕೂಲಿಂಗ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಚಾಲಕ ಮತ್ತು ಪ್ರಯಾಣಿಕರು ಬಿಸಿಲಿನ ಬೇಗೆಯಿಂದ ಪಾರಾಗುತ್ತಿದ್ದಾರೆ. ಈ ಸುದ್ದಿ ಈಗ ವೈರಲ್‌ (Viral News) ಅಗಿದೆ.

ಕಂದಹಾರ್‌ನಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದು, ಟ್ಯಾಕ್ಸಿ ಚಾಲಕರು ಶಾಖವನ್ನು ತಣಿಸಲು ತಮ್ಮ ವಾಹನದಲ್ಲಿ ಕೈಯಿಂದ ಮಾಡಿದ ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ವರದಿಯ ಪ್ರಕಾರ, ಟ್ಯಾಕ್ಸಿ ಚಾಲಕ ಗುಲ್ ಮೊಹಮ್ಮದ್ ಕೆಲವು ವರ್ಷಗಳ ಹಿಂದೆ ಸೆಕೆಯನ್ನು ತಾಳಲಾರದೆ ತಂತ್ರಜ್ಞರಿಂದ ತಯಾರಿಸಿದ ವಿಶೇಷ ಕೂಲರ್ ಅನ್ನು ಪಡೆದುಕೊಂಡಿದ್ದಾನೆ. ಟ್ಯಾಕ್ಸಿಯ ಬ್ಯಾಟರಿಗೆ ಸಂಪರ್ಕಗೊಂಡಿರುವ ಮತ್ತು ನಿಯಮಿತವಾಗಿ ನೀರಿನಿಂದ ತುಂಬಿಸಲಾಗುವ ವಿಶಿಷ್ಟ ಹವಾನಿಯಂತ್ರಣ ವ್ಯವಸ್ಥೆಗಾಗಿ ಆತ ಸುಮಾರು 3,000 ಅಫ್ಘಾನಿಗಳನ್ನು ($ 43) ಖರ್ಚು ಮಾಡಿದ್ದಾನಂತೆ. ಇತರ ವಾಹನ ಚಾಲಕರು ತಮ್ಮ ಟ್ಯಾಕ್ಸಿಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಸಹ ಅಳವಡಿಸಿದ್ದಾರೆ. ಇದರಿಂದ ಈ ಕೂಲಿಂಗ್ ವ್ಯವಸ್ಥೆಗಳಿಗೆ ವಿದ್ಯುತ್ ಒದಗಿಸಬಹುದು. ಮಾತ್ರವಲ್ಲ ಇದು ಎಸಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಎಸಿಗಳು ಮುಂಭಾಗವನ್ನು ಮಾತ್ರ ತಂಪಾಗಿಸುತ್ತವೆ. ಈ ಕೂಲರ್ ಎಲ್ಲೆಡೆ ಗಾಳಿಯನ್ನು ಹರಡುತ್ತದೆ ಎಂದು ಚಾಲಕ ತಿಳಿಸಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



21 ವರ್ಷದ ತಂತ್ರಜ್ಞ ಮುರ್ತಾಜಾ ಮಾತನಾಡಿ, ಕಳೆದ ಎರಡು-ಮೂರು ವರ್ಷಗಳಲ್ಲಿ ಟ್ಯಾಕ್ಸಿ ಚಾಲಕರ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ ಹೆಚ್ಚಿನ ಹಳೆಯ ಟ್ಯಾಕ್ಸಿಗಳು ಈಗಾಗಲೇ ಎಸಿಗಳನ್ನು ಹೊಂದಿಲ್ಲ. ಹಾಗಾಗಿ ಈ ಹೊಸ ಹವಾನಿಯಂತ್ರಣ ವ್ಯವಸ್ಥೆಯನ್ನು ಕಂಡುಹಿಡಿಯಲಾಗಿದೆ ಎಂದಿದ್ದಾನೆ.

ಈ ಸುದ್ದಿಯನ್ನೂ ಓದಿ:Viral Video: ಸೇತುವೆ ದಾಟಲು ಅಜ್ಜಿಯ ಸಾಹಸ ಕಂಡ ಜಿಲ್ಲಾಧಿಕಾರಿ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

ಅಫ್ಘಾನ್‌ ನಗರಗಳಲ್ಲಿ ಹೆಚ್ಚಾಗಿ ಹಳೆಯ ಮಾದರಿಯ ವಾಹನಗಳು ಕಂಡುಬರುತ್ತವೆ. ಇವನ್ನು ಹೆಚ್ಚಾಗಿ ನೆರೆಯ ರಾಷ್ಟ್ರಗಳಿಂದ ತರಲಾಗುತ್ತದೆ. ಹಾಗಾಗಿ ವಾಹನಗಳಲ್ಲಿ ಇಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಅಫ್ಘಾನಿಸ್ತಾನವು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೆಚ್ಚು ಗುರಿಯಾಗುತ್ತದೆ. ಇದು ವಿಶೇಷವಾಗಿ ಸೆಕೆಯಿಂದ ಹೆಚ್ಚು ಬಳಲುತ್ತದೆ.