ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaguar Crash: ಫೈಟರ್‌ ಜೆಟ್‌ ಪತನ- ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದ ಪೈಲಟ್‌ನ ದುರಂತ ಅಂತ್ಯ!

ತರಬೇತಿ ನಡೆಸುತ್ತಿದ್ದ ಜಾಗ್ವಾರ್ ಯುದ್ಧ ವಿಮಾನ (Jaguar fighter jet ) ಬುಧವಾರ ಮಧ್ಯಾಹ್ನ 1.25ಕ್ಕೆ ರಾಜಸ್ಥಾನದ ( Rajasthan) ಚುರು ಜಿಲ್ಲೆಯ (Churu district) ಭಾನೋಡಾ ಗ್ರಾಮದ ಬಳಿ ಪತನಗೊಂಡಿದ್ದು ( Jaguar Crash), ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಐಎಎಫ್ ಪೈಲಟ್ (IAF Pilot) ಸ್ಕ್ವಾಡ್ರನ್ ಲೀಡರ್ ಲೋಕೇಂದರ್ ಸಿಂಗ್ ಒಂದು ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದರು.

ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದ ಪೈಲಟ್‌ನ ದುರಂತ ಅಂತ್ಯ!

ನವದೆಹಲಿ: ತರಬೇತಿ ನಡೆಸುತ್ತಿದ್ದ ಜಾಗ್ವಾರ್ ಯುದ್ಧ ವಿಮಾನ (Jaguar fighter jet ) ಬುಧವಾರ ಮಧ್ಯಾಹ್ನ 1.25ಕ್ಕೆ ರಾಜಸ್ಥಾನದ ( Rajasthan) ಚುರು ಜಿಲ್ಲೆಯ (Churu district) ಭಾನೋಡಾ ಗ್ರಾಮದ ಬಳಿ ಪತನಗೊಂಡಿದ್ದು ( Jaguar Crash), ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಐಎಎಫ್ ಪೈಲಟ್ (IAF Pilot) ಸ್ಕ್ವಾಡ್ರನ್ ಲೀಡರ್ ಲೋಕೇಂದರ್ ಸಿಂಗ್ ಒಂದು ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದರು. ಅವರ ಮಡದಿ ಮಗುವಿನೊಂದಿಗೆ ತವರು ಮನೆಯಲ್ಲಿ ಇದ್ದಾರೆ. ಮೂವರು ಸಹೋದರರಲ್ಲಿ ಅತ್ಯಂತ ಕಿರಿಯರಾಗಿದ್ದ ಲೋಕೇಂದರ್ ಸಿಂಗ್ 2016ರಲ್ಲಿ ಭಾರತೀಯ ವಾಯುಪಡೆಗೆ ನಿಯೋಜನೆಗೊಂಡಿದ್ದರು.

ಚುರು ಬಳಿ ನಡೆದ ಜಾಗ್ವಾರ್ ಫೈಟರ್ ಜೆಟ್ ಅಪಘಾತದಲ್ಲಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್ ಲೋಕೇಂದರ್ ಸಿಂಗ್ ಅವರ ಪತ್ನಿ ಜೂನ್ 10ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನೊಂದಿಗೆ ತವರು ಮನೆಯಲ್ಲಿರುವ ಸಂತೋಷದಿಂದ ಇದ್ದ ಅವರ ಪತ್ನಿಗೆ ಪತಿಯ ಸಾವಿನ ಸುದ್ದಿ ಈಗ ಬರಸಿಡಿಲಿನಂತೆ ಬಂದೆರಗಿದೆ.

ಸ್ಕ್ವಾಡ್ರನ್ ಲೀಡರ್ ಲೋಕೇಂದರ್ ಸಿಂಗ್ ಹರಿಯಾಣದ ರೋಹ್ಟಕ್ ನಿವಾಸಿಯಾಗಿದ್ದಾರೆ. ಇವರು ಕೋವಿಡ್ ಸಮಯದಲ್ಲಿ ವಿವಾಹವಾಗಿದ್ದರು. ಲೋಕೇಂದರ್ ಸಿಂಗ್ ಅವರ ಮೂವರು ಸಹೋದರರಲ್ಲಿ ಕಿರಿಯರು. ಅವರ ಸಹೋದರ ಬಹುರಾಷ್ಟ್ರೀಯ ಕಂಪೆನಿಯಲ್ಲಿ (MNC) ಕೆಲಸ ಮಾಡುತ್ತಿದ್ದರೆ, ಅವರ ಸಹೋದರಿ ಇತ್ತೀಚೆಗೆ ವಾಯುಪಡೆಯಲ್ಲಿ ಅಲ್ಪಾವಧಿಯ ಸೇವಾ ಅಧಿಕಾರಿಯಾಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.

ಚುರು ಬಳಿ ನಡೆದ ಜಾಗ್ವಾರ್ ಫೈಟರ್ ಜೆಟ್ ಪತನವು ಮಾರ್ಚ್ ಬಳಿಕ ನಡೆದ ಮೂರನೇ ಯುದ್ಧ ವಿಮಾನ ಪತನವಾಗಿದೆ. ಜಾಗ್ವಾರ್ ಯುದ್ಧ ವಿಮಾನ ಪತನಕ್ಕೆ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗಿದೆ.

ಭಾನೋಡಾ ಗ್ರಾಮದ ಬಳಿ ಯುದ್ಧ ವಿಮಾನ ಪತನಗೊಂಡ ಸ್ವಲ್ಪ ಸಮಯದ ಬಳಿಕ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸುಡುತ್ತಿರುವ ಅವಶೇಷಗಳನ್ನು ಪತ್ತೆ ಹಚ್ಚಿದರು. ಮಾಹಿತಿ ತಿಳಿದು ರಾಜಲ್ದೇಸರ್ ಮತ್ತು ರತನ್‌ಗಢ ಪೊಲೀಸ್ ಠಾಣೆಗಳ ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ಧಾವಿಸಿತ್ತು.



ಈ ಸುದ್ದಿಯನ್ನೂ ಓದಿ: Hina Rabbani Khar: ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕನಲ್ಲ ಎಂದ ಪಾಕ್ ಮಾಜಿ ಸಚಿವೆ ಹಿನಾ ರಬ್ಬಾನಿ ಖಾರ್

ಮಾರ್ಚ್ 7ರಂದು ಅಂಬಾಲಾ ವಾಯುನೆಲೆಯಿಂದ ಹಾರಿದ ಜಾಗ್ವಾರ್ ಫೈಟರ್ ಜೆಟ್ ಸ್ವಲ್ಪ ಸಮಯದ ಬಳಿಕ ಅಪಘಾತಕ್ಕೀಡಾಯಿತು. ಅಪಘಾತಕ್ಕೂ ಮುನ್ನ ಪೈಲಟ್ ವಿಮಾನವನ್ನು ಜನವಸತಿ ಪ್ರದೇಶದಿಂದ ದೂರಕ್ಕೆ ತಿರುಗಿಸಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರು. ಏಪ್ರಿಲ್ 2 ರಂದು ತಾಂತ್ರಿಕ ದೋಷದಿಂದ ಗುಜರಾತ್‌ನ ಜಾಮ್‌ನಗರ ಐಎಎಫ್ ನಿಲ್ದಾಣದ ಬಳಿಯ ಹಳ್ಳಿಯಲ್ಲಿ ಮತ್ತೊಂದು ಜಾಗ್ವಾರ್ ಜೆಟ್ ಪತನಗೊಂಡಿತ್ತು. ಇದರಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿದರೆ, ಇನ್ನೊಬ್ಬರು ಗಾಯಗೊಂಡಿದ್ದರು.

ಬ್ರಿಟಿಷ್-ಫ್ರೆಂಚ್ ಯುದ್ಧ ವಿಮಾನವಾಗಿರುವ ಜಾಗ್ವಾರ್ ಅನ್ನು ಮೊದಲ ಬಾರಿಗೆ ಬ್ರಿಟಿಷ್ ರಾಯಲ್ ಏರ್ ಫೋರ್ಸ್ ಮತ್ತು ಫ್ರೆಂಚ್ ಏರ್ ಫೋರ್ಸ್‌ನಲ್ಲಿ ನಿಯೋಜಿಸಲಾಗಿತ್ತು. 1968ರ ಸೆಪ್ಟೆಂಬರ್ 8ರಂದು ಜಾಗ್ವಾರ್‌ ಮೊದಲ ಹಾರಾಟ ನಡೆಸಿತ್ತು. ಭಾರತವು 116 ಜಾಗ್ವಾರ್‌ಗಳನ್ನು ಮೊದಲಿಗೆ ತನ್ನ ವಾಯುಪಡೆಗೆ ಸೇರಿಸಿಕೊಂಡಿದ್ದು, ಅವುಗಳಲ್ಲಿ 70 ದೇಶದಲ್ಲಿ ತಯಾರಿಸಲಾಗಿದೆ.