Tanvi The Great: ಅನುಪಮ್ ಖೇರ್ ನಿರ್ದೇಶನದ ತನ್ವಿ: ದಿ ಗ್ರೇಟ್ ಚಿತ್ರ ರಾಷ್ಟ್ರಪತಿ ವೀಕ್ಷಣೆಗೆ ಸಿದ್ದ!
ಇತ್ತೀಚೆಗಷ್ಟೇ ತನ್ವಿ: ದಿ ಗ್ರೇಟ್’ ಸಿನಿಮಾದ ಪ್ರೀಮಿಯರ್ ಶೋ ವನ್ನು ಸೈನ್ಯಾಧಿಕಾರಿಗಳು ಹಾಗೂ ಸೈನಿಕರ ಕುಟುಂಬಕ್ಕಾಗಿ ಆಯೋಜನೆ ಮಾಡಲಾಗಿದ್ದು, ಸಿನಿಮಾ ನೋಡಿ ಕೊಂಡಾಡಿದ್ದಾರೆ. ಇದೀಗ ಇದೇ ಚಿತ್ರವನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೀಕ್ಷಿಸಲಿದ್ದು ಚಿತ್ರ ತಂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದೆ.


ನವದೆಹಲಿ: ಬಾಲಿವುಡ್ನ ಖ್ಯಾತ ಮತ್ತು ಹಿರಿಯ ನಟ ಅನುಪಮ್ ಖೇರ್ ‘ತನ್ವಿ: ದಿ ಗ್ರೇಟ್’ (Tanvi The Great) ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಅನುಪಮ್ ಖೇರ್ ಸ್ಟುಡಿ ಯೋಸ್ ಮತ್ತು ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (NFDC) ನಿರ್ಮಿಸಿದ್ದು ಜುಲೈ 18 ರಂದು ಚಿತ್ರ ವಿಶ್ವದಾದ್ಯಾಂತ ಬಿಡುಗಡೆಗೊಳ್ಳಲಿದೆ. ಇತ್ತೀಚೆಗಷ್ಟೇ ತನ್ವಿ: ದಿ ಗ್ರೇಟ್’ ಸಿನಿಮಾದ ಪ್ರೀಮಿಯರ್ ಶೋ ವನ್ನು ಸೈನ್ಯಾಧಿಕಾರಿಗಳು ಹಾಗೂ ಸೈನಿಕರ ಕುಟುಂಬಕ್ಕಾಗಿ ಆಯೋಜನೆ ಮಾಡಲಾಗಿದ್ದು ಸಿನಿಮಾ ನೋಡಿ ಕೊಂಡಾಡಿದ್ದಾರೆ. ಇದೀಗ ಇದೇ ಚಿತ್ರವನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೀಕ್ಷಿಸಲಿದ್ದು ಚಿತ್ರ ತಂಡ ಈ ಬಗ್ಗೆ ಸಂತಸ ವ್ಯಕ್ತ ಪಡಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ ಭವನದಲ್ಲಿ ತನ್ವಿ: ದಿ ಗ್ರೇಟ್ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ಶನಿವಾರ ದ್ರೌಪದಿ ಮುರ್ಮುಈ ಸಿನಿಮಾ ವೀಕ್ಷಿಸ ಲಿದ್ದಾರೆ. ಈ ಖುಷಿ ವಿಚಾರ ಹಂಚಿಕೊಂಡ ಅನುಪಮ್ ಖೇರ್ ಈ ಬಗ್ಗೆ ನಾವು ಅತ್ಯಂತ ಉತ್ಸಾಹ ದಲ್ಲಿದ್ದೇವೆ..ದ್ರೌಪದಿ ಮುರ್ಮು ಅವರು ಈ ಸಿನಿಮಾ ವೀಕ್ಷಿಸಲಿರುವುದು ಅತ್ಯಂತ ಗೌರವದ ಕ್ಷಣ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ಚಿತ್ರದ ಈ ವಿಶೇಷ ಪ್ರದರ್ಶನದಲ್ಲಿ ತಾನ್ವಿ ಪಾತ್ರದಲ್ಲಿ ಅಭಿನಯಿಸಿ ರುವ ನಟಿ ಶುಭಾಂಗಿ , ಕರಣ್ ಟ್ಯಾಕರ್, ಬೋಮನ್ ಇರಾನಿ, ಜೊತೆಗೆ ಸಹ ಲೇಖಕರಾದ ಅಂಕುರ್ ಹಾಗೂ ಸಿನಿ ತಂಡದವರು ಭಾಗಿಯಾಗಲಿದ್ದಾರೆ.
ಆಟಿಸ್ಟಿಕ್ ಯುವತಿಯೊಬ್ಬಾಕೆ ಭಾರತೀಯ ಸೇನೆ ಸೇರುವ ಕತೆಯನ್ನು ಈ ಸಿನಿಮಾ ಹೊಂದಿದೆ. ಆಟಿಸ್ಟಿಕ್ ಯುವತಿ, ತನ್ನ ತಂದೆಯ ಕನಸನ್ನು ಈಡೇರಿಸಲು ಹಲವು ಅಡೆತಡೆ ಗಳನ್ನು ದಾಟಿ ಸೈನ್ಯಕ್ಕೆ ಸೇರಲು ಮುಂದಾಗುವ ಕತೆ ಇದರಲ್ಲಿದೆ.' ತನ್ವಿ ದಿ ಗ್ರೇಟ್’ ಸಿನಿಮಾದ ಪ್ರಮುಖ ಪಾತ್ರವಾದ ಆಟಿಸ್ಟಿಕ್ ಯುವತಿಯ ಪಾತ್ರದಲ್ಲಿ ಶುಭಾಂಗಿ ನಟಿಸಿದ್ದಾರೆ. ಆಟಿಸ್ಟಿಕ್ ಯುವತಿಯ ತಾತನ ಪಾತ್ರ ದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಜಾಕಿ ಶ್ರಾಫ್, ಅರವಿಂದ್ ಸ್ವಾಮಿ, ಪಲ್ಲವಿ ಜೋಶಿ, ಸೇರಿದಂತೆ ಭಾರತದ ಹಾಗೂ ಅಂತಾರಾಷ್ಟ್ರೀಯ ಕಲಾವಿದರು ಇದ್ದಾರೆ. ಸಿನಿಮಾ ಜುಲೈ 18 ರಂದು ಬಿಡುಗಡೆ ಆಗಲಿದೆ.