UP Horror: ಹಣ, ಆಭರಣ ಹಿಂದಿರುಗಿಸಲು ಕೇಳಿದ ಮಾಜಿ ಗೆಳೆಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಹಿಳೆ!
ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಸಮಯದಲ್ಲಿ ನೀಡಿದ್ದ ನಗದು ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಕ್ಕಾಗಿ ಮಾಜಿ ಗೆಳಯನಿಗೆ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುವತಿ ಹಾಗೂ ಆಕೆಯ ಗೆಳೆಯರು ವ್ಯಕ್ತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ವಿಷ ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ

ಲಖನೌ: ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಸಮಯದಲ್ಲಿ ನೀಡಿದ್ದ ನಗದು ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಕ್ಕಾಗಿ ಮಾಜಿ ಗೆಳಯನಿಗೆ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುವತಿ ಹಾಗೂ ಆಕೆಯ ಗೆಳೆಯರು ವ್ಯಕ್ತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ವಿಷ ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ವ್ಯಕ್ತಿಯನ್ನು ಉತ್ತರ ಪ್ರದೇಶದ (UP Horror) ಹಮೀರ್‌ಪುರದ ನಿವಾಸಿ ಶೈಲೇಂದ್ರ ಗುಪ್ತಾ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಶೈಲೇಂದ್ರ ಗುಪ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶೈಲೇಂದ್ರ ಗುಪ್ತಾ, ಮಹೋಬಾದ ಖಾಸಗಿ ಕಂಪನಿಯೊಂದರಲ್ಲಿ ವೈದ್ಯಕೀಯ ಪ್ರತಿನಿಧಿ (MR) ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ನಾಲ್ಕು ವರ್ಷಗಳ ಹಿಂದೆ ಕಾಲಿಪಹರಿ ಗ್ರಾಮದ ಮಹಿಳೆಯನ್ನು ಭೇಟಿಯಾಗಿದ್ದರು. ಅವರ ಸ್ನೇಹವು ಶೀಘ್ರದಲ್ಲೇ ಪ್ರೀತಿಗೆ ತಿರುಗಿತ್ತು. ಈ ಜೋಡಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು ಎಂದು ತಿಳಿದು ಬಂದಿದೆ. ಶೈಲೇಂದ್ರ ತನ್ನ ಗೆಳತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ಆಭರಣಗಳು ಹಾಗೂ ಸುಮಾರು 4 ಲಕ್ಷ ರೂ ನಗದನ್ನು ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಆಕೆಗೆ ಬೇರೊಂದು ವ್ಯಕ್ತಿಯ ಜೊತೆ ಸಂಬಂಧವಿತ್ತು ಎಂದು ಶೈಲೇಂದ್ರನಿಗೆ ತಿಳಿದು ಬಂದಿತ್ತು. ಹೀಗಾಗಿ ಶೈಲೇಂದ್ರ ತಾನು ಕೊಟ್ಟಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಮಹಿಳೆಗೆ ಒತ್ತಾಯಿಸಿದಾಗ ಇಬ್ಬರ ನಡುವೆ ಜಗಳ ಪ್ರಾರಂಭವಾಗಿತ್ತು.
ಈ ಸುದ್ದಿಯನ್ನೂ ಓದಿ: Punjab Shootout : ಪಂಜಾಬ್ ಶಿವಸೇನಾ ನಾಯಕನ ಹತ್ಯೆ ಪ್ರಕರಣ; ಕೊಲೆಗೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಶೈಲೇಂದ್ರ ಆಕೆಯ ಮನೆಗೂ ಹೋಗಿ ಹಣ ವಾಪಾಸು ಮಾಡುವಂತೆ ಕೇಳಿದ್ದ. ಮಹಿಳೆ ತನ್ನ ಸ್ನೇಹಿತರಾದ ಸದಾಬ್ ಬೇಗ್, ದೀಪಕ್ ಮತ್ತು ಹ್ಯಾಪಿ ಅವರೊಂದಿಗೆ ಸೇರಿ ಶೈಲೇಂದ್ರ ಮೇಲೆ ಹಲ್ಲೆ ನಡೆಸಿದ್ದಾಳೆ ಹಾಗೂ ಬಲವಂತವಾಗಿ ಅವರಿಗೆ ವಿಷ ಕುಡಿಸಿದ್ದಾರೆ. ಸದ್ಯ ಶೈಲೇಂದ್ರ ಸ್ಥಿತಿ ಗಂಭೀರವಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೈಲೇಂದ್ರ ತನ್ನ ಮಾಜಿ ಸಂಗಾತಿ ಮತ್ತು ಆಕೆಯ ಸಹಚರರ ವಿರುದ್ಧ ದೂರು ನೀಡದ್ದು, ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.