Sunday, 12th May 2024

ಬಡಗುತಿಟ್ಟು ಯಕ್ಷಗಾನ ರಂಗದ ವೇಷಧಾರಿ ಅನಂತ ಕುಲಾಲ್ ನಿಧನ

ಕುಂದಾಪುರ: ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷಧಾರಿ ಅನಂತ ಕುಲಾಲ್(66) ಅವರು ಮಂಗಳವಾರ ತಡರಾತ್ರಿ ಮೊಳಹಳ್ಳಿಯ ನಿವಾಸದಲ್ಲಿ ನಿಧನರಾದರು.

ಐದು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಗೆಜ್ಜೆ ಸೇವೆ ಮಾಡಿ, ಪ್ರಸಿದ್ಧ ಮಾರಣಕಟ್ಟೆ ಕ್ಷೇತ್ರದ ಬಯಲಾಟ ಮೇಳಗಳಲ್ಲೇ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಕಳೆದ ಆರು ತಿಂಗಳಿನಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಅಮೃತೇಶ್ವರಿ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ ಮೇಳಗಳಲ್ಲೂ ಕಲಾಸೇವೆಗೈದಿದ್ದರು. ‘ಯಕ್ಷಗಾನ ಕಲಾರಂಗ ಪ್ರಶಸ್ತಿ’, ಎಮ್. ಎಮ್. ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿ ದ್ದರು.

ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ. ಅನಂತ್ ಕುಲಾಲ್ ನಿಧನಕ್ಕೆ ಗಣ್ಯರು, ಸಹಕಲಾವಿದರು ಸೇರಿದಂತೆ ಅಪಾರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!