Monday, 13th May 2024

ಜಿ20 ಗ್ಲೋಬಲ್ ಸ್ಮಾರ್ಟ್ ಸಿಟಿ ಅಲಯನ್ಸ್: ಬೆಂಗಳೂರು ಆಯ್ಕೆ

ಬೆಂಗಳೂರು: ಆಧುನಿಕ ತಂತ್ರಜ್ಞಾನದ ಮೂಲಕ ರಸ್ತೆ ಪ್ರಯಾಣವನ್ನು ಸುರಕ್ಷಿತಗೊಳಿಸುವ ಜಾಗತಿಕ ಮಟ್ಟದ ಯೋಜನೆಗೆ ಬೆಂಗಳೂರು, ಹೈದರಾಬಾದ್, ಇಂದೋರ್, ಫರೀದಾಬಾದನ್ನು ಆಯ್ಕೆ ಮಾಡಲಾಗಿದೆ.

ಈ ಮೂಲಕ ಜಗತ್ತಿನ 36 ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರ್ಪಡೆಗೊಂಡಂತಾಗಿದೆ. ಮಾಸ್ಕೊ, ಲಂಡನ್, ಟೊರೊಂಟೊ, ಬ್ರೆಸಿಲಿಯಾ, ಮೆಲ್ಬೋರ್ನ್, ದುಬೈ ನಗರಗಳು ಇದರಲ್ಲಿ ಸೇರಿವೆ.

ವಿಶ್ವ ಆರ್ಥಿಕ ವೇದಿಕೆ 22 ದೇಶಗಳ 36 ನಗರಗಳನ್ನು ಯೋಜನೆಗೆ ಆಯ್ಕೆ ಮಾಡಿದೆ. ಬೆಳೆಯುತ್ತಿರುವ ನಗರಗಳು ಅಸ್ತಿತ್ವ ಉಳಿಸಿ ಕೊಳ್ಳಲು ಹೋರಾಡುತ್ತಿವೆ. ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಜಿ20 ಗ್ಲೋಬಲ್ ಸ್ಮಾರ್ಟ್ ಸಿಟಿ ಅಲಯನ್ಸ್ ನ ಭಾಗವಾಗಿ ಜಾಗತಿಕ ಮಟ್ಟದ ಈ ಯೋಜನೆಯಲ್ಲಿ ಭಾರತದ 4 ನಗರಗಳು ಆಯ್ಕೆಯಾಗಿವೆ.

ಖಾಸಗೀಕರಣದ ರಕ್ಷಣೆ, ನಿರ್ವಹಣೆ, ಆಧುನಿಕ ಸೈಬರ್ ತಂತ್ರಜ್ಞಾನದ ಮೂಲಕ ವಿಶೇಷ ಚೇತನರಿಗೆ ಉತ್ತಮ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಯೋಜನೆ ನೆರವಾಗಲಿದೆ.

Leave a Reply

Your email address will not be published. Required fields are marked *

error: Content is protected !!