Sunday, 19th May 2024

5% ಜಿಎಸ್‌ಟಿ ಹೇರಿಕೆ: ಕೆಎಂಎಫ್‌ ಉತ್ಪನ್ನ ದರ ಹೆಚ್ಚಳ

ಬೆಂಗಳೂರು: ಕೇಂದ್ರ ಸರ್ಕಾರವು ಪ್ಯಾಕ್‌ ಮಾಡಿದ ಉತ್ಪನ್ನಗಳಾದ ಮಜ್ಜಿಗೆ, ಹಾಗೂ ಲಸ್ಸಿ ಮೇಲೆ 5% ಜಿಎಸ್‌ಟಿ ಹೇರಿರುವ ಹಿನ್ನೆಲೆಯಲ್ಲಿ ಇಂದಿನಿಂದ ಅನ್ವಯವಾಗುವಂತೆ ಕೆಎಂಎಫ್‌ ತನ್ನ ಉತ್ಪನ್ನಗಳಾದ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರಗಳಲ್ಲಿ ಹೆಚ್ಚಳವಾಗಿದೆ.

ಇಂದಿನಿಂದ ಅನ್ವಯವಾಗುವಂತೆ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಪ್ಯಾಕ್‌ಗಳ ದರ ಪರಿಷ್ಕರಿಸಲಾಗಿದೆ.

ಮೊಸರು 200 ಗ್ರಾ ರೂ.10 ರಿಂದ 12 ರೂ ಆಗಲಿದೆ. 500 ಗ್ರಾಮ, ರೂ.22 ರಿಂದ 24 ರೂ ಆಗಲಿದೆ. ಮಜ್ಜಿಗೆ ಸ್ಯಾಚೆ 200 ಮಿಲಿ ರೂ.7 ಇದ್ದದ್ದು 8 ರೂ ಆಗಲಿದೆ. ಟೆಟ್ರಾ ಪ್ಯಾಕ್ 10ರೂ ನಿಂದ 11 ರೂ ಗೆ ಏರಿಕೆಯಾಗಲಿದೆ. ಪೆಟ್ ಬಾಟಲ್ ರೂ.12 ರಿಂದ 13 ರೂ ಗೆ ಹೆಚ್ಚಳವಾಗಲಿದೆ.

ಲಸ್ಸಿ 200 ಮಿಲಿ ಸ್ಯಾಚೆಟ್ ರೂ.10ರಿಂದ 11 ಗೆ ಏರಿಕೆಯಾಗಲಿದೆ. ಟೆಟ್ರಾ ಪ್ಯಾಕ್ ಸಾದ ರೂ.20 ರಿಂದ 21, ಟೆಟ್ರಾ ಪ್ಯಾಕ್ ಮ್ಯಾಂಗೋ ರೂ.25 ರಿಂದ 27, ಪೆಟ್ ಬಾಟಲ್ ಸಾದ ರೂ.15 ರಿಂದ 16 ಹಾಗೂ ಪೆಟ್ ಬಾಟಲ್ ಮ್ಯಾಂಗೋ ರೂ.20 ರಿಂದ 21 ರೂಪಾಯಿ ಹೆಚ್ಚಳವಾಗಲಿದೆ.

ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದ್ದು, ಮುದ್ರಿತ ದರಗಳ ಪ್ಯಾಕಿಂಗ್ ಸಾಮಗ್ರಿ ಗಳ ದಾಸ್ತಾನು ಮುಗಿಯುವವರೆಗೆ ಇಂಕ್ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ.

error: Content is protected !!