Sunday, 26th May 2024

ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್ ಇನ್ನಿಲ್ಲ

ಬೆಂಗಳೂರು: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ,​ ಅತಿ ವಿಶಿಷ್ಟ ಸೇವಾ ಪದಕ ಮತ್ತು ಪರಮ ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತ ವಿ.ಎಂ. ಪಾಟೀಲ್(84) ಬೆಂಗಳೂರಿನಲ್ಲಿ ನಿಧನರಾದರು.

ಲೆಫ್ಟಿನೆಂಟ್​ ಜನರಲ್​ ವಿ.ಎಂ.ಪಾಟೀಲ್​ ಅವರು 1962ರ ಭಾರತ-ಚೀನಾ ಯುದ್ಧ ಮತ್ತು 1965ರ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಎರಡೂ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಮೊದಲ ರಕ್ಷಣಾ ಸಲಹೆಗಾರರಾಗಿದ್ದರು.

ಇರಾನ್​-ಇರಾಕ್​​ನಲ್ಲಿದ್ದ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ಗುಂಪಿನ ಕಮಾಂಡರ್​ ಕೂಡ ಆಗಿದ್ದರು. ಹಿರಿಯ ಸೇನಾಧಿಕಾರಿ ವಿ.ಎಂ. ಪಾಟೀಲ್ ನಿಧನಕ್ಕೆ ಆರ್​ಎಸ್​ಎಸ್​​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!