Sunday, 24th September 2023

ಯೋಧರಿಂದಲೇ ಧ್ವಜಾರೋಹಣ

ಬೆಳಗಾವಿ: ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮಸ್ಥರೆಲ್ಲ ಸೇರಿ ವಿಶೇಷವಾಗಿ ಸ್ವತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಣೆ ಮಾಡಿದ್ದಾರೆ.

ಚಿಕಾಲಗುಡ್ಡ ಗ್ರಾಮ ಸೇರಿದಂತೆ ಸಮೀಪದ ಯೋಧರನ್ನೆಲ್ಲ ಒಗ್ಗೂಡಿಸಿ ಯೋಧರಿಂದಲೇ ಧ್ವಜಾರೋಹಣ ಮಾಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

ಭಾರತೀಯ ವಾಯುಸೇನೆ, ನೌಕಾದಳ ಹಾಗೂ ಭೂ ಸೇನೆಯ ಹಾಲಿ ಹಾಗೂ ಮಾಜಿ ಯೋಧರಿಂದ ಧ್ವಜಾರೋಹಣ ನೆರವೇರಿಸಿ ಧ್ವಜಾರೋಹಣದ ಜೊತೆಗೆ ಯೋಧರಿಗೆ ಸನ್ಮಾನವನ್ನ ಗ್ರಾಮಸ್ಥರು ಮಾಡಿದ್ದಾರೆ.

error: Content is protected !!