Bus Service: ತಾರಕ ಗ್ರಾಮದವರೆಗೆ ಬಸ್ ಸಂಚಾರಕ್ಕಾಗಿ ಕೋರಿ ಮನವಿ
ನಗರದ ಎಲ್.ಐ.ಸಿ ವೃತ್ತದಿಂದ ಮೆರವಣಿಗೆ ಹೊರಟು ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ವಿಭಾಗೀಯ ಕಛೇರಿಯ ಮುಂಭಾಗ ಪ್ರತಿಭಟಿಸಿ ಅಧಿಕಾರಿ ಚೇತನ್ ಅವರಿಗೆ ಮನವಿ ಸಲ್ಲಿಸಲಾಯಿತು

ಹೆಗ್ಗಡದೇವನಕೋಟೆಯಿಂದ ನಾಗನಹಳ್ಳಿ ಮಾರ್ಗವಾಗಿ ತಾರಕ ಗ್ರಾಮದವರೆಗೆ ಬೆಳಗ್ಗೆ 7.30 ಸಂಜೆ 5.30 ಮತ್ತು ರಾತ್ರಿ 8 ಗಂಟೆಗೆ ಬಸ್ ಸಂಚಾರಕ್ಕಾಗಿ ಕೋರಿ ನಗರದ ಎಲ್.ಐ.ಸಿ ವೃತ್ತದಿಂದ ಮೆರವಣಿಗೆ ಹೊರಟು ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ವಿಭಾಗೀಯ ಕಛೇರಿಯ ಮುಂಭಾಗ ಪ್ರತಿಭಟಿಸಿ ಅಧಿಕಾರಿ ಚೇತನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರದಿಂದ ಬಸ್ ಕಳಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಧರಣಿಯನ್ನು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುನಿಲ್ ಟಿ ಆರ್ ಜಿಲ್ಲಾ ಕಾರ್ಯದರ್ಶಿ ಸುಮಾ, ಸಿಂಚನ ಹಿರೇಹಳ್ಳಿ ಗ್ರಾಮದ ಮುಖಂಡರುಗಳಾದ ಪುಟ್ಟೇಗೌಡ, ರಂಗರಾಜು ಸ್ವಾಮಿಗೌಡ ಕೃಷ್ಣೇಗೌಡ , ಯಜಮಾನ ಮಂಜು ಹಿರೇಹಳ್ಳಿ ಎ ವೆಂಕಟಸ್ವಾಮಿ, ಶಂಭು ಗೌಡ, ಉದಯ, ಅಂಬಿಕಾ, ಲಕ್ಷ್ಮಮ್ಮ , ಜಯಮ್ಮ ಮಲ್ಲಿಗಮ್ಮ, ಸುಧಾ, ಪುಟ್ಟಮ್ಮ, ಪದಮ್ಮ ಸೇರಿದಂತೆ ಈ ಭಾಗದ ಗ್ರಾಮಸ್ಥರು ಸೇರಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರೇಹಳ್ಳಿ ಬಿ ಗ್ರಾಮದ ಮುಖಂಡರಾದ ಪುಟ್ಟೇಗೌಡ "ಎಚ್ .ಡಿ ಕೋಟೆ ತಾಲೂಕಿನ ನಾಗನಹಳ್ಳಿ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹತ್ತಕ್ಕೂ ಹೆಚ್ಚು ಕಾಡಂಚಿನ ಗ್ರಾಮಗಳು ಹಾಗೂ ಆದಿವಾಸಿ ಹಾಡಿಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಜನ ಪ್ರಯಾಣಿಸುತ್ತಾರೆ.
ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಈ ಭಾಗದಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಿರುವುದರಿಂದ ಈ ಭಾಗದ ಜನರು ಆತಂಕದಿಂದ ಓಡಾಡುವ ಪರಿಸ್ಥಿತಿ ಇದೆ. ಈ ಹಿಂದೆ ಬೆಳಿಗ್ಗೆ 7.30 ಹಾಗೂ ಸಂಜೆ 5.30 ಹಾಗೂ ರಾತ್ರಿ 8 ಗಂಟೆಗೆ ಎಚ್.ಡಿ ಕೋಟೆ ಪಟ್ಟಣದಿಂದ ಸಂಚರಿಸುವಂತೆ ಬಸ್ ಅನ್ನು ಬಿಡಲು ಕೋರಿ ಎಚ್.ಡಿ ಕೋಟೆ KSRTC ಡಿಪೋಗೆ ಹಲವು ಬಾರಿ ಗಮನಕ್ಕೆ ತಂದರು ಸಹ ಸಮಸ್ಯೆ ಬಗೆಹರಿದಿಲ್ಲ.
ಇದರಿಂದಾಗಿ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ, ರೈತರಿಗೆ ತೊಂದರೆ ಯಾಗುತ್ತಿದ್ದು, ಈ ಕೂಡಲೇ ಸಮಸ್ಯೆ ಗಂಭೀರತೆಯನ್ನು ಅರಿತು ಬಸ್ ಸಂಚರಿಸಬೇಕೆಂದು ಈ ಭಾಗದ ಜನರು ತಮ್ಮಲ್ಲಿ ಆಗ್ರಹಿಸುತ್ತೇವೆ" ಎಂದರು.
ಇದನ್ನೂ ಓದಿ: #BusService